ಇವತ್ತಿನ ಬೆಳಗು ಎಲ್ಲದರಂತಿಲ್ಲ. ನಿಜ ಕ್ಷಣ ಕ್ಷಣಕ್ಕೂ ಬದಲಾಗುತ್ತಿರುತ್ತದೆ ಪ್ರಪಂಚ. ನಿನ್ನೆಯಂತೆ ಇವತ್ತಿಲ್ಲ; ಇವತ್ತಿನಂತೆ ನಾಳೆಗಳು ಇರುವುದಿಲ್ಲ. ನಿನ್ನೆ ಹೀಗಿದ್ದೆವು, ಹೀಗಿತ್ತು ಎನ್ನುವ ನೆನಪುಗಳೇ ಶಾಶ್ವತ. ನಾಳೆಗಳು ಹೇಗೋ ಎಂಬ ಕಲ್ಪನೆಯಲ್ಲೇ ಸಾಗುವುದು ಬದುಕು. ಪ್ರತಿ ಇಂದಿನಲ್ಲೂ ನಾಳೆಯದೊಂದು ಕಲ್ಪನೆ, ಒಂದು ಕನಸು. ಅದು ನಾಳೆಯು ಬದುಕಬೇಕು ಎಂಬುದಕ್ಕೊಂದು ಕಾರಣ.
ಆದರೆ ಇವತ್ತೇಕೋ ನಾಳೆಗಳ ಬಗೆಗೆ ಕನಸುಗಳೇ ಹುಟ್ಟುತ್ತಿಲ್ಲ. ಎಲ್ಲ ಸಾಕೆನಿಸುತ್ತಿದೆ. ಎಲ್ಲವನ್ನು ತೊರೆದು ಎಲ್ಲಾದರು ದೂರ ಹೋಗಿ ಒಂಟಿಯಾಗಿ ಬದುಕಬಾದೇಕೆ ಎನಿಸುತ್ತಿದೆ. ಒಂದಿಷ್ಟು ಪುಸ್ತಕಗಳು, ಒಂದಿಷ್ಟು ಬಣ್ಣಗಳು, ಹಾಳೆಗಳು, ಹಳೆ ಹಾಡುಗಳು, ಭಾವಗೀತೆಗಳಲ್ಲಿ ಕಳೆದು ಹೋಗಬೇಕೆನಿಸುತ್ತಿದೆ.
ಇಂದೇಕೋ ಮಾತು ಮಾತಿಗೂ ಅಳು ಬರುವಂತಿದೆ. ಅಮ್ಮನಿಗೆ ಕಾಲ್ ಮಾಡಿದರೂ ಅವಳ ದ್ವನಿ ಕೇಳುತ್ತಾ ಅಳುವೇ ಮೇಲಾಗಿ ಮಾತನಾಡಲಾರದೆ ಹೋಗುತ್ತಿದ್ದೇನೆ. ಕಾರಣ ಗೊತ್ತಿಲ್ಲ.
ಇವತ್ತೇಕೆ ಹೀಗೆ?? ಅಥವಾ ನಾನೇಕೆ ಹೀಗೆ ?? ನಿರ್ದರಿಸಲಾಗದೆ ಹೋಗುತ್ತಿದ್ದೇನೆ..
ನಾಳೆಗಾಗಿ ಬೇಗನೆ ಒಂದು ಕನಸು ಬೇಕಿದೆ...
ಮೊಳಕೆ ಒಡೆಯಬೇಕಿದೆ.. ಮತ್ತೆ ಬದುಕಬೇಕಿದೆ..
ಯಾಕೋ ಅಕ್ಕಿ ಮತ್ತೆ ಉದ್ದು ನೆನಪಿಗೆ ಬಂತು. ;)
ReplyDeleteನಾಳೆ ನಿನ್ನೊಡನೆ ಬದುಕಲಿ :)
ಧನ್ಯವಾದ ಶ್ರೀಪಾದು.. ನನ್ನ ಅಂಗಳಕ್ಕೆ ಸ್ವಾಗತ.. ರಾತ್ರಿ ಇದನ್ನು ಬರೆದು ಮುಗಿಸಿ ಮಲಗುವಷ್ಟರಲ್ಲಿ ಅಕ್ಕಿ ಮತ್ತು ಉದ್ದಿನ ಮೆಸೇಜ್ ತಮ್ಮನಿಂದ ಬಂದಿತ್ತು. ಸಣ್ಣಗೆ ನಕ್ಕು ಮಲಗಿದ್ದೆ.. ಈಗ ನೀವು ನೆನಪಿಸಿದ್ದಿರಿ
Deleteನಿನ್ನೆಯೆಂಬುದು ನೆನಪು,
ReplyDeleteಇಂದಿನದು ಕನಸು,
ನಾಳೆಯೆಂಬುದು ಕಲ್ಪನೆ.
ಇದೆ ಜೀವನ...
ನಿನ್ನೆಯದು ಇಂದಿಲ್ಲ,
ಇಂದಿನದು ನಾಳೆಯಿಲ್ಲ,
ಇದೇ ಚಿಂತೆಯಲ್ಲಿ ಕೊರಗಾಟ... ನಮ್ಮ ಜೀವನವೇ ಹೀಗೆ. ಇದ್ದಾಗ ಇಲ್ಲದಿರುವ ಬಗ್ಗೆ ಚಿಂತೆ ಅದು ಸಿಕ್ಕಾಗ ಇನ್ನೊಂದರ ಚಿಂತೆ. ಹಾಗಾಗಿ ಕೆಲವೊಮ್ಮೆ ಈ ರೀತಿ ಮನ ಭಾವುಕವಾಗುವುದು ಸಹಜ. ಮನದಲ್ಲಿ ಏನೋ ತೊಳಲಾಟ, ಏನೂ ಬೇಡವಾಗುವುದು, ಏನೋ ತಪ್ಪು ಮಾಡಿದಂತೆ ಭಾಸವಾಗಿ ಹೃದಯ ಬಡಿದುಕೊಳ್ಳುವುದು ಇವೆಲ್ಲ ಸಹಜವೇ.... ಹಾಯಾಗಿ ಒಂಟಿಯಾಗಿ ಒಂದು ದಿನ ಕಳೆದರೆ ಮರುದಿನ ಮತ್ತೆ ಹೊಸ ಕನಸುಗಳೊಂದಿಗೆ ಜೀವನ ಪ್ರಾರಂಭ.
ಅದೇ ಹೊಸ ಕನಸು ಮತ್ತು ಹೊಸ ಸಾಹಿತ್ಯದ ನಿರೀಕ್ಷೆಯಲ್ಲಿ ನಿಮ್ಮ ಅಭಿಮಾನಿ...
ಶುಭವಾಗಲಿ.
Thank you Ganesh..
Deleteನಾಳೆಗನಸಿನ ಮಾತುಗಳು ತುಂಬಾ ಹಿಡಿಸಿದವು..... ಅಂದದ ನಿರ್ವಹಣೆ.....
ReplyDeleteDhanyavaada pravara..
Deleteತುಂಬಾ ಮೋಸ ಕಣ್ರೀ, ನಿಮ್ ತುಮುಲಗಳೂ, ನಮ್ಗೆ ಖುಷಿ ಕೊಡ್ತಿವೆ
ReplyDeleteಥ್ಯಾಂಕ್ಯು ಕಣ್ರೀ... ನನ್ನ ಅಂಗಳಕ್ಕೆ ಸ್ವಾಗತ..
DeleteBelieve me. Its easier to be alone. But, damn tough to be together.
ReplyDeleteYou are right Sir, welcome to my blog.
Deleteನಿನ್ನೆ ನಿನ್ನೆಗೆ, ಇಂದು ಇಂದಿಗೆ, ಇರಲಿ ನಾಳೆಯು ನಾಳಿಗೆ ಎಂಬ ಕವಿವಾಣಿ ನೆನಪಾಯಿತು. ಕೆಲವೊಮ್ಮೆ ಮನಸ್ಸು ಹೀಗೇ ಒದ್ದಾಡುತ್ತದೆ. ಯಾರೂ , ಏನೂ ಬೇಡವೆಂದೆನಿಸುತ್ತದೆ. ಗುಂಡಣ್ಣನ ಅಕ್ಕಿ, ಉದ್ದಿನ ಮೆಸೇಜು ನನಗೂ ನೆನಪಾಯಿತು :-) ಚೆನ್ನಾಗಿದೆ :-)
ReplyDeleteThank you prashasti...
Deleteನಿನ್ನೆಗಳ ಭದ್ರ ಬುನಾದಿಯ ಮೇಲೆ ಇಂದು ಕಟ್ಟುವ ಕಟ್ಟಡ ನಾಳೆಯ ಮೇಲ್ಚಾವಣಿಗೆ ಕಾಯುತ್ತಿರುತ್ತದೆ..ಎಷ್ಟೊಂದು ಆಪ್ತವೆನಿಸುವ ಬರಹ..ಸೂಪರ್ ಇದೆ ಎಸ್ ಪಿ.
ReplyDelete