ಖುಷಿಯಾಗುತ್ತಿದೆ . ಗೆಳೆಯ ಗೆಳತಿಯರೆಲ್ಲ ಹೊಸ ಬಾಳಿಗೆ ಅಡಿ ಇಡುತ್ತಿದ್ದಾರೆ . ನವೆಂಬರ್ 28 ರಿಂದ ಡಿಸೆಂಬರ್ 18 ರವರೆಗಿನ ಸರಿ ಸುಮಾರು 7 ರಿಂದ 8 invitation card ಗಳು ನನ್ನ ಕೈಲಿವೆ . ಮದುವೆಯೆಂದರೆ ... ಅಂತ ಶುರು ಮಾಡಿ ಅದರ ಆದಿ ಅಂತ್ಯದವರೆಗೆ ಬರೆದು ಇತಿಶ್ರೀ ಹಾಡಿ ಎಲ್ಲರನ್ನು bore ಹೊಡೆಸಲಾರೆ .
"ಪ್ರತಿದಿನವೂ ಹೊಸ ಕುತೂಹಲಗಳೊಂದಿಗೆ ಶುರುವಾಗಿ , ನಾಳೆಯೆಡೆಗೊಂದಿಷ್ಟು ಕುತೂಹಲ , ಕನಸುಗಳನ್ನು ಕೊಡುತ್ತಾ ಸಶೇಷವಾಗಲಿ ಬದುಕು .. "
ಗೆಳತಿ ಮಮತಾಳ ಮದುವೆ ಕರೆಯೋಲೆಗಾಗಿ ಒಂದೆರಡು ಸಾಲುಗಳನ್ನು ಗೀಚಿದ್ದೆ. ಅದರೊಂದಿಗೆ ಎಲ್ಲ ಗೆಳೆಯ ಗೆಳತಿಯರಿಗೂ , ಅವರೊಡನಾಡಿಯಾಗಿ , ಜೀವನಾಡಿಗಳಾಗಿ ಬರುವವರಿಗೂ ನನ್ನ ಪುಟ್ಟದೊಂದು ಹಾರೈಕೆಯಿದೆ
ಎದೆಯೆತ್ತರಕ್ಕೆ ಬೆಳೆದ ಮಗಳು ತೊಡೆಯೇರಿ
ಕುಳಿತಿರಲು ಹೊಸ ಬಾಳ ಪಯಣಕ್ಕೆ "ನಾಂದಿ"
ಮಂಟಪದಿ ಅಂತರಪಟ ಸರಿಯೇ "ಮಾಲೆ"ಗಳು
ಬದಲಾಗಲು ಭಾವದಲ್ಲೂ ಬದಲಾವಣೆ ..
"ತಾಳಿ" ತಾಳ್ಮೆಗೆ ಸಂಕೇತವಾದರೆ "ಪಾಣಿಗ್ರಹಣ"ದಿ
ಜೊತೆಯಿರುವ ಭರವಸೆ ...
ಲೆಕ್ಕಕ್ಕೆ ಏಳಾದರೂ ಲೆಕ್ಕವಿರದಷ್ಟು ಹೆಜ್ಜೆಗಳಿಗೆ
"ಸಪ್ತಪದಿ"ಯ ಮುನ್ನುಡಿ ..
ಹೊಸ ಸಂಸ್ಕಾರಕ್ಕೆ "ಅಗ್ನಿಸಾಕ್ಷಿ "
"ವರಪೂಜೆ" ಯಲ್ಲಿ ಅಳಿಯ ದೇವರಾದರೆ
ಗೃಹಲಕ್ಷ್ಮಿಯಾಗಿ "ವಧುಪ್ರವೇಶ" ..
ಅಕ್ಷತೆಯೊಂದಿಗೆ ಅಕ್ಷಯವಾಗಲಿ ಬದುಕು .. ಜೀವನದಿಯಾಗಲಿ ಪ್ರೀತಿ ..
Very good.
ReplyDeleteGood one Sandhya :-)
ReplyDeleteನಿನ್ನ ಶುಭ ಹಾರೈಕೆ ಮದುಮಕ್ಕಳಿಗೆ ಜೇನಿನ ಸಿಂಚನದ ಹಾಗೆ ಇದೆ ಪುಟ್ಟಿ. ಪ್ರೀತಿಯ ತಂಗ್ಯವ್ವ ನಿನ್ನ ಮನದಾಳದ ಶುಭ ಹಾರೈಕೆ ಓದಿ ಖುಷಿಯಾಗಿದೆ. ನಿನಗೆ ಒಳ್ಳೆಯದಾಗಲಿ
ReplyDeleteWoww very nice Sandhya...
ReplyDeleteಎದೆಯೆತ್ತರಕ್ಕೆ ಬೆಳೆದ ಮಗಳು ತೊಡೆಯೇರಿ
ಕುಳಿತಿರಲು ಹೊಸ ಬಾಳ ಪಯಣಕ್ಕೆ "ನಾಂದಿ"---- ತುಂಬಾ ಇಷ್ಟವಾದ ಸಾಲು :)
ಅವರಿಗೆ ನಮ್ಮ ಕಡೆಯಿಂದಲೂ ಶುಭಾಶಯ ಕೋರಿಬಿಡಿ.
ReplyDeletewonderful..
ReplyDeleteಲೆಕ್ಕಕ್ಕೆ ಏಳಾದರೂ ಲೆಕ್ಕವಿರದಷ್ಟು ಹೆಜ್ಜೆಗಳಿಗೆ
ReplyDelete"ಸಪ್ತಪದಿ"ಯ ಮುನ್ನುಡಿ .. ಚಂದದ ಸಾಲುಗಳು
ಮದ್ವೆ ಬಗ್ಗೆ ಬರೆದ ಸಾಳುಗಳು ಇಷ್ಟವಾದ್ವು ಅಕ್ಕೋಸ್ ;-)
ReplyDeleteThis comment has been removed by the author.
ReplyDelete" ಲೆಕ್ಕಕ್ಕೆ ಏಳಾದರೂ ಲೆಕ್ಕವಿರದಷ್ಟು ಹೆಜ್ಜೆಗಳಿಗೆ
ReplyDelete"ಸಪ್ತಪದಿ"ಯ ಮುನ್ನುಡಿ .. " - Amazing creation, madam.
Thank you all
ReplyDeleteಹೆಲೋ ಸಂಧ್ಯಾ,
ReplyDeleteನಿಮ್ಮ ಬ್ಲೋಗ್‌ನ ಇತ್ತೀಚೆಗಸ್ಟೇ ಓದಲು ಶುರು ಮಾಡಿದೆ, ಆದ್ರೆ, 3 ದಿನದಲ್ಲೇ ಸುಮಾರ್ ಪೋಸ್ಟ್ ಗಳನ್ನ ಓಧಿಬಿಟ್ಟೆ.
ನಾನು ಬ್ಲೋಗ್ ಬರೆಯಲು ಶುರು ಮಾಡಿದ್ದೇನೆ, ಪ್ರಕ್ಷಾಣ್ಣ ನಾ ಹಾಗೆ, ನೀವು ಕೂಡ ನನಗೆ ಸ್ಪೂರ್ತಿ ಕೊಟ್ಟವರಲ್ಲಿ ಒಬ್ಬರು.
ನನ್ನ ಬ್ಲೋಗ್ http://aakshanagalu.blogspot.in/, ನಿಮ್ಮ ಬಿಡುವಿನ ಸಮಯದಲ್ಲಿ ಓದಿ, ನನಗೆ ನಿಮ್ಮ ಸಲಹೆ, ಸೂಚನೆ, ಟೀಕೆ ಗಳು ತುಂಬಾನೇ ಸಹಾಯವಾಗುತ್ತವೆ.