ಕೆನ್ನೆ ಕೆಂಪಿನ
ರಂಗಿನೋಕುಳಿಯಲ್ಲಿ..
ನಾಚಿಕೆಯ ನಗೆಮಲ್ಲಿಗೆ
ಘಮಘಮಿಸುತ್ತಿತ್ತು..
ನಲ್ಲ ನೀಡಿದ ಪ್ರೀತಿಯ
ಸಿಹಿಮುತ್ತುಗಳಿಂದ..
ಸಾಕ್ಷಿ ........
ಬೆಳಿಗ್ಗೆ ನನ್ನ ಕಂಡ ಕನ್ನಡಿಯೂ
ನಾಚಿಕೊಂಡಂತಿತ್ತು ..
ಕಾರಣ ನಲ್ಲನ ತುಂಟಾಟಗಳಿಗೆ
ಕೆನ್ನೆಮೆಲಿನ ಗುರುತು
ಸಾಕ್ಷಿ ಹೇಳುತ್ತಿತ್ತು...
:))
ReplyDelete:) :) Thank you..
Deleteಆಹಾ ಸಂಧ್ಯೆಯಂಗಳದ ರಂಗಿನೋಕುಳಿ
ReplyDeleteಸೊಗಸಾಗಿ ಮೂಡಿ ಬಂದಿದೆ.....
ಧನ್ಯವಾದ ರಾಘವ.. ನಿಮ್ಮ ಬ್ಲಾಗ್ ಓಪನ್ ಮಾಡುವ ಪ್ರಯತ್ನ ಸಾಗಿದೆ
Deleteಸಂಧ್ಯಾ ರವರೇ;ಚೆಂದದ ಕವನ.ನಿಮ್ಮಿಂದ ಇನ್ನಷ್ಟು ಸುಂದರ ಕವನಗಳು ಬರಲಿ.ನನ್ನ ಬ್ಲಾಗಿಗೆ ಭೇಟಿ ಕೊಡಿ.ನಮಸ್ಕಾರ.
ReplyDeleteಧನ್ಯವಾದ ಕೃಷ್ಣಮೂರ್ತಿ ಸರ್.. ನನ್ನ ಅಂಗಳಕ್ಕೆ ಸ್ವಾಗತ..
Deleteವಾಹ್ !!
ReplyDeleteಚುಟುಕುಗಳೆಂದರೆ ಬೆಳಗಿನ ಚುಮು ಚುಮು ಛಳಿಯಲ್ಲಿ ಬೆಚ್ಚನೆಯ ಕಾಫೀ ಗುಟುಕಿನಂತಿರಬೇಕು..
ನಿಮ್ಮ ಎರಡು ಗುಟುಕುಗಳು ಸೊಗಸಾಗಿದೆ...
ಕಾಫಿ ಗುಟುಕರಿಸಿದ್ದಕ್ಕೆ ಧನ್ಯವಾದ ಪ್ರಕಾಶಣ್ಣ
Deleteಕೆನ್ನೆ ಗುಳಿಯಲ್ಲಿ
ReplyDeleteಒಲವಿನೋಕುಳಿ...:):):)
::
:
ಚಂದ ಚಂದ...
ಆಹಾ.. ರಸಿಕತೆ ಶಭ್ಧಗಳಲಿ ಮೂಡಿದಾಗ ಅದರ ಮಜವೇ ಬೇರೆ.
ReplyDeleteಚೆನ್ನಾಗಿದೆ ಸಂಧ್ಯಾ ಅವರೇ.
ತನು ಮನವೆಲ್ಲ ಕಂಪಿಸಿತ್ತು
ನಲ್ಲನ ತುಂಟಾಟಕೆ,
ನಾಚಿ ಕೆನ್ನೆ ಕೆಂಪೇರಿತ್ತು
ಕೊಟ್ಟ ಸಿಹಿ ಮುತ್ತಿಗೆ.
ಧನ್ಯವಾದ ಗಣೇಶ್..
Deleteಕನ್ನಡಿ ನಾಚುತ್ತೆ...ಕಾರಣ..
ReplyDeleteನಾನು ತೋರುವ ಚೆಲುವಿಗಿಂತ ಚೆಲುವೆಯ ಚೆಲುವೆ? ಅಂತ..
ಅಂತ ಚೆಲುವಿನ ಪದಗಳನ್ನು ಪೋಣಿಸಿದ ನಿಮ್ಮ ಕೀ ಬೋರ್ಡ್ ಗೆ ಹಾಗು ನಿಮ್ಮ ಮನಸಿನ ಅಂಗಳಕ್ಕೆ ಒಂದು ನಮನ...
ಧನ್ಯವಾದ ಶ್ರೀಕಾಂತ್ ರವರೆ.. ಚೆಲುವೆಯ ಚೆಲುವು ಇಮ್ಮಡಿಸಲು ನಲ್ಲನೆ ಕಾರಣ.
Delete:-)
ReplyDelete