ಗೊಲ್ಲನೆಂಬರು.. ನಲ್ಲನೆಂಬರು..
ನಾ ನೀಲ ವರ್ಣದವ ಮೇಘಶ್ಯಾಮ..
ಬಾಲನಿನ್ನೂ ನಿನ್ನ ಮಗ
ಹೊಡೆಯದಿರೆ ಅಮ್ಮಾ....
ಜೇನ ತೆಗೆಯುವವ ಕೈ ನೆಕ್ಕದೆ ಇದ್ದಾನೇನೆ ?
ಗೋ ಮಾತೆಯ ಕಾಯ್ವವ ನಾ ಕದ್ದು ಹಾಲು
ಕುಡಿದರೆ ತಪ್ಪೇನೆ ?
ಅಟ್ಟಾಡಿಸಿ ಕೋಲ ತೆಗೆದುಕೊಂಡು
ಓಡಿಸಬೇಡ ಮಹರಾಯ್ತಿ..
ದೊಡ್ಡವನಾದಂತೆ ತುಂಟಾಟಕ್ಕಿಲ್ಲವೇ ರಿಯಾಯಿತಿ..
ನಿನಗೆ ಚಾಡಿ ಹೇಳಿದವರೇ
ಸುಮ್ಮಗೆ ಕರೆದು ಕೊಡುವರು
ನೀನೆ ಕೇಳು ತಿಳೀದೀತು ನಿಜಾಯತಿ..
ಹೊಡೆದಂತೆ ನಟಿಸಿ, ಕೋಲ ಒಲೆಗೆಸೆದು..
ದೃಷ್ಟಿ ತೆಗೆದು, ನೆಟಿಕೆ ಮುರಿದು
ಮಡಿಲಲ್ಲಿ ಕೂರಿಸಿಕೊಂಡು ನೊರೆ ಹಾಲ
ಕೊಡುವವಳು ನೀ ಕ್ಷಮಾಯಾಧರಿತ್ರಿ..
ಮಡಿಲ ತುಂಬಿ ನೊರೆ ಮೀಸೆಯಡಿಯಲ್ಲಿ
ನಗುವ ನಾ ಜಗನ್ನಾಟಕ ಸೂತ್ರಧಾರಿ
ಭಾವಪೂರ್ಣ ಕವಿತೆ..ಇಷ್ಟವಾಯ್ತು. ಒಮ್ಮೆ ನನ್ನ ಬ್ಲಾಗಿಗೂ ಭೇಟಿ ಕೊಡಿ. sarovaradallisuryabimba.blogspot.in
ReplyDeleteThis comment has been removed by the author.
ReplyDeleteThis comment has been removed by the author.
ReplyDeleteDayavittu bareyuvudannu nillisbedi Sandhyaravare! Nimma barahagalannu oduttiddare manasina dugudagalu duravaguttave. Please keep on writing.
ReplyDelete- Ishwar Patil