ಆವತ್ತು ಎಂದಿನಂತೆ ಆಫೀಸ್ ಮುಗಿಸಿ ಹೊರಟವಳಿಗೆ direct buss ಸಿಗದೇ ಬೇರೆ buss ಹತ್ತಿದ್ದೆ. ಸಣ್ಣ ಅಯಾಸದೊಂದಿಗೆ ಹಾಡು ಕೇಳುತ್ತಾ ಕಣ್ಣುಮುಚ್ಚಿ ಕುಳಿತವಳಿಗೆ bus ಎಲ್ಲಿ ಹೋಗುತ್ತಿದೆ ಅಂತ ಗೊತ್ತಿರಲಿಲ್ಲ. ಒಂದು ಕಡೆ bus ನಿಂತ ಅನುಭವವಾಗಿ ಕಣ್ ಬಿಟ್ಟರೆ, ಒಂದಿಷ್ಟು ಜನ ಇಳಿದಿದಿದ್ದು , ಹತ್ತಿದ್ದು ಕಾಣಿಸಿದ್ದು. ಹತ್ತಿ ಒಳಬಂದವರನ್ನು ನೋಡುತ್ತಿರುವಂತೆ ಕಂಡಿದ್ದು ನೀನು .!! ಹೌದಾ ? ಇದು ನಿಜವಾ ? ನೀನಾ ? ಅಂತ ಎರಡೆರಡು ಬಾರಿ ನೋಡಿಕೊಂಡೆ. ಹೌದು ಅದು ನೀನೆ ಅಂತ ಗೊತ್ತಾದಾಗ ಮನಸ್ಸು ಎಷ್ಟು ಕುಣಿದಿತ್ತು ಗೊತ್ತಾ ? ನನ್ನ ಎದುರು ಸೀಟ್ ನಲ್ಲಿಯೇ ಕುಳಿತು ನೀ ನನ್ನನ್ನು ನೋಡದೆ ನಿನ್ನ ಪಾಡಿಗೆ ಕುಳಿತಾಗ ಮಾತ್ರ ಎಲ್ಲಿಲ್ಲದ ಸಿಟ್ಟು ಬಂತು . ಆದರೆ ಯಾವಾಗ ನೀ ನನ್ನ ನೋಡಿದೆಯೋ ಆಗ ನಿನ್ನ ಮುಖದಲ್ಲಿನ expression ಇವತ್ತಿಗೂ ಮರೆಯಲು ಆಗೋಲ್ಲ. ಏನೋ ಒಂದು ಅಚಾನಕ್ ಆಗಿ ಸಿಕ್ಕ ಖುಷಿ ನಿನ್ನ ಕಣ್ಣಲ್ಲಿ ಕಂಡಿತ್ತು. ನಿನ್ನ ಕಣ್ಣಲ್ಲಿ ಖುಷಿ ಗೆ ನೀರು ಬರುವುದೊಂದು ಬಾಕಿ ಎನಿಸಿತ್ತು. ಈ ವರ್ಕೋ ಹಾಲಿಕ್ ಜಗತ್ತಿನಲ್ಲಿ ಎಲ್ಲವೂ ಪ್ಲಾನ್ ಪ್ರಕಾರವೇ ನಡೆಯಬೇಕಲ್ಲ. ಒಬ್ಬರಿಗೊಬ್ಬರು ಸಿಗುವುದಾದರೂ. ಆದರೆ ಏನೇ ಹೇಳು plan ಪ್ರಕಾರವೇ ಸಿಕ್ಕಿದ್ದರೂ ಇಷ್ಟು ಖುಷಿಯನ್ನು ನಿನ್ನ ಕಣ್ಣಲ್ಲಿ ನಾ ನೋಡುತ್ತಿರಲಿಲ್ಲ. ನವರಂಗ್ ಲ್ಲಿ ಇಳಿದ ತಕ್ಷಣ ಪಾನಿಪುರಿ ತಿನ್ನೋಣವಾ ಅಂತ ಕೇಳಿದವಳಿಗೆ ಬೇಡ ಎಂದರೆ , ಮದ್ಯಾಹ್ನ ಏನು ತಿಂದಿಲ್ಲ ಎಂದಾಗ ಮಾತ್ರ ಒಂದು ಗುದ್ದು ಕೊಡುವಷ್ಟು ಸಿಟ್ಟು ಬಂದಿತ್ತು. ಆದರೆ ನಿನ್ನ ಆ ಮುಖ ನೋಡಿದ್ರೆ ಅದ್ಯಾವನಿಗೆ ಹೊಡಿಯೋ ಮನಸ್ಸು ಬರುತ್ತೆ ಹೇಳು. ಬಹುಷಃ ಅದಕ್ಕೆ ನೀನು ಅಪ್ಪನ ಹತ್ತಿರ ಕೂಡ ಹೊಡೆತ ತಿಂದಿರಲಿಕ್ಕಿಲ್ಲ. ಪುಟ್ಟ ಮಗುವಂತೆ ಪಾರ್ಕ್ ನಲ್ಲಿ ಕೈ ಹಿಡಿದು ಕರೆದುಕೊಂಡು ಹೋಗಿ ಕೈ ಹಿಡಿದೇ ಕುಳಿತಿದ್ದು ತುಂಬಾ ಆಪ್ಯಾಯಮಾನವಾಗಿತ್ತು.ಎಷ್ಟೇ ಬೆಳೆದಿದ್ದೇವೆ ಎಂದುಕೊಂಡರೂ,ಇಬ್ಬರ ಪ್ರಪಂಚಗಳು ಎಷ್ಟೇ ದೊಡ್ದದ್ದಾಗಿದ್ದರೂ ನಮ್ಮ ಮಾತುಗಳು ಮಾತ್ರ ಯಾವತ್ತಿಗೂ ಆ ದಿನಗಳಿಗೆ ಮಾತ್ರ ಸೀಮಿತ ಅಲ್ಲವಾ. ಪುಟ್ಟ ಮಗುವಂತೆ ನೀ ಖುಷಿಯನ್ನು ವ್ಯಕ್ತ ಪಡಿಸುವಾಗ ನನಗೆ ಎಲ್ಲೋ ನಿನ್ನಂತೆ ಖುಷಿಯನ್ನು ಹೊರಹಾಕಲು ಬರುತ್ತಿಲ್ಲವೇನೋ ಅನಿಸಿದ್ದು ಸುಳ್ಳಲ್ಲ. ನಮ್ಮನೆಗೆ ಬಾ ಎಂದು ಮಗುವಂತೆ ಹಠ ಮಾಡುತ್ತಿದ್ದ ನಿನ್ನ , ಆ ನಿನ್ನ ಖುಷಿಯನ್ನ ಕದಡುವ ಮನಸ್ಸಾಗಲೇ ಇಲ್ಲ. ಅದಕ್ಕೆ ಪಿಜಿ, ಆಫೀಸ್ ಎಲ್ಲವನ್ನೂ ಮರೆತು ನಿನ್ನ ಜೊತೆ ಹೆಜ್ಜೆ ಹಾಕಿದ್ದು. ಮನೆಗೆ ಹೋದರೂ ಅಷ್ಟೇ, ನಾ ಬಂದ ಸಂಭ್ರಮ ನಿನ್ನ ಹೆಜ್ಜೆ ಹೆಜ್ಜೆಗಳಲ್ಲಿ ಗೊತ್ತಾಗುತ್ತಿತ್ತು. ಮನಸ್ಸು ನಿಜಕ್ಕೂ ಮೂಕ .. ಮೋಕ.. ನಾ ಮಾಡಿದ ಪ್ರಾಜೆಕ್ಟ್ ನಿನಗೆ ತೋರಿಸಲಾ ? ಎಂದು ಕೇಳಿದಾಗ ಏನೂ ಅರ್ಥವಾಗೋಲ್ಲ ಎಂದು ಗೊತ್ತಿದ್ದರೂ ಬೇಡ ಎನ್ನುವ ಮನಸ್ಸೇ ಬರಲಿಲ್ಲ ಕಣೆ. ಕಾರಣ ಇಷ್ಟೇ ನಿನ್ನ ಪಕ್ಕದಲ್ಲಿ ಕೂರಬೇಕಿತ್ತು. ನಿನ್ನ ಮಾತುಗಳನ್ನು ಕೇಳಬೇಕಿತ್ತು. ಒಂದು ವಿಷಯದಲ್ಲಿ ಆಳವಾಗಿ ಹೋಗಿ explain ಮಾಡುವ ನನ್ನ ಹೈಸ್ಕೂಲಿನ ಆಶಾ ನನಗೆ ಮತ್ತೆ ಬೇಕಿತ್ತು.
ರಾತ್ರಿ ಮಲಗುವ ಮನಸ್ಸಿರಲಿಲ್ಲ , ನಿನ್ನೊಂದಿಗಿನ ಮಾತುಗಳು ಎಂದಿಗಾದರೂ ಮುಗಿದಾವಾ? ಹೇಳು. ಆದರೆ ನಾಳೆಯ ಆಫೀಸ್ ಭೂತ ಇಬ್ಬರನ್ನೂ ಕಾಡುತ್ತಿದ್ದಕ್ಕೆ ನಾವು ಮಲಗಿದ್ದು. ಒಲ್ಲದ ಮನಸ್ಸಿನಿಂದಲೇ ಮುಸುಕೆಳೆದಿದ್ದು ಸುಳ್ಳಲ್ಲ ಅಲ್ಲವಾ... ಮರುದಿನ bus ಲ್ಲಿ ಎರಡೇ stop ಗೆ ನೀ bus change ಮಾಡಬೇಕೆಂದು ಹೇಳಿದಾಗ, ಇನ್ನುಳಿದ ಅಷ್ಟು ದೂರದ ಪಯಣಕ್ಕೆ ಪಕ್ಕದಲ್ಲಿ ಯಾರನ್ನೋ ಕಲ್ಪಿಸಿಕೊಳ್ಳುವುದು ಕಷ್ಟವಾಯಿತು ಮುದ್ದು.. ಅಷ್ಟು ದೂರ ನಾನೊಬ್ಬಳೆ ಹೋಗಬೇಕಾ ? ಎಂದವಳನ್ನು , ನೋಡಿ bus ಇಳಿದು call ಮಾಡ್ತೀನಿ. ಮಾತಾಡ್ತಾ ಹೋಗೋಣ ಆಫೀಸ್ ಗೆ ಎಂದವಳ ಕಣ್ಣಲ್ಲಿ ಅದೆಷ್ಟು ಪ್ರೀತಿ ಕಾಣಿಸಿತ್ತು ಗೊತ್ತಾ?. ಆಮೇಲೆ ಆಫೀಸ್ ಮೆಟ್ಟಿಲು ಹತ್ತುತ್ತಿರುವಾಗಲೇ ಗೊತ್ತಾದವರಂತೆ ಬಂದ ನಿನ್ನ reached ? ಎಂಬ ಮೆಸೇಜ್ ಗೆ reached ಎಂದು ಕಳಿಸಿದರೂ ಕೂಡ ಮನಸ್ಸು ನಿನ್ನನ್ನು ತುಂಬಾ miss ಮಾಡಿಕೊಳ್ಳುತ್ತಿತ್ತು .
ಲವ್ ಯು ಕಣೋ . ಬದುಕಲ್ಲಿ ಏನು ಸಾಧಿಸಿದ್ದೇನೋ ಗೊತ್ತಿಲ್ಲ. ಆದರೆ ನಿನ್ನಂತ ಗೆಳತಿಯನ್ನು ಸಂಪಾದಿಸಿದ್ದು ಸಾಕು ಈ ಬದುಕಿಗೆ ....ಈ ಖುಷಿಗೆ.. ಜೀವನದಲ್ಲಿ ಕೆಲವು unexpected ಆಗಿ ಸಿಕ್ಕಾಗ ಆಗುವ ಖುಷಿ , ಆ ಥ್ರಿಲ್ ಇನ್ನೆಲ್ಲೂ ಸಿಗಲಾರದೇನೋ. ಎಲ್ಲೋ ಒಂದು ತಿರುವಲ್ಲಿ ನೀ surprise ಆಗಿ ಸಿಕ್ಕಂತೆಯೇ. ಹಾಗಾಗಿಯೇ ಈ ಜೀವನ predefined ಆಗದಿರುವುದೇ ಒಳ್ಳೆಯದು ಅಲ್ಲವಾ..
Golden life ಕೊಟ್ಟ ಚಿನ್ನದಂಥಹ ಗೆಳತಿ ಗೆ
ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.. ನಿನ್ನೆಲ್ಲ ಕನಸುಗಳು ನನಸಾಗಲಿ...
ಒಂದು ದಿನ ತಡವಾಗಿದ್ದಕ್ಕೆ ಕ್ಷಮೆಯಿರಲಿ...
ಬದುಕಲ್ಲಿ ಏನು ಸಾಧಿಸಿದ್ದೇನೋ ಗೊತ್ತಿಲ್ಲ. ಆದರೆ ನಿನ್ನಂತ ಗೆಳತಿಯನ್ನು ಸಂಪಾದಿಸಿದ್ದು ಸಾಕು ಈ ಬದುಕಿಗೆ ....ಈ ಖುಷಿಗೆ..
ReplyDeleteಇಷ್ಟವಾಯಿತು....
ಗೆಳೆತನದ ಕಡಲಲ್ಲಿ ಏಳುವ ಅಲೆಗಳು ನೂರಾರು
ReplyDeleteಕೆಲವು ಬಂದು ಮನಕ್ಕೆ ಅಪ್ಪಳಿಸಿದರೆ ಕೆಲವು ಹತ್ತಿರ ಬಂದು ನಂತರ ದೂರಾಗುತ್ತವೆ
ದೂರಾಗಿದ್ದ ಅಲೆಗಳು ಮತ್ತೆ ಶಕ್ತಿ ತುಂಬಿಕೊಂಡು ಹತ್ತಿರ ಬಂದು ನಿಂತಾಗ ಸಿಗುವ ಅನುಭವ ವರ್ಣಿಸಲು ಮಾತುಗಳಿಲ್ಲ. ಈ ಮಾತುಗಳು "ರಾತ್ರಿ ಮಲಗುವ ಮನಸ್ಸಿರಲಿಲ್ಲ , ನಿನ್ನೊಂದಿಗಿನ ಮಾತುಗಳು ಎಂದಿಗಾದರೂ ಮುಗಿದಾವಾ? " ಇದರಲ್ಲಿ ಪ್ರತಿಫಲಿಸುತ್ತಿದೆ. .
ಸುಂದರ ಲೇಖನ ಎಸ್ ಪಿ ಗೆಳೆತನದ ಕಡಲಲ್ಲಿ ಸಿಗುವ ಮುತ್ತುಗಳು ಅನೇಕ...
ಗೆಳೆತನದ "ಆಶಾ" ಭಾವವನ್ನು ಹುಟ್ಟುಹಾಕಿದ ನಿನ್ನ ಗೆಳತಿಗೆ ನಮ್ಮ ಕಡೆಯಿಂದಲೂ ಹುಟ್ಟು ಹಬ್ಬದ ಶುಭಾಶಯಗಳು
ಅಬ್ಬಾ... ತುಂಬಾ ಇಷ್ಟ ಆಯ್ತು... ನನ್ನ ಗೆಳತಿಯರ ನೆನಪೆಲ್ಲ ಒಮ್ಮೆಗೇ ಉಕ್ಕಿ ಬಂತು.... ಅದೆಷ್ಟು ರಾತ್ರಿಗಳನ್ನು ಬರೀ ಮಾತು, ಹರಟೆ, ನಗುವಲ್ಲಿ ಮುಳುಗಿಸಿದೆಯೋ ಈ ಗೆಳೆತನ ....!! ಅಂದ ಹಾಗೆ ನಿಮ್ಮ ಗೆಳತಿಗೆ ನನ್ನದೊಂದು ಶುಭಾಶಯ.... :)
ReplyDeleteಮುದ್ದಿನ ಗೆಳತಿಗೆ ಇದಕ್ಕಿಂತ ಹೆಚ್ಚಿನ ಗಿಫ್ಟ್ ಬೇಕೆನೇ... ??
ReplyDeleteಗೆಳತಿಗೆ ನನ್ನ ಕಡೆಯಿಂದೊಂದು ವಿಶ್ ಹೇಳಿ ಬಿಡು...
ಬರಹ ಸೂಪರ್ ...
ನಿನ್ನ ..
ReplyDeleteಚಿನ್ನದಂಥಹ ಗೆಳತಿಗೆ ನಮ್ಮ ಶುಭ ಹಾರೈಕೆಗಳು...
ಆಶಯ ತುಂಬಾ ಚೆನ್ನಾಗಿದೆ...
Golden life ಕೊಟ್ಟ ಚಿನ್ನದಂಥಹ ಗೆಳತಿ ಗೆ
ReplyDeleteಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.. ನಿನ್ನೆಲ್ಲ ಕನಸುಗಳು ನನಸಾಗಲಿ...:)
ನಿಮ್ಮ ಭಾವಲಹರಿ ನಮ್ಮನ್ನೂ ತೇಲಿಸಿಕೊಂಡು ಹೋಗುತ್ತದೆ. ನಿಮ್ಮ ಗೆಳೆತನಕ್ಕೆ ಅಭಿನಂದನೆಗಳು. ನಿಮ್ಮ ಗೆಳತಿಗೆ ಹುಟ್ಟುಹಬ್ಬದ ಶುಭಾಶಯಗಳು.
ReplyDeleteನಿಮ್ಮ ಗೆಳತಿಗೆ ನಮ್ಮ ಕಡೆಯಿಂದಲೂ ಜನುಮ ದಿನದ ಪ್ರೀತಿಯ ಶುಭಾಶಯ
ReplyDeleteಈ ಸ್ನೇಹ ಚಿರಾಯುವಾಗಲಿ ....
ಇಷ್ಟ ಆಯ್ತು ನಿಮ್ಮ ಸ್ನೇಹದ ಸ್ನೇಹದ ಪರಿ :)
ReplyDeleteಧನ್ಯವಾದಗಳು... ಎಲ್ಲರಿಗೂ...
ನಿಮ್ಮೆಲ್ಲರ ಹಾರೈಕೆಗಳು ನಿಜಕ್ಕೂ ನನ್ನ ಗೆಳತಿಯನ್ನೂ, ನಮ್ಮಿಬ್ಬರ ಸ್ನೇಹವನ್ನೂ ಕಾಯುತ್ತದೆ... --
ಚೆನ್ನಾಗಿದೆ.
ReplyDeleteನನಗೂ ಹೀಗೆ ಅಚಾನಕ್ಕಾಗಿ ಆಕೆ ಸಿಗುತ್ತಾಳೆ ಎಂದು ಮಕ್ಕಳ ಕೂಟದ ಬಳಿ ಆಗಾಗ ಕಾಯುತ್ತೇನೆ. ಆದರೆ ಆಕೆ ಬಹುಶಃ ನನ್ನ ನೆನಪುಗಳನ್ನೆಲ್ಲ ಅಳಿಸಿಹಾಕಿ ಎಲ್ಲೋ ಸಂಸಾರ ಸಮೇತ ನೆಲೆ ನಿಂತಿರಬಹುದು ಎನ್ನುವ ಆಶಯ ನನಗೆ ನೆಮ್ಮದಿ ತರುತ್ತದೆ.
ReplyDeleteಒಂದು ಬರಹದ ಮೂಲಕ ಯಾವುದನ್ನೋ ಮೀಟುವ ಶಕ್ತಿ ಹಲವು ಬರಹಗಾರರಿಗೆ ಸಿಗದ ಆಯಾಮ. ಪುಟ್ಟಿ ನಿನಗದು ಸಿದ್ಧಿಸಿದೆ ಲಗೇ ರಹೋ....
ಸಂಧ್ಯಾ ಒಳ್ಳೆಯ ಬರಹ..
ReplyDeleteನನ್ನ ಹಳೆಯ ನೆನಪಿನ ತೆರನ್ನೊಮ್ಮೆ ಎಳೆದು ಕಣ್ಮುಂದೆ ನಾಲ್ಕು ರೌಂಡು ಎಳೆದಾಡಿಸಿ ಉನ್ಮಾದಿಸಿದ್ದು ನಿಜ. ಗೆಳೆಯರ ಭೇಟಿಯೇ ಅಂತಹುದ್ದೊಂದು ಸಂಭ್ರಮ.. ಅದರಲ್ಲೂ ಅನಿರೀಕ್ಷಿತವೆಂದರೆ ಅದು ಹಬ್ಬವೇ.. ನಂಗೂ ಅದರ ಅನುಭವವಿದೆ.
ಬರಹ ಇಷ್ಟವಾಯ್ತು. :)
ಬರಹ ಚಿಕ್ಕದಿದ್ದರೆ ಇನ್ನೂ ಚೆಂದ ಇರ್ತಿತ್ತು,ಬರೀತಿರಿ
ReplyDeletenice..
ReplyDeleteಮನಸ್ಸಿಗೆ ನಾಟುವ ಬರಹ. ಇಂತಹ ಸುಂದರ ಬದುಕು ಎಲ್ಲರಿಗೂ ಸಿಗದು. ಸಿಕ್ಕರೂ ಇಷ್ಟೊಂದು ನಿಷ್ಕಲ್ಮಶವಾಗಿ ಪ್ರೀತಿಸುವ ಹುಡುಗಿ! ಬಹಳ ಕಷ್ಟ . ಹುಡುಗರ ಪ್ರೀತಿಯನ್ನು ಅರ್ಥೈಸಿಕೊಳ್ಳುವ ಮನಸ್ಸು ಎಲ್ಲಾ ಹುಡುಗಿಯರಿಗಿದ್ದರೆ ಎಷ್ಟು ಚಂದ.!
ReplyDeletesuper..:)
ReplyDelete