ಸಂಧ್ಯೆಯಂಗಳದಿ.........
ಮನಸು ಮಾತಾಡಿದ್ದು.....
Sunday, 29 January 2012
ಯಾವ ಚೈತ್ರದ ವಸಂತ ಋತುವೋ ನೀನು...??
ಕಣ್ಣ ಸನ್ನೆಯಲಿ..
ಹೆಣ್ತನವ ಗೆದ್ದು..
ರೆಪ್ಪೆಯಂಚುಗಳಲ್ಲಿ ...
ಕನಸುಗಳ ಬಲೆ ಹೆಣೆದು...
ಕೆನ್ನೆಗುಳಿಯ ಬೊಗಸೆಗಳಲ್ಲಿ
ಮುತ್ತಿನ ಮಳೆ ಸುರಿದು..
ಎದೆಯ ಮಾಮರದಿ...
ಒಲವ ಉಯ್ಯಾಲೆಯಲಿ..
ಸವಿನೆನಪುಗಳ ತೂಗುವವ..
ಯಾವ ಚೈತ್ರದ
ವಸಂತ ಋತುವೋ ನೀನು...??
Friday, 27 January 2012
ಕಿರುಬೆರಳ ಸನಿಹದಲ್ಲಿ ಜೊತೆಯಾಗಿ ನೀನಿರಲು...
ಇಳಿಸಂಜೆಯ ತಂಗಾಳಿ
ಮೈಮನಗಳ ತಾಕುತಿರಲು...
ಕಿರುಬೆರಳ ಸನಿಹದಲ್ಲಿ
ಜೊತೆಯಾಗಿ ನೀನಿರಲು...
ಪ್ರೀತಿ ಸುಧೆಯಲ್ಲಿ..
ಮನಸು ಬೆರೆತಿರಲು..
ನಿನ್ನೊಲವ ಕಂಡು..
ನಸುನಾಚಿ ಕೊಂಡ೦ತಿತ್ತು ...
ಹೊಂಬೆಳಕಿನಲ್ಲಿ ಮುಗಿಲು...
ಜಗಳಕ್ಕೇಕೆ ಜೊತೆಯಾಗಲೇ ಇಲ್ಲ ನೀನು.. ..?
ಇವತ್ತು ನನ್ನ ಅಕ್ಕರೆಯ ಅಕ್ಕನ ಹುಟ್ಟುಹಬ್ಬ... ಅವಳಿಗಾಗಿ.....
ನನ್ನ ಎಲ್ಲ ಹುಚ್ಚು ಮನಸಿನ
ಹತ್ತು ಯೋಚನೆಗಳನ್ನು
ಸಹಿಸಿಕೊಂಡವಳು ನೀನು...
ಎಲ್ಲ ಭಾವಗಳನ್ನು
ಹಂಚಿಕೊಂಡವಳು ನೀನು...
ಅಮ್ಮನಿಗಿಂತ ಮಿಗಿಲಾಗಿ
ಪ್ರೀತಿ ಕೊಟ್ಟವಳು ನೀನು..
ನಿನ್ನೊಂದಿಗಿದ್ದರೆ ನೋವಿಗೆ ಜಾಗವೇ ಇಲ್ಲ
ನಕ್ಕ ನಗುವಿಗೆ ಲೆಕ್ಕವೇ ಇಲ್ಲ..
ಇಷ್ಟೆಲ್ಲಾ ಮಾಡಿದವಳು.
ಜಗಳಕ್ಕೇಕೆ ಜೊತೆಯಾಗಲೇ ಇಲ್ಲ ನೀನು.. ..?
Wednesday, 25 January 2012
ನಗು ಹುಟ್ಟಿದ್ದೇ ನಿನ್ನಿಂದಲಾ..?
ಕಷ್ಟಗಳೇ ಮೈವೆತ್ತಿದ್ದ ಬದುಕಿನಲಿ..
ನಗೆ ದೀಪ ಬೆಳಗಿದವಳು ನೀನು..
ಮೊದಲು ನಗಿಸಿದ್ದು ನೀನು..
ನನ್ನೊಳಗೆ ನಗಲು ಕಲಿಸಿದ್ದು ನೀನು..
ನಿಜ ಹೇಳು ನಗು ಹುಟ್ಟಿದ್ದೇ ನಿನ್ನಿಂದಲಾ..??!!!
ನೆನಪಾದರೆ ಸಾಕು...
ನಿನ್ನ ನೆನಪಾದರೆ ಸಾಕು...
ಕಟ್ಟಿದರೂ ನಿಲ್ಲದೆ
ತಂಟೆ ಮಾಡುವ
ತುಂಟ ಕರುವಿನಂತಾಗುವುದು ಮನಸು..
ಜಲಧಾರೆ.....
ಪ್ರಕೃತಿಯ ಸೆರಗಿನ
ಬೆಳ್ಳಿ ಎಳೆಯ ಚಿತ್ತಾರವಾಗಿ...
ಕಪ್ಪು ಶಿಲೆಗಳ ಬಾಗು ಬಳುಕಿನಲ್ಲಿ..
ನಿಲ್ಲದೆ ನಿರಂತರವಾಗಿ..
ದಟ್ಟ ಕಾನನದ ಮೌನ ಮುರಿಯುತ.
ಹರಿಯುತಿದೆ ಜಲಧಾರೆ..
ಹಾಲುಬಿಳುಪಿನಲಿ ನೊರೆನೊರೆಯಾಗಿ..
Photo By Digwas Hegde
ನಿನ್ನದೇ ವರ......
ನಿನ್ನದೇ ವರವಾದ
ಈ ಅಗಲಿಕೆಯ
ನೋವಲ್ಲೂ.....
ಅಳುವ ಮನಸ್ಸಿಗೆ
ನಿನ್ನ ಹೆಗಲೇ ಬೇಕಂತೆ....!!!!!
Newer Posts
Older Posts
Home
Subscribe to:
Posts (Atom)