Thursday, 22 March 2012

ಎಲ್ಲರಿಗೂ ಶುಭ ತರಲಿ ಚಾಂದ್ರಮಾನ ಯುಗಾದಿ...


ಪಾಡ್ಯದ ರವಿ ಉದಯಿಸಿರಲು..
ಚೈತ್ರದ ಬಾಗಿಲಲ್ಲಿ..
ಹೊಸ ಚಿಗುರ ರಂಗವಲ್ಲಿ...

ಹೊಸ ಸಂವತ್ಸರದ ಬೆಳಕಲ್ಲಿ 
ಸಿಹಿಕಹಿಗಳ ಹೂರಣವಿಹುದು
ಬೇವು- ಬೆಲ್ಲಗಳ ಮಿಶ್ರಣದಲ್ಲಿ..

ಹಳೆ ಎಲೆಗಳ ಉದುರಿಸಿ 
ಹೊಸ ಚಿಗುರ ತೊಟ್ಟು..
ಪ್ರಕೃತಿ ಸಂಭ್ರಮಿಸುವಂದದಿ...
.
ಹಳೆಯ ನೋವೆಲ್ಲವ ಮರೆಸಿ 
ಹೊಸ ಆಶಯಗಳ ಕೊಟ್ಟು 
ಎಲ್ಲರಿಗೂ ಶುಭ ತರಲಿ 
ಚಾಂದ್ರಮಾನ ಯುಗಾದಿ... 


15 comments:

  1. ಯುಗಾದಿ ಶುಭಾಶಯಗಳು -chendada kavite

    ReplyDelete
  2. ಕವನ ಚೆನ್ನಾಗಿದೆ ಮುಂದುವರೆಸಿ....
    ಖುಷಿಯಾಯ್ತು ಓದಿ...ನಿಮಗೂ ಹಬ್ಬದ ಶುಭಾಷಯ

    ಬನ್ನಿ ನಮ್ಮನೆಗೂ,
    http://chinmaysbhat.blogspot.com/

    ಇತಿ ನಿಮ್ಮನೆ ಹುಡುಗ,
    ಚಿನ್ಮಯ ಭಟ್.

    ReplyDelete
    Replies
    1. Priya Chinnu, Thanks kavana istavadaddakke. Ningu habbada shubhaashayagalu. Nanna angalakke swaagata.

      Delete
  3. ಕವನ ಚೆನ್ನಾಗಿದ್ದು.. ಯುಗಾದಿಯ ಶುಭಾಶಯ :)

    ReplyDelete
  4. ಶುಭಾಶಯಗಳು :) ಕವನ ಚೆನ್ನಾಗಿದೆ .

    ReplyDelete
  5. ಹೊಸ ಸಂವತ್ಸರದ ಸ್ವಾಗತಕ್ಕೆ ಚೆಂದದ ಕವನ :-). ನಂದನ ಸಂವತ್ಸರದ ಮತ್ತು ಒಳ್ಳೆ ಕವನಕ್ಕೆ ಶುಭಾಶಯ. ಬ್ಲಾಗೂ ಚೆಂದಿದ್ದು :-)

    ReplyDelete
  6. ನನ್ನ ಅಂಗಳಕ್ಕೆ ಸ್ವಾಗತ ಪ್ರಶಸ್ತಿ ... ಧನ್ಯವಾದ.. ಪ್ರೋತ್ಸಾಹ ಹೀಗೆ ಇರಲಿ

    ReplyDelete
  7. ರಂಗವಲ್ಲಿ ಹಾಕಿದ ಅಂಗಳ ಚಂದ..ಸಂಧ್ಯೆಯಲ್ಲಿ ಅರಳಿದ ಕವನ ಚಂದ...ಯಾವ ಯುಗವಾದರೇನು ಪ್ರಕೃತಿ ತನ್ನನ್ನು ಸಿಂಗರಿಸಿಕೊಳ್ಳುವ ಪರಿ ಬದಲಾಗಿಲ್ಲ..ಪದಗಳ ಜೋಡಣೆ ಮುದ ನೀಡುತ್ತದೆ..ಸುಂದರ ಪಿ ಎಸ್

    ReplyDelete