Tuesday, 6 March 2012

ಮೌನ ಶಿಲೆ....


ನಿನ್ನ ಕಣ್ಣುಗಳೇ ತಾವರೆಗಳು ಎಂದವನು
      ಬಾಳನ್ನು ಕಣ್ಣಿರ ಕೊಳವಾಗಿಸಿ  ಬಿಟ್ಟೆ...
      ನಿನ್ನ ಮಾತೆ ಮುತ್ತುಗಳು ಎಂದವನು 
      ಮೌನ ಶಿಲೆಯಾಗಿಸಿ ಬಿಟ್ಟೆ...
      ನಮ್ಮಿಬ್ಬರ ನಡುವೆ ಕಂದಕಗಳೇ 
ಬರಲಾರವು ಎಂದವನು
     ವಂಚನೆ, ಅಪನಂಬಿಕೆಯ  
ಪರ್ವತವನ್ನೇ ಎಬ್ಬಿಸಿಬಿಟ್ಟೆ.... !!!

6 comments:

  1. ಬಹಳ ಚೆನ್ನಾಗಿ ಬರೆದಿದ್ದೀರಿ...ಇಷ್ಟವಾಯ್ತು...

    ReplyDelete
  2. ಉಪಮೆಗಳ ಜೊತೆ ಭಾವಗಳನ್ನು ಸೆರೆ ಹಿಡಿಯುವ ಪ್ರಯತ್ನ ಚೆನ್ನಾಗಿದೆ..

    ಮುಂದುವರೆಯಲಿ...

    ReplyDelete
  3. ನಾಗರ ಹೊಳೆ ಚಿತ್ರದಲ್ಲಿ ಹಾಡಿನ ಸಾಲು ನೆನಪಿಗೆ ಬಂತು..ಬಂದಾಗ ನಗುವು ಹೋದಾಗ ಮಾತ್ರ ಕಣ್ಣೀರೆಕೋ ಕಾಣೆ..ಕಸಿದುಕೊಳ್ಳುವ ಹಕ್ಕು ಎಂದು ಕೊಟ್ಟೋನಿಗೆತಾನೆ..ಆದ್ರೆ ಇಲ್ಲಿ ಆಗಿರಿವುದು ಮಾತಿನ ವಂಚನೆ..ನಂಬಿಕಯು ಪ್ರಪಾತದಲ್ಲಿ ಜಾರಿರುವುದು...ನಂಬಿಕೆಯ ಶಿಖರವೇರುವಾಗ ಕಂದಕಗಳನ್ನು ನೋಡಬೇಕು ಎನ್ನುವ ಸಾರಾಂಶ ಸುಂದರವಾಗಿ ಮೂಡಿಬಂದಿದೆ ಎಸ್ ಪಿ.

    ReplyDelete