ಥತ್ ಈ ಟ್ರಾಫಿಕ್ ದಾಟಿ ಆ ಕಡೆಯ ಆಫೀಸ್ ಹೋಗಬೇಕೆಂದರೆ ಹಿಂಸೆ ಅನ್ನುತ್ತಾ ರಸ್ತೆ ದಾಟಲೋ ಬೇಡವೋ ಅಂತ ನೋಡುತ್ತಿದ್ದೆ. ಅಷ್ಟರಲ್ಲಾಗಲೇ ಎರಡೋ ಮೂರೋ ಆಟೋದವರು ಎದುರು ತಂದು ನಿಲ್ಲಿಸಿ ಬರುತ್ತೀನಾ ? ಎಂಬಂತೆ ಮುಖ ನೋಡಿದ್ದರು. ನಾವೇ ಕರೆದರೆ ಬರೋಲ್ಲ ಅನ್ನೋರು ರಸ್ತೆ ದಾಟೋವಾಗ ಅಡ್ಡ ಬರ್ತಾರಪ್ಪ ಅಂತ ಬೈಕೊತಿದ್ದೆ. ಅದೆಲ್ಲಿಂದ ಬಂದನೋ ಈ ಹುಡುಗ. ನಾ ನೋಡುತ್ತಿದ್ದಂತೆ ನನ್ನ ಕೈ ಹಿಡಿದು ಎಳೆದುಕೊಂಡು ರಸ್ತೆ ದಾಟಿಸಿಬಿಟ್ಟ .. !! ಬಾಯಿಗೆ ಬಂದಂತೆ ಬಯ್ಯ ಬೇಕೆಂದುಕೊಂಡವಳಿಗೆ ಬರುತ್ತಿದ್ದ ಏದುಸುರಿಗೆ ಮಾತನಾಡಲು ಆಗುತ್ತಿರಲಿಲ್ಲ. ಆತನೇ ಕೇಳಿದ "ನಿಮ್ಮನ್ನ ಡೈಲಿ ಬಸ್ಸಲ್ಲಿ ನೋಡುತ್ತೇನೆ, ಇಲ್ಲೇ ಹತ್ರ ಎಲ್ಲಾದ್ರು ವರ್ಕ್ ಮಾಡ್ತೀರಾ ? " ಹೌದು ಎಂಬಂತೆ ತಲೆಯಾಡಿಸಿದೆ. " ನನ್ನದು ಇಲ್ಲಿಯೇ ಕಾಲೇಜ್. ಇಬ್ಬರೂ ದಿನಾ ಒಂದೇ ಸ್ಟಾಪ್ ಲ್ಲೇ ಬಸ್ ಹತ್ತೋದು. ಬನ್ನಿ ಹೋಗೋಣ" ಅಂದ. ಕುಶಲವೇ ಕ್ಷೇಮವೇ ಎಲ್ಲ ವಿನಿಮಯವಾದಂತೆಲ್ಲ ಬಸ್ ಇಳಿದು ಆಫೀಸ್ ಗೆ ಹೋಗುವ ಒಂದೈದು ನಿಮಿಷದ ದಾರಿಗೆ ಆ ಹುಡುಗ ಗೆಳೆಯನಾದ. ನನ್ನ ಆಫೀಸ್ ಮತ್ತು ಅವನ ಕಾಲೇಜ್ ಗೆ ಕವಲೊಡೆಯುವ ದಾರಿಯವರೆಗೂ ಆತ ಜೊತೆ ನನಗೆ. ಇಬ್ಬರೂ ಒಂದೇ ಸ್ಟಾಪ್ ನಲ್ಲೆ ಹತ್ತುತ್ತೇವೆ ಆದರೂ ಹತ್ತುವ ಜಾಗದಲ್ಲಿ, ಬಸ್ಸಿನಲ್ಲೆಲ್ಲ ತೀರ ಅಪರಿಚಿತರಂತೆ ಇರುವ ನಾವು ಆಫೀಸ್ ದಾರಿಯಲ್ಲಿ ಮಾತ್ರ ಹುಟ್ಟಾಪರಿಚಿತರಂತೆ .. !!
ಇಷ್ಟು ಮಾತ್ರದ ದೂರವನ್ನು ಅಷ್ಟೆನಿಸುವಂತೆ ನಿಧಾನಕ್ಕೆ ಹೆಜ್ಜೆ ಹಾಕಿ ನಡೆಯಲು ನಮ್ಮಿಬ್ಬರಿಗೂ ಇಷ್ಟ. ಒಂದೊಂದು ದಿನ ಎಲ್ಲ ತಮಾಷೆಯಂತೆ ತೋರುತ್ತಾ ಮಾತನಾಡುವ ನಾವು ಕೆಲವೊಮ್ಮೆ ಸಿಕ್ಕಾಪಟೆ ಸಿರಿಯಸ್ ಆಗಿ ಬಿಡ್ತೀವಿ. ಅವತ್ತು ಹಾಗೆಯೇ ಅವನೇ ಕೇಳಿದ್ದ " ಅಲ್ಲ ಕಣೆ ಇಲ್ಲಿ ಇಷ್ಟೊಂದು ಬಸ್ ಓಡಾಡುತ್ತವೆ. ಎಲ್ಲಾ ಬಸ್ ಗಳೂ ಒಂದೇ ಬಣ್ಣ. ಆದ್ರೆ ನಾವು ಬರೋ ಬಸ್ ನೋಡು ಎಷ್ಟೊಂದು ಬಣ್ಣಗಳಿವೆ " " ಹೌದು ಕಣೋ ಬದುಕಿಗೇ ಸಾವಿರ ಬಣ್ಣವಂತೆ, ಇನ್ನು ನಾವ್ ಬರೋ ಬಸ್ಸಿಗೆ ಅಷ್ಟು ಬಣ್ಣಗಳಿರೋದು ಆಶ್ಚರ್ಯನಾ ? " ಅಂದೆ. "ಬದುಕು ಅನ್ನೋದನ್ನ ಅಷ್ಟು ಪ್ರೀತಿಸ್ತೀಯಲ್ಲ ನೀನು . ಬದುಕು ನಿನಗೆ ಬೇಕಾಗಿದ್ದೆಲ್ಲವನ್ನೂ ಕೊಟ್ಟಿದೆಯಾ ?" "ಬದುಕು ಸಾಕಷ್ಟು ಕೊಟ್ಟಿದೆ, ನನಗೆ ಬೇಕಾದ್ದನ್ನು ನಾನಾರಿಸಿಕೊಂಡಿದ್ದೇನೆ" ಅಂದೆ ನಗುತ್ತಾ. " ಬೇಕಾದವರನ್ನೂ ?" ಅಂತ ಬಂದ ಪ್ರಶ್ನೆಗೆ ಏನು ಹೇಳಬೇಕೋ ಅರ್ಥವಾಗದೆ " ಅದು ಕೊಟ್ಟಿಲ್ಲ, ನಾನೂ ಕೇಳಿಲ್ಲ " ಅಂದುಬಿಟ್ಟೆ. ಅಲ್ಲಿಗೆ ದಾರಿ ಕವಲಾಗಿತ್ತು. ಬೈ ಎನ್ನುತ್ತಾ ಕೈ ಬೀಸಿ ಹೋದವನನ್ನು ನೋಡುತ್ತಿದ್ದವಳು ಮನಸ್ಸನ್ನೋದುವ ಶಕ್ತಿಯೇನಾದರೂ ಇದೆಯಾ ಈ ಹುಡುಗನಿಗೆ ಎಂದು ವಿಸ್ಮಿತಳಾಗಿದ್ದೆ.
ಹೀಗೆ ಗಲಾಟೆ, ಸೀರಿಯಸ್ ಗಳ ನಡುವೆ ದಿನ ಕಳೆಯುತ್ತಿದೆ. ನಾವು ಹೋಗುವ ದಾರಿಯಲ್ಲಿ ಯಾವಾಗಲೂ ಕಪ್ಪು ಕಾರೊಂದು ನಿಂತಿರುತ್ತದೆ. ಇಷ್ಟು ದಿನ ಅದರ ಬಗ್ಗೆ ಗಮನವಿರದಿದ್ದರೂ ಸುಮಾರು ತಿಂಗಳ ಹಿಂದೆ ಕಪ್ಪು ಕಾರಿನ ಹತ್ತಿರ ಬಂದರೆ ಹುಡುಗ ನಿಧಾನ ಬರ್ತೀನಿ ನೀ ಮುಂದೆ ಹೋಗು ಎನ್ನುತ್ತಾನೆ. ನಾನೂ ಯಾವತ್ತು ಹಿಂದೆ ತಿರುಗಿ ನೋಡಿಲ್ಲ. ಹಾಗೆ ನೋಡಿದರೆ ಅವನ ಮೇಲಿನ ನಂಬಿಕೆಗೆ ದ್ರೋಹ ಬಗೆದಂತೆ ಅನಿಸುತ್ತೆ ನಂಗೆ. ಆದರೆ ದಾರಿಯುದ್ದಕ್ಕೂ ಅವನನ್ನು ಮಿಸ್ ಮಾಡಿಕೊಳ್ಳುತ್ತೇನೆ, ಅವನ ಕಾಲೇಜ್ ಇರದಿದ್ದಾಗ ಅವನನ್ನು ಮಿಸ್ ಮಾಡಿಕೊಂಡಂತೆ. ಕಾಲೇಜ್ ಇಲ್ಲದಿದ್ದರೂ ಅವತ್ತು ಅವನ ಬಸ್ಸಲ್ಲಿ ಕಂಡಾಗ ಆಶ್ಚರ್ಯವಾಯ್ತು. ಇಳಿದು ಒಟ್ಟಿಗೆ ಹೋಗುವಾಗ ಕಪ್ಪು ಕಾರಿಗಿಂತಲೂ ಮೊದಲೇ ನನ್ನ ನಿಲ್ಲಿಸಿ ಇಲ್ಲೇ ಕುಳಿತುಕೊಳ್ಳೋಣ ಎಂದವನು ನನ್ನ ಕೈ ಹಿಡಿದುಕೊಂಡು " ಜೀವನದಲ್ಲಿ ಕೆಲವೊಮ್ಮೆ ಏನೂ ಅಲ್ಲದವರು ಇಷ್ಟು ಹತ್ತಿರವಾಗುತ್ತಾರೆ ಅಂತ ಗೊತ್ತಾಗೊಲ್ಲ. ನಿನ್ನ ಕಂಡರೆ ಇಷ್ಟ ನಂಗೆ. ನಿನ್ನನ್ನಲ್ಲದೇ ಇನ್ಯಾರನ್ನೂ ನಂಬೋದು ಕಷ್ಟ ನಂಗೆ. ಅದಕ್ಕೆ ನಿನಗೆ ಹೇಳ್ತಿದೀನಿ. ಅವಳು ನನ್ನ ಗೆಳತಿ. ಇತ್ತೀಚಿಗೆ ತುಂಬಾ ಹಚ್ಚಿಕೊಂಡು ಬಿಟ್ಟೆ ಅವಳನ್ನ. ಪ್ರೀತಿಯಲ್ಲಿದೀನಿ ಕಣೆ ನಾನು. ಅವಳನ್ನು ತುಂಬಾ ಪ್ರೀತಿಸ್ತೀನಿ. ಎಲ್ಲವನ್ನೂ ಹೇಳಿಬಿಟ್ಟೆ ನಿನ್ನೆ ಅವಳಿಗೆ..!! ಈಗ ಭಯವಾಗುತ್ತಿದೆ. ಕಪ್ಪು ಕಾರಿನ ಪಕ್ಕ ಯಾವತ್ತೂ ಅವಳು ನನಗಾಗಿ ಕಾಯುತ್ತಾಳೆ. ಅದಕ್ಕಾಗಿಯೆ ಅಲ್ಲಿಂದ ನಾನು ನಿಧಾನವಾಗಿ ಬರ್ತೀನಿ." ಅಂತ. ಅವಳೊಂದಿಗಿನ ಮುಂದಿನ ಬದುಕಿನ ಕನಸನ್ನೆಲ್ಲ ಬಿಚ್ಚಿಟ್ಟರೆ ಅವನ ಕಣ್ಣ ಹೊಳಪಿಗೆ ಮರುಳಾಗಿ ಬಿಟ್ಟಿದ್ದೆ. ಖುಷಿಯನ್ನೆಲ್ಲ ತಂದು ಮಡಿಲೊಳಗೆ ಸುರಿದಂತಾಗಿತ್ತು. ಯಾಕೋ ಕಾಲೇಜ್ ಮುಗಿಸಿ ಸೆಟ್ಲ್ ಆಗು ಆಮೇಲೆ ಈ ಪ್ರೀತಿ ಪ್ರೇಮ ಎಲ್ಲ ಅಂತಾ ಲೆಕ್ಚರ್ ಕೊಡೊ ಮನಸ್ಸು ಬರಲೇ ಇಲ್ಲ. "ಆಲ್ ದಿ ಬೆಸ್ಟ್, ಎಲ್ಲ ಒಳ್ಳೆದಾಗುತ್ತೆ" ಅಂತ ಹೇಳಿ ಬಂದುಬಿಟ್ಟಿದ್ದೆ.
ಈಗ ಆ ಹುಡುಗನಿಗೆ ಕಪ್ಪು ಕಾರಿನ ಪಕ್ಕದ ಬೆಳ್ಳಿ ತಾರೆಯೊಬ್ಬಳು ಸಿಕ್ಕಿದ್ದಾಳೆ. ಆಕೆಯದೊಂದು ಮಲ್ಲಿಗೆಯಂಥ ಮುಗುಳ್ನಗೆ ಕಾಯುತ್ತಿರುತ್ತದೆ. ನೀ ಮುಂದೆ ಹೋಗು ಎಂದು ಗೋಗರೆದರೂ ಕೇಳದೆ ಅವರ ಹಿಂದೆ ಅವರಿಗಿಂತ ನಿಧಾನ ಹೆಜ್ಜೆ ಹಾಕುತ್ತಾ ಅವರನ್ನು ನೋಡುತ್ತಾ ಹೋಗುವಲ್ಲಿ ಖುಷಿಯಿದೆ. ಜಗಳ ಕಾಯುತ್ತ ಕೈ ಕೈ ಹಿಡಿದು ಹೋಗುವ ಅವರನ್ನು ನೋಡಿದರೆ ಅಕಸ್ಮಾತ್ ಆಗಿ ನಿನ್ನ ಕೈ ಬೆರಳುಗಳ ನಡುವೆ ಸಿಕ್ಕಿಕೊಂಡ ನನ್ನ ಕಿರುಬೆರಳನ್ನು ಬಿಡಿಸಿಕೊಳ್ಳುವ ಸಣ್ಣ ಪ್ರಯತ್ನವನ್ನೂ ಮಾಡದೆ ನಿನ್ನೊಂದಿಗೆ ಅಷ್ಟು ದೂರ ಹೆಜ್ಜೆ ಹಾಕಿದ ನೆನಪಾಗುತ್ತದೆ.
ಕಣ್ಣೊಳಗೊಂದು ದೀಪದ ಮಿನುಗು, ತುಟಿಯಂಚಲ್ಲೊಂದು ಸಣ್ಣ ಕಿರುನಗೆ..
ಫೋಟೋ: ರಂಜಿತಾ ಹೆಗಡೆ.
ಈಗ ಆ ಹುಡುಗನಿಗೆ ಕಪ್ಪು ಕಾರಿನ ಪಕ್ಕದ ಬೆಳ್ಳಿ ತಾರೆಯೊಬ್ಬಳು ಸಿಕ್ಕಿದ್ದಾಳೆ. ಆಕೆಯದೊಂದು ಮಲ್ಲಿಗೆಯಂಥ ಮುಗುಳ್ನಗೆ ಕಾಯುತ್ತಿರುತ್ತದೆ. ನೀ ಮುಂದೆ ಹೋಗು ಎಂದು ಗೋಗರೆದರೂ ಕೇಳದೆ ಅವರ ಹಿಂದೆ ಅವರಿಗಿಂತ ನಿಧಾನ ಹೆಜ್ಜೆ ಹಾಕುತ್ತಾ ಅವರನ್ನು ನೋಡುತ್ತಾ ಹೋಗುವಲ್ಲಿ ಖುಷಿಯಿದೆ. ಜಗಳ ಕಾಯುತ್ತ ಕೈ ಕೈ ಹಿಡಿದು ಹೋಗುವ ಅವರನ್ನು ನೋಡಿದರೆ ಅಕಸ್ಮಾತ್ ಆಗಿ ನಿನ್ನ ಕೈ ಬೆರಳುಗಳ ನಡುವೆ ಸಿಕ್ಕಿಕೊಂಡ ನನ್ನ ಕಿರುಬೆರಳನ್ನು ಬಿಡಿಸಿಕೊಳ್ಳುವ ಸಣ್ಣ ಪ್ರಯತ್ನವನ್ನೂ ಮಾಡದೆ ನಿನ್ನೊಂದಿಗೆ ಅಷ್ಟು ದೂರ ಹೆಜ್ಜೆ ಹಾಕಿದ ನೆನಪಾಗುತ್ತದೆ.
ಕಣ್ಣೊಳಗೊಂದು ದೀಪದ ಮಿನುಗು, ತುಟಿಯಂಚಲ್ಲೊಂದು ಸಣ್ಣ ಕಿರುನಗೆ..
ಸಂಧ್ಯಾಪುಟ್ಟಾ ಚನ್ನಾಗಿದೆ...ಕಥೆ...ಆದರೆ ಕೊನೆಯ ನಾಲ್ಕೈದು ಸಾಲು ಏನೋ ಬೇಗ ಹೇಳಿ ಮುಗಿಸುವ ಹಾಗೆ ಅನಿಸ್ತು... ಸಾವಾಕಾಶವಾಗಿ ಅಂತ್ಯಕ್ಕೆ ಬರಬಹುದಿತ್ತು...ಆದರೂ..ಈ ಸಾಲುಗಳು ನಮ್ಮ ಮೆದುಳಿಗೆ ಕಸರತ್ತು ನೀಡುವುದಂತೂ ನಿಜ,,, ಅದಿದ್ದರೆ ಏನೋ ಓದಿ ತಾನೂ ಸ್ವಲ್ಪ ಬರೆದಂತೆ ಅನ್ಸುತ್ತೆ...!!! ಹಹಹ
ReplyDeleteಕರೆಕ್ಟು ಅಜಾದಣ್ಣ ... ಕಸರತ್ತು ಕೊಟ್ಟಿದ್ದಂತೂ ನಿಜ... ನಾನಂತೂ ೨-೨ ಸಲ ಓದಿಕೊಂಡೆ.... :) ಸಂಧ್ಯಾ ಒಳ್ಳೆಯ ಬರಹ ಕಣೇ :) :) Liked it :)
Deleteಬಹು ಪಾಲು ಹುಡುಗರಿಗೆ ಮೊದಲ ಒಲವು ಬೆಳ್ಳಿ ತಾರೆಯೇ! ಸಿಕ್ಕರೆ ಅದೃಷ್ಟವಂತ ಇಲ್ಲದಿದ್ದರೆ ಯಥಾ ಪ್ರಕಾರ ಕೊರಗು ಬದುಕಿನ ಪೂರಾ...
ReplyDeleteಎಂದಿನಂತೆ ಸರಳತೆಯೇ ಮೈವೆತ್ತಂತೆ, ಆಪ್ತ ಭಾಷೆಯಲ್ಲಿ ಮಾತಿಗಿಳಿಯುವ ನಿಮ್ಮ ಬರಹಗಳು ಹೆಚ್ಚು ಹೆಚ್ಚು ಬರಲಿ ಇನ್ನೂನು...
ನೀವು ಹೇಳಿದಂತೆ ಆಟೋಗಳ ಕಿರಿ ಕಿರಿ ಪಟ್ಟಿಯಲ್ಲಿ ಇದೂ ಒಂದು.
"ಬದುಕು ಸಾಕಷ್ಟು ಕೊಟ್ಟಿದೆ, ನನಗೆ ಬೇಕಾದ್ದನ್ನು ನಾನಾರಿಸಿಕೊಂಡಿದ್ದೇನೆ"
ReplyDelete" ಅದು ಕೊಟ್ಟಿಲ್ಲ, ನಾನೂ ಕೇಳಿಲ್ಲ "
ಆಹಾ..
ಎಷ್ಟೆಷ್ಟನ್ನೋ ಕೊಟ್ಟ ಬದುಕು ನಮಗೆ ಬೇಕಾದ್ದನ್ನು ಮಾತ್ರ ಆರಿಸಿಕೊಂಬ ಸ್ವಾತಂತ್ರ್ಯವನ್ನೂ ಕರುಣಿಸಿದರೆ... ಅದು ಕೊಟ್ಟಿಲ್ಲವಾದುದನ್ನು ನಾವಾಗಿ ಕೇಳದಿರುವಂಥ ಮನಸ್ಥಿತಿ ನಮ್ಮಲ್ಲಿ ರೂಢಿಗತವಾದರೆ... ವಾಹ್... ಇನ್ನೇನು ಸಾಧಿಸಬೇಕಿದೆ...
ಚಂದದ ಬರಹ...
ತುಂಬಾ ಚೆನ್ನಾಗಿದ್ದು.... ಸಂಧ್ಯಾಕ್ಕಾ :)
ReplyDeleteishta aaytu kathe, baraha eradoo, like always :) keep writing sandhya .
ReplyDeleteMast . :)
ReplyDeleteತುಂಬಾ ಚಂದವಿದೆ.....
ReplyDeleteಬದುಕು ನಮಗೆ ಏನೇನೆಲ್ಲವನ್ನೂ ಕೊಡುತ್ತೆ....
ಆದರೆ ನಮಗೆ ಬೇಕಾಗಿದ್ದನ್ನೇ ಆರಿಸಿಕೊಳ್ಳೊಕೆ ಎಷ್ಟು ಬಾರಿ ಬಿಡುತ್ತೆ ಹೇಳು...???
ಎಷ್ಟೋ ಸಲ ನಮಗೆ ಸಿಕ್ಕಿದ್ದನ್ನೇ.. "ನಾವು ಆರಿಸಿಕೊಂಡದ್ದು' ಅಂತ ಹೇಳಬೇಕಾಗುತ್ತೆ...
ಆದರೆ ನಿನ್ನ ಆ ವಾಕ್ಯಕ್ಕೆ ಸಖತ್ ಧಮ್ಮಿರೋದಂತೂ ನಿಜ...
ಖುಷಿಯಾಯ್ತು ಓದಿ.....
ತುಂಬಾ ಚೆನ್ನಾಗಿದೆ ಕಥೆ ಸಂಧ್ಯಾ... ಬದುಕಿನಲ್ಲಿ ಬದಲಾವಣೆ ಬರುತ್ತಲೇ ಇರುತ್ತವೆ.. ಬಂದದ್ದು ಸ್ವೀಕರಿಸುವುದೇ ಜೀವನ.
ReplyDeleteತುಂಬಾ ಚೆನ್ನಾಗಿ ಬರೆದಿದ್ದೀರಾ... ಇಷ್ಟವಾಯ್ತು :)
ReplyDeleteWonderful writing.
ReplyDeleteಎಂದಿನಂತೆ ಸೂಪರ್.....
ReplyDeleteಕಥೆ ಶುರುವಿಗೆ ಆರಿಸಿಕೊಂಡ ಸಂದರ್ಭ ಖುಷಿ ಕೊಡ್ತು... :)
Thank you All...:)
ReplyDeleteಜಿಂಕೆಯಂತೆ ಎಗರಿ ಎಗರಿ ಅಲ್ಲಿ ಇಲ್ಲಿ ಹಾರುವೆ.. ಮಂಗನಂತೆ ಮರವ ಏರಿ ಜರ್ ಎಂದು ಜಾರುವೆ .. ಎರಡು ನಕ್ಷತ್ರಗಳು ಚಿತ್ರದ ಹಾಡು ನೆನಪಿಗೆ ಬಂತು..
ReplyDeleteಜಾರುವುದಕ್ಕೆ ಅಪಾರ ಅವಕಾಶವಿದ್ದರೂ.. ಅಥವಾ ಪರಿಸ್ಥಿತಿಯನ್ನು ದುರುದ್ದೇಶಕ್ಕೆ ಉಪಯೋಗಿಸುವ ಅವಕಾಶವಿದ್ದರೂ.. ಒಂದು ಸುಂದರ ಸುಮಧುರ ಗೆಳೆತನಕ್ಕೆ ಅರ್ಥ ಕೊಟ್ಟು ಹಾಗೆ ಅದನ್ನು ನಿಭಾಯಿಸಿಕೊಂಡು ಹೋಗುವ ಪರಿ ಇಷ್ಟವಾಯಿತು.
ಮನಸ್ಸಲ್ಲಿ ಯಾವುದೇ ಆಸೆ ಇಟ್ಟುಕೊಂಡು ಯಾರೂ ನೆಮ್ಮದಿಯಿಂದ ಇರಲು ಸಾಧ್ಯವಾಗದೆ ಇರೋದಕ್ಕಿಂತ ಬದುಕನ್ನು ಅಪಾರವಾಗಿ ಪ್ರೀತಿಸುವ ನೋಟ ಸುಂದರ
ಒಂದು ಸುಮಧುರ ಲೇಖನ ಮತ್ತು ಗೆಳೆತನಕ್ಕೆ ಲೇಪನ ಕೊಟ್ಟ ನೋಟ ಸೂಪರ್ ಎಸ್ ಪಿ
ನಿಮ್ಮ ಲೇಖನಗಳು ಉತ್ತಮವಾಗಿದೆ,
ReplyDeleteನೀವು ನನ್ನ ಜಾಲತಾಣಕ್ಕೆ ಬೇಟಿ ನೀಡಿ,
****
ವೈಶಿಷ್ಟ್ಯಗಳು
***
ಲೈವ್ ಕ್ರಿಕೇಟ್, ಕನ್ನಡದ ಪತ್ರಿಕೆ (ದಿನ, ವಾರ, ಮಾಸ)ಗಳು,
ಎಲ್ಲ ದೇಶಗಳ ಸಮಯ, 1 ಜಾನಪದ ವಿಡಿಯೋ, ಪ್ರಮುಖ U-Tube ವಿಡಿಯೋಗಳು,
ಇರುವೆಗಳ ಜಗತ್ತು, ನಿಮ್ಮ ಮಾತು ಕೇಳುವ ಮೀನು,
ನೀವು ಹುಟ್ಟಿದ ವಾರ ತಿಳಿಯಿರಿ ಮತ್ತು ಹಲವಾರು ಮಾಹಿತಿಗಳು ಒಂದೇ ಜಾಲತಾಣದಲ್ಲಿ ಲಬ್ಯವಿದೆ.
**
ನೀವೂ ನೋಡಿ ಇತರರಿಗೂ ತಿಳಿಸಿರಿ.
**
www.spn3187.blogspot.in
Simple and sweet. Even the picture is beautiful. Liked it :)
ReplyDelete