![]() |
Photo by : Dinesh Maneer http://www.dineshmaneer.com/ |
ಭಾವಗಳೂ ಬದಲಾಗುತ್ತವೆ ..
ಸಂಜೆ ಬಾನಂಚಲ್ಲಿ
ರಂಗು ಬದಲಾದಂತೆ ...
ಮನದ ಮನೆಯಲ್ಲಿ
ಅದಾಗಲೇ ಸಡಗರ ...
ತಂಗಾಳಿ ಹೊತ್ತು ತಂದ ಸುದ್ದಿ ..
ನಲ್ಲ ಬರುವನಂತೆ ..
ವಶಕ್ಕೊಪ್ಪಿಸಬೇಕು ನಾ
ನನ್ನೆಲ್ಲ ಭಾವಗಳ ಪಿಸುನುಡಿಯಲ್ಲಿ
ನಿನಗೆ ಮಾತ್ರ ಕೇಳುವಂತೆ
ನಿನ್ನ ಬಿಸಿಯಪ್ಪುಗೆಯಲ್ಲಿ ...
ಗಡಿಯಾರದ ಮುಳ್ಳುಗಳದೂ
ಮುಂದೋಡಲು ಮುಷ್ಕರ
ನೀ ಬರುವ ಹೊತ್ತಲ್ಲಿ ..
ನಾ ನನ್ನೊಳಗೆ ನಗುತಿರಲು
ನಿನ್ನ ಪ್ರತಿಬಿಂಬ ಕಾಣುವಾಸೆ
ಹೊರನೆಟ್ಟ ಕಂಗಳಲಿ ..
ಚಡಪಡಿಕೆಯ ಮನಸ್ಸು
ಕಾಯುವಿಕೆಯ ಮುನಿಸು ..
ನಿನ್ನ ಕಂಡಾಗ
ಮುಗುಳು ನಗೆಯಾಗಿ
ಬದಲಾಗುವದು ತುಟಿಯಂಚಲ್ಲಿ ..
great going , super Sandya as usual
ReplyDeletergds
Thank you Dineshanna... :)
Deleteಚೆನ್ನಾಗಿದೇರಿ ಸಂಧ್ಯಾ ಹಂಬಲ ಫಲಗೂಡಲಿ ಬೇಗ
ReplyDeleteThank you Sir...:)
DeleteNice one ..
ReplyDelete......... :)
ReplyDeleteThanks Mahendraa and Shree....
Deleteಹೇಳಲಾಗದ
ReplyDeleteಅವ್ಯಕ್ತ
ತುಮಲ.. ಹಂಬಲ..
ಚೆನ್ನಾಗಿ ಬಿಂಬಿತವಾಗಿದೆ...
ಸೂಪರ್ ಪುಟ್ಟವ್ವಾ.. !! keep writting...
Thanks Prakashanna...:)
Deleteಕಾತರದ ಕ್ಷಣಗಳ ವರ್ಣನೆ ಭಾವಪೂರ್ಣವಾಗಿದೆ!
ReplyDeleteThank you Sir..!!!
DeleteNice lines.
ReplyDeletebest of luck.
ಭಳಿರೆ ಸಂಧ್ಯಾ ಡಾರ್ಲಿಂಗ್... ಹೃದಯಕ್ಕೆ ಕಚಗುಳಿ ಇಡುವ ಕವನ... ಸುಂದರವಾಗಿದೆ ನಿನ್ನಂತೆಯೇ...
ReplyDeleteThanks Sush.... :)
Deletegood one sandhya... :)
ReplyDeleteಕಾಯುವಿಕೆ ಮತ್ತು ಆಕೆಯ ಒಲುಮೆಯ ಉತ್ಕಟತೆ ಬಹಳ ಚೆನ್ನಾಗಿ ಮೂಡಿ ಬಂದಿದೆ.
ReplyDeleteಶ್ರೀ. ದಿನೇಶ್ ಮುನೀರ್ ಅವರಿಗೆ ತಿಳಿಸಿರಿ ಛಾಯಾಗ್ರಹಣ ಅಮೋಘವಾಗಿದೆ ಅಂತ.
Thanks Sumathi akka and Badarinaath Sir.... :)
Deleteಚೆನ್ನಾಗಿದೆ.
ReplyDeleteಮನದ ಮನೆಯಲ್ಲಿ
ReplyDeleteಅದಾಗಲೇ ಸಡಗರ ...
ತಂಗಾಳಿ ಹೊತ್ತು ತಂದ ಸುದ್ದಿ ..
ನಲ್ಲ ಬರುವನಂತೆ ..
ಆಹಾ ಎಂಥ ಚಂದ......
ತೋರಿಸಬೇಕೆಂಬ ಹುಸಿಮುನಿಸು ನಲ್ಲ ಬರುವ ವೇಳೆಯಲ್ಲಿ
ಏನೆಂದರೂ ಬಿಡದೇ ನಸುನಗುವಾಗುವ ಘಳಿಗೆ...
ತುಂಬಾ ಚಂದ ಸಂಧ್ಯಾ.....
Thanks a lot Kiran and Raghava..:)
Deleteಕಾಯುವಿಕೆಯ ಭಾವ,ಭರವಸೆಯ ಭಾವ ,ನಿರೀಕ್ಷೆಯ ಬದುಕ ಭಾವ ..
ReplyDeleteವಾಹ್ ...! ಅಕ್ಷರಗಳಲ್ಲಿ ಇಷ್ಟೊಂದು ಭಾವಗಳ ಪೋಣಿಸೋದು ಸಂಧ್ಯಕ್ಕಂಗೆ ಮಾತ್ರ ಸಾಧ್ಯವಾ ?
ಹೌದು ಅನ್ನಿಸುತ್ತೆ...
ಸಂಜೆಯ ಬಾನಂಚ ಬಣ್ಣದಂತೆ ಮುದ್ದು ಮುದ್ದಾಗಿರಲಿ ನಲ್ಲನ ಆಗಮನ :)
ಚಂದದ ಭಾವ ಸಂಧ್ಯಕ್ಕಾ ...
ತುಂಬಾ ತುಂಬಾ ಇಷ್ಟ ಆಯ್ತು.
Thank you chinnu puttu....
Deletetumbaa sogasaagide.... manakke muda niDuva kavana... chennaagide...
ReplyDeleteತಂಗಾಳಿ ಹೊತ್ತು ತಂದ ಸುದ್ದಿ ..
ReplyDeleteನಲ್ಲ ಬರುವನಂತೆ .. Nice lines... :)
Thanks Dinakar Sir... and Thank you Kavya..:)
Deletechenda chenda..
ReplyDeleteತುಂಬಾ ಚೆನ್ನಾಗಿದೆ....ಇಷ್ಟವಾಯಿತು
ReplyDeleteThanks you Veena mam.. and Chandrashekar Sir,
DeleteThank you Ganesh Khare and Krishna Bhat..:)
ReplyDeleteಛಾಯ ಚಿತ್ರ ಪೆಟ್ಟಿಗೆಯ ಚಿತ್ರಕ್ಕೂ ಕೀಲಿ ಮನೆಯ ಅಕ್ಷರಕ್ಕೂ ಬೆಳಕು ನೆರಳಿನ ಭಾವನೆಗೂ ಸೇತುವೆಯಾದ ಈ ಕಿರು ಕವನ ನಿನ್ನ ಕ್ರಿಯಾಶೀಲತೆಯನ್ನು ಎತ್ತಿ ತೋರಿಸುತ್ತದೆ. ಸೂಪರ್ ಎಸ್ಪಿ
ReplyDelete