ಪ್ರೀತಿಯೆಂದರೆ ಏನೆಲ್ಲಾ...
ಪ್ರೀತಿಯೆಂದರೆ ಏನೂ ಇಲ್ಲಾ ...
ಪ್ರೀತಿಯೋಳಗಡೆ ಏನಿಲ್ಲ..??
ಪ್ರೀತಿಯಿಂದಲೇ ಎಲ್ಲ ...
ಈ ಪ್ರೀತಿಗೆ ಹುಡುಕಿದಷ್ಟೂ ಹೊಸ ಅರ್ಥಗಳಲ್ಲ..??
ಪ್ರೀತಿ ,ಸ್ನೇಹ , ಶಾಂತಿ ಶಬ್ದಗಳನ್ನು ಸೋದರಿಕೆಯ ಸಂಬಂಧದಂತೆ ಬಳಸುತ್ತಾರೆ .ಆದರೂ ಪ್ರೀತಿಗಾಗಿ ಯುದ್ಧಗಳಾಗುತ್ತವೆ. ಶಾಂತಿ ಕದಡುತ್ತವೆ. ರಕ್ತಪಾತಗಳಾಗುತ್ತವೆ . ಪ್ರೀತಿ ಸಂಬಂಧಗಳನ್ನು ಬೆಸೆಯುತ್ತದೆ ಅಂತಾರೆ ಅದರೂ ರಕ್ತ ಸಂಬಂಧಗಳನ್ನು ಕಳೆದುಕೊಳ್ಳುತ್ತಾರೆ.
ಕಾಮವೆಂಬುದು ಪ್ರೀತಿಯ ಉತ್ತುಂಗತೆ ಅಂತಾರೆ. ಆದರೆ ಅತ್ಯಾಚಾರದಂತಹ ಕೃತ್ಯಗಳಲ್ಲಿ ಪ್ರೀತಿಯ ಲವಲೇಶವೂ ಕಾಣದಿರುವಾಗ ಉತ್ತುಂಗತೆಯ ಪ್ರಶ್ನೆ ಎಲ್ಲಿ ಬಂತು ? ಅಂತಹ ಮೃಗೀಯ ಕೃತ್ಯಗಳಲ್ಲಿ ದೈವಿಕತೆಯನ್ನು ಹುಡುಕಲು ಸಾಧ್ಯವಾ? ಪ್ರೀತಿ ದೈವವೆಂದರೆ ನಂಬಬೇಕಾ ?
ಪ್ರೀತಿ ಸರ್ವವ್ಯಾಪಿ ಅಂತಾರೆ. ಆದ್ರೆ ಪ್ರೀತಿಗೆ ಚೌಕಟ್ಟು ಹಾಕಿಟ್ಟುಕೊಳ್ಳೋಕೆ ನೋಡ್ತಾರೆ.
ಪ್ರೀತಿನಾ ಪ್ರೀತಿಯಿಂದ ಪ್ರೀತ್ಸಿ ಅನ್ನೋರೆಲ್ಲ ಆಮೇಲೆ ಪ್ರೀತಿನಾ ಅಧಿಕಾರದಿಂದ ಪ್ರೀತಿಸುತ್ತಾರೆ.
ನಿಸ್ವಾರ್ಥ ಪ್ರೀತಿ ಅನ್ನೋರೆಲ್ಲ ಪ್ರೀತಿಸುತ್ತಾ ಸ್ವಾರ್ಥಿಗಳಾಗಿ ಬಿಡ್ತಾರೆ.
ಪ್ರೀತಿ ಪವಿತ್ರ .. ಪ್ರೀತಿ ಪಾವನ ಅಂತಾರೆ.. ಆದರೂ ಪಾರ್ಕ್ ಗಳಲ್ಲಿ ಅಸಭ್ಯವಾಗಿ ಪ್ರೀತಿಯ ಮಾನ ತೆಗೆಯುತ್ತಾರೆ.
ನಿನ್ನೆ ತಾನೇ ಪ್ರೀತಿಯ ಹಬ್ಬ ಮುಗಿದಿದೆ. ಪ್ರೀತಿಸುವವರಿಗೆ ಪ್ರತಿದಿನವೂ ಪ್ರೇಮಿಗಳ ದಿನವೇ ಎಂದರೂ ಅದೇನೋ ಒಂದು ಸಣ್ಣ ಆನಂದ ಎಲ್ಲಿಂದಲೋ ಮೈ ತಾಕಿರುತ್ತದೆ ಫೆಬ್ರವರಿ ೧೪ ರಂದು. ಇದು ನಮ್ಮ ಆಚರಣೆಯಲ್ಲ , ಇದು ಸರಿಯಲ್ಲ ಎಂದು ಯಾರೇನೇ , ಎಷ್ಟೇ ಬಾಯಿ ಬಡಿದು ಕೊಂಡರೂ ಪ್ರೀತಿಯ ಸಂಭ್ರಮಕ್ಕೇನೂ ಕೊರತೆ ಇಲ್ಲ. ಧರಿಸುವ ಉಡುಪುಗಳ ಬಣ್ಣಗಳಿಗೆಲ್ಲ ಒಂದೊಂದು ಅರ್ಥ.ಅಲ್ಲಲ್ಲೇ ರೇಗಿಸುವ ಗೆಳತಿಯರ ಗುಂಪು. ಅದೆಷ್ಟು ಸಂಭ್ರಮದ ಹೊಳಪು ಕಣ್ಣಲ್ಲಿ. ಮನದಲ್ಲಿ , ಪ್ರೀತಿ ಸಿಕ್ಕ ಖುಷಿ , ಪ್ರೀತಿ ಉಳಿದ ಖುಷಿ , ಮುನಿಸು ಮರೆತು ಒಂದಾದ ಖುಷಿ. ಅಬ್ಬಾ ..!! ಪ್ರೀತಿಯೆಂದರೇ ಖುಷಿ ..
ನಿನ್ನೆ ಎಂದಿನಂತೆ ಆಫೀಸ್ ಮುಗಿದು ಪಿ ಜಿ ಸೇರಿದರೆ ಒಬ್ಬೊಬ್ಬರದು ಒಂದೊಂದು ಭಾವ, ಸಂತೋಷ , ದುಃಖ ಎಲ್ಲವು ಸಿಕ್ಕಿದ್ದು. ಅವನ ಮೊದಲ ಉಡುಗೊರೆ ಇದು ಎಂದು ಕಣ್ಣು ಮಿಟುಕಿಸಿದ್ದು ಒಬ್ಬಳಾದರೆ, stupid ನೋಡು ನಂಗಿಷ್ಟ ಆಗದೆ ಇರೋ ಕಲರ್ ಡ್ರೆಸ್ ಕೊಟ್ಟಿದಾನೆ ಕೋತಿ ಅಂತ ಪ್ರೀತಿಯ ಕಂಪ್ಲೇಂಟ್ ಇನ್ನೊಬ್ಬಳ ಕಡೆಯಿಂದ. ಅದರೂ ಅವನಿಗಾಗಿ ಇದನ್ನ ಹಾಕೊಳ್ತೀನಿ.ಅವನಿಗಾಗಿ ಬದಲಾಗೊದ್ರಲ್ಲೇ ಖುಷಿ ಇದೆ ಅಂತ ಡ್ರೆಸ್ ಹಾಕಿಕೊಂಡು ಕನ್ನಡಿ ಮುಂದೆ..:) break up ಅಂತ mood upset ಆಗಿ ಕಣ್ಣಲ್ಲಿ ನೀರು ತುಂಬಿ ಕೊಂಡವಳೊಬ್ಬಳಾದರೆ, ಅಪ್ಪ ಅಮ್ಮನ ಒಪ್ಪಿಗೆಯ ಮುದ್ರೆ ಬಿತ್ತು ಕಣೆ ಎಂದು ಕಣ್ಣಲ್ಲಿ ನೀರು ತುಂಬಿಕೊಂಡು ಅಪ್ಪಿಕೊಂಡಿದ್ದು ಇನ್ನೊಬ್ಬಳು. " ನೀರು ತುಂಬಿರುವ ಎಲ್ಲಾ ಕಣ್ಣುಗಳೂ ಪ್ರೀತಿ ಮುರಿದ ದುಃಖದಲ್ಲಿವೆ ಎಂದು ಭಾವಿಸಬೇಡ ; ಆ ಪ್ರೀತಿ ಸಿಕ್ಕಿರಲೂ ಬಹುದು " ಎಂದು ಎಲ್ಲೋ ಓದಿದ ನೆನಪು ಬಂತು. ದೂರದಲ್ಲಿನ ಪತಿ ಕಳಿಸಿದ ಟೆಡ್ಡಿ , ಚಾಕೊಲೇಟ್ ಖುಷಿ ಕೊಟ್ಟರೂ ಅವರು ಇದ್ದರೆ ಜೊತೆಗೆ it will be more romantic ಎನ್ನುತ್ತಾ ಮಿಸ್ ಮಾಡಿಕೊಳ್ಳುತ್ತಿದವಳು ಇನ್ನೊಬ್ಬಳು. ಅವನಿಗೆ ಓಕೆ ಅಂದೆ, ಪಾಪಿ ಕೊನೆಗೂ ಸೋಲೋ ಹಾಗೆ ಮಾಡಿಬಿಟ್ಟ , ಛೇ ನಂಗೆ ಇದು ಬೇಡವಾಗಿತ್ತು ಕಣೆ ಅಂತಾಳೆ ಮತ್ತೊಬ್ಬ ಗೆಳತಿ. ಬೇಡವೆಂದರೆ ಬಿಡೆ ಅಂದರೆ , ಹೋಗೆ ನೀ ಪ್ರೀತಿ ಮಾಡು ಗೊತ್ತಾಗತ್ತೆ ಅಂತ ಗುರ್ ಅನ್ನೋದು ಬೇರೆ. ಇನ್ನು single ಆಗಿದ್ದವರಿಗಂತೂ ಎಷ್ಟು proposals ಬಂತು ?? ಯಾರು rose ಕೊಟ್ಟಿಲ್ಲವಾ ?? are you still single ?? ಅಂತಾ ಕಣ್ಣರಳಿಸುತ್ತಾ questions ಗಳ ಸುರಿಮಳೆ.
ಲವ್ ಅಂದ್ರೆ ಬರಿ ಹುಡುಗ ಹುಡುಗಿ ನಡುವೆ ಮಾತ್ರಾನ ? ಎಷ್ಟು ಜನ ಅಪ್ಪ ಅಮ್ಮಂಗೆ, freinds ಗೆ,ಅಣ್ಣ , ಅಕ್ಕ ,ತಮ್ಮ, ತಂಗಿಗೆ wish ಮಾಡಿದ್ರಿ ಅಂತ ಇನ್ನೊಬ್ಬಳ ಪ್ರಶ್ನೆ. its all over buddy .. cheer up .. ನಾವೆಲ್ಲಾ ಇದೀವಿ. ತಪ್ಪು ಯಾರದೇ ಇದ್ರೂ ಆ ಪ್ರೀತಿ ಉಳಿಸಿಕೊಳ್ಳೋಕೆ ಇಬ್ಬರಿಂದಾನು ಆಗಿಲ್ಲ ಅಂದಮೇಲೆ ಕಣ್ಣೀರು ಹಾಕೊದೇಕೆ ಎಂಬ ಸಾಂತ್ವನದ ಮಾತುಗಳು. ಒಂದೇ ದಿನದಲ್ಲಿ ಎಷ್ಟೆಲ್ಲಾ ಭಾವ ಭಂಗಿಗಳನ್ನ ನೋಡಿದ್ದು . ಒಂದು colorful day ಬಣ್ಣ ಬಣ್ಣಗಳಲ್ಲಿ ಮುಗಿದ್ದು ನಿಜ ಎನಿಸಿತು .
nice one sandhya .............
ReplyDeleteNanantu ninge wish madidnapa :p mast iddu sis....
ReplyDeletesandakaite .. banna bannada loka bannisalu saaladu e saaluuuu...
ReplyDeleteಸಾಗರ ಒಂದೇ...ನೀರೂ ಕೂಡ ಉಪ್ಪು...ಆದರೆ ಅದರೊಳಗಡಗಿರುವ ಕಪ್ಪೆ ಚಿಪ್ಪು ಭಿನ್ನ ..ಒಂದಕ್ಕಿಂದ ಒಂದು ಬಣ್ಣ, ಆಕಾರ, ದಪ್ಪ..ಹೀಗೆ ಮನುಜನ ಅಂತರಂಗದಲ್ಲಿರುವ ಪ್ರೀತಿ ಎನ್ನುವ ಪದವು, ಭಾವವೂ ಭಿನ್ನ..ಅವರವರ ಅರ್ಥ ವ್ಯಾಪ್ತಿಗೆ ಸಿಕ್ಕಷ್ಟು ನಲಿವು, ನೋವು ಸಿಗುತ್ತದೆ ಪ್ರೀತಿಯಲ್ಲಿನ ತಳಮಳ, ಅನುಮಾನ, ತಮಾಷೆ ಎಲ್ಲವನ್ನು ಎಷ್ಟು ಸುಲಭವಾಗಿ ಕಡಲಲ್ಲಿ ಅಲೆಗಳು ಏಳುವಂತೆ ಪ್ರಶ್ನೆಗಳು, ಉತ್ತರಗಳು ಎರಡು ಹೊರ ಹೊಮ್ಮಿವೆ..
ReplyDeleteಸುಂದರ ಲೇಖನ ಎಸ್.ಪಿ..ಓದಿದಷ್ಟು ಭಾರಿ ಹೊಸ ಹೊಸ ಚಿಂತನೆಗಳನ್ನು ಹೊರ ಹಾಕುತ್ತದೆ..ಅಭಿನಂದನೆಗಳು ಒಳ್ಳೆಯ ಲೇಖನ ಕೊಟ್ಟಿದ್ದಕ್ಕಾಗಿ.
ಪ್ರೀತಿ ಅನ್ನುವುದು ಅವರವರ ಭಾವನೆಗಳಿಗೆ ತಕ್ಕಂತಿರುತ್ತದೆ.
ReplyDeleteಜೊತೆಗೆ ಪ್ರೀತಿಯ ಮಜಲುಗಳೂ ಬೇರೆ ಬೇರೆ...
ಅಮ್ಮನೊಂದಿಗಿನ ಪ್ರೀತಿ ಬೇರೆ... ತಮ್ಮನೊಂದಿಗಿನ ಪ್ರೀತಿ ಬೇರೆ..
ಗುರುವಿನ ಪ್ರೀತಿ... ತಂದೆಯ ಪ್ರೀತಿ... ಮಡದಿಯ ಪ್ರೀತಿ..
ಪ್ರೀತಿಗಾಗಿ ಪ್ರೀತಿಸುವ ಪ್ರೀತಿಗಳೇ ಬೇರೆ ಬೇರೆ...
ಪ್ರೀತಿಯಉತ್ತುಂಗ ಕಾಮವಂತೆ... ಎಲ್ಲ ಸಂಧರ್ಭದಲ್ಲಿ ಇದನ್ನು ಅಳವಡಿಸೋಕಾಗಲ್ಲಾ..
ಪ್ರೀತಿ ವೆಲಂಟೈನ್ ಡೇ ದಿನಾನೇ ಮೂಡುತ್ತಾ ... ಖಂಡಿತಾ ಇಲ್ಲಾ...
ಆದರೆ ಆವತ್ತು ಹೇಳಿಕೊಳ್ಳೋಕೊಂದು ಮುಕ್ತ ಅವಕಾಶ ಅಷ್ಟೇ....
ಇದೇ ಕಾರಣಕ್ಕೇ ನಿನ್ನೆಯ ದಿನ ನೀನು ಅಷ್ಟು ರಂಗು ನೋಡಿದ್ದು....
ಚಂದಾಗಿ ಬರದ್ದೆ.....
Sandhya.. Very Nice... :) :)
ReplyDeletewav....mastidde.....
ReplyDeleteಪ್ರೀತಿ ಕೆಲವರಿಗೆ ಹಟವಿಟ್ಟು ಸಾಧಿಸಿಕೊಂಡ ಗುರಿ ಆದ್ರೆ.. ಮತ್ತೂ ಕೆಲವರಿಗೆ ತೊಡರು ಬಳ್ಳಿ.. ಹುಡುಕಿಕೊಂಡು ಹೋದದ್ದು ತಾನಾಗೆ ಸಿಕ್ಕಿದ ಹಾಗೆ.. ಇನ್ನೂ ಕೆಲವರಿಗೆ ಬಯಸದೇ ಬಂದ ಭಾಗ್ಯ.. ಬಹಳಷ್ಟು ಮಂದಿಗೆ ಪದೇ ಪದೇ ಎದುರಾಗೋ ಸೊಲು.. ಒಟ್ಟಾರೆ ಎಲ್ಲರಿಗೂ ಜೀವವೇ ಇಲ್ಲದ ಜೀವನ, ಈ ಪ್ರೀತಿ ಇಲ್ಲದ ಬದುಕು. ಈ ಪ್ರೀತೀಲಿ ಹಟವಿಟ್ಟ ಹುಡುಕಾಟ, ನೋವಿನ ನರಳಾಟ.. ಸಂತಸದ ಸವಿಯೂಟ.. ಬೇಸರದ ಬೇಗುದಿ.. ಸೋಲುವಾಗಲೆಲ್ಲ ಗೆಲುವು.. ಗೆದ್ದ ನಂತರದ ಸೋಲು.. ಅಸಂತ್ರುಪ್ತ ಆಶಯ.. ಅಪರಿಮಿತ ಆನಂದ. ಒಟ್ಟಾರೆ ಇಂಥದ್ದೇ ಅಂತ ನಿಖರವಾಗಿ ಹೇಳದೆ ಯಾರು ಬೇಕಾದ್ರೂ ತಮಗನ್ನಿಸಿದ ಮಟ್ಟಿಗೆ ಒಂದು ವಿಶ್ಲೇಷಣೆ ಕೊಡ ಬಲ್ಲ ಸರಳ ವಸ್ತು ಪ್ರೀತಿ. ವಿಚಾರ ಮಾಡಲಿಕ್ಕಷ್ಟೇ ಸರಳ.. ಅದನ್ನ ದಕ್ಕಿಸಿಕೊಳ್ಳೋದು.. ದಕ್ಕಿಸಿ ಕೊಂಡ ನಂತರ ಉಳಿಸಿ ಕೊಳ್ಳೋದು.. ಮೊದಲಿನ ತಾಜಾತನ ಕಾಯ್ದು ಕೊಳ್ಳೋದು ಎಲ್ಲಕ್ಕೂ ಹರಸಾಹಸ ಪಡಬೇಕು. ಆ ಹರಸಾಹಸಕ್ಕೇನೆ ಅಷ್ಟೆಲ್ಲ ಅವಾಂತರಗಳು ನಡೆಯೋದು ಅನ್ನಬಹುದೇನೋ. ಪ್ರೀತಿ ಬಬ್ಬಲ್ ಗಮ್ ಥರ ಶುರುವಿನಲ್ಲಷ್ಟೇ ಅಷ್ಟು ಸಿಹಿ ನಂತರ ಆ ಸಿಹಿಯ ಆಯಸ್ಸು ಕೂಡ ಮುಗಿತಾ ಬರ್ತದೆ. [ನಾ ಹೇಳಿದ್ದು ಪ್ರೀತಿ ಬಬ್ಬಲ್ ಗಂ ಥರ ಅಂತ.. ಪ್ರೇಮಿ ಅಲ್ಲ] ಸಪ್ಪೆ ಆದರೂ ಬಬ್ಬಲ್ ಗಮ್ ಜಗಿಯೋದೆ ನಮ್ಮ ಬದುಕಿನ ಕಲೆ. ಸಿಹಿ ಕಮ್ಮಿಯಾದ ಮಾತ್ರಕ್ಕೆ ಯಾರೂ ಉಗಿದು ಬಿಡೋಲ್ಲ.. ಬದುಕು ಬರಡಾಗೋ ತನಕ.. ಒಲವು ಒರಟಾಗೋ ತನಕ ಪ್ರೀತಿಯಲ್ಲಿ ಬದಲಾವಣೆ ಅನಂತ.
ReplyDeleteಚೆಂದದ ಲೇಖನ ಸಂಧ್ಯಾ ಜೀ..
ಅದಕ್ಕೇ ಪ್ರೀತಿಗೆ ಅರ್ಥ ಕಂಡುಕೊಳ್ಳಲು ಯಾರಿಗೂ ಇನ್ನೂ ಆಗದಿರೋದು!
ReplyDeleteಒಳ್ಳೆ ಲೇಖನ
ಪ್ರೀತಿಯೆಂದರೇ ಖುಷಿ ..
ReplyDeleteಚಂದದ ಬರಹ ಸಂಧ್ಯಾ...
Nice....
ReplyDeleteಚಂದದ ಬರಹ ಸಂಧ್ಯಾ..
ReplyDeleteಪ್ರೀತಿಯ ವಿವಿಧ ಮುಖಗಳನ್ನು ನಿನ್ನ ಬರಹದಲ್ಲಿ ಕಾಣಬಹುದು..
Thank you All...:)
ReplyDeleteಪ್ರೀತಿ ಪಾವನ,ಪವಿತ್ರ ಅಂತ ಹೇಳ್ತಾರೆ, ಆದ್ರೆ ಪಾರ್ಕಲ್ಲಿ ಪ್ರೀತಿ ಮಾನ ತೆಗಿತಾರೆ.. ಲಹರಿ ಇಷ್ಟ ಆತು ಸಂಧ್ಯಕ್ಕ.
ReplyDeleteಪ್ರೀತಿ ಅನ್ನೋದು ಹುಡುಗ ಹುಡುಗಿ ಮಧ್ಯನೇನಾ.. ಅಕ್ಕ ತಮ್ಮ, ಅಣ್ಣ-ತಂಗಿ.. ಹೀಗಿರೋಕೆ ಸಾಧ್ಯ ಇಲ್ವಾ ಅಂತ ನಾನೂ ಯೋಚಿಸಿದ್ದಿ ಕೆಲೋ ಸಲ..ಪ್ರೇಮಿಗಳ ದಿನದ ಬಣ್ಣಗಳ ಬಗ್ಗೆ ಕೇಳಿ, ನೋಡಿ ಗೊತ್ತಿತ್ತು. ಆದರೆ ಆದಿನದ ಲೇಡಿಸ್ ಪೀಜಿ ಪುರಾಣ ಗೊತ್ತಿರ್ಲೆ. ಒಂತರಾ ಹೊಸ ದುನಿಯಾಕ್ಕೆ ಹಣುಕಿದ ಹಾಗಾತು.
ಚೆಂದಿದ್ದು :-)
ಸಂಧ್ಯಕ್ಕ ನಿನ್ನ ಬರವಣಿಗೆ ತುಂಬಾ ತುಂಬಾ ಚೆನ್ನಾಗಿದೆ...
ReplyDeleteಬಣ್ಣ ಬಣ್ಣದ ಅಂಗಿ ತೊಟ್ಡ ಪುಟ್ಟ ತಂಗಿಯ ಬಣ್ಣ ಬಣ್ಣದ ಬರಹ
ReplyDelete