Monday, 9 July 2012




ಜಲವರ್ಣದಂತೆ....

ಗಿರಿ ತುದಿಗೆ ಕವಿದ 
ಮಂಜು ಕಾಣುತಿಹುದು ..
ಅಂಬರ ಚುಂಬಿಸುವ ಆಸೆಗೆ..
ಏಣಿ ಹಾಕುವಂತೆ..

ಕುಳಿತು ಕೇಳಲು ಕಿವಿಗಿಂಪು 
ನೀಡುತಿಹುದು.. 
ಮುಸಲಧಾರೆಯ ಸದ್ದು.. 
ಪುಟ್ಟ ಪಾದದಿ ನಲಿವ 
ಗೆಜ್ಜೆನಾದದಂತೆ.. 

ಮುಂಗಾರಲ್ಲಿ ಮಿಂದೆದ್ದ 
ಮಲೆನಾಡು ಕಂಗೊಳಿಸುತಿಹುದು.. 
ಕವಿಯೆದೆಯಲ್ಲಿ ಅರಳಿದ 
ಕಾವ್ಯ ಕಲ್ಪನೆಯಂತೆ.. 
ನುರಿತ ಕಲಾವಿದನ 
ಕೈಲರಳಿದ ಸುಂದರ ಜಲವರ್ಣದಂತೆ...

20 comments:

  1. ಸುಂದರ ಕವಿತೆ!!ಮಳೆಯಲ್ಲಿ ಮಲೆನಾಡಿನ ಸೊಬಗೇ ಸೊಬಗು!!ಕವಿಗಳಿಗೆ ಸ್ಫೂರ್ತಿ!!

    ReplyDelete
  2. ತುಂತುರು ಮಳೆ...ಪಕ್ಷಿಗಳ ಕಲರವ...ಜುಳು ಜುಳು ನಾದ...ಇವೆಲ್ಲವನ್ನು ತರುವ ಮುಂಗಾರು ಕವನಕ್ಕೆ ಸ್ವಾಗತ

    ReplyDelete
  3. ಮಲೆನಾಡ ಮಳೆಯಲ್ಲಿ ನೆನೆಯುತ್ತಾ ಭಾವಗಳ ಚಿತ್ತಾರ ಬರೆಯುತಿದ್ದ ದಿನಗಳ ನೆನಪು ಮತ್ತೆ ಮನದಂಗಳದಿ...
    ನಿಮ್ಮ ಚಂದದ ಸಾಲುಗಳನೋದಿ...

    ReplyDelete
    Replies
    1. ಹ್ಮ್ಮ್ ಶ್ರೀವತ್ಸ ಮಳೆಯ ನೆನಪಿನ ಮೆಲುಕುಗಳು ಹಾಗೆ.. ಮತ್ತೆ ಮೈ ಒಡ್ಡಬೇಕು ಅನ್ನುವಂತೆ

      Delete
  4. ಈ ಸಲದ ಮುಂಗಾರಿಗಿಂತಲೂ ನಿನ್ನ ಕವಿತೆಯೇ ಚನ್ನಾಗಿದೆ.....

    ಮುಸಲಧಾರೆಯ ಸದ್ದಲಿ ಇನ್ನೇನು ತಲ್ಲಿನನಾಗಬೇಕು.... ಅಷ್ಟರಲ್ಲಿ

    ಸೂರ್ಯ ಕಣ್ಣು ಮಿಟುಕಿಸಿ ಬಿಡುತ್ತಾನೆ...

    ಛೆ!!! ಏನಾಗಿಹೋಯಿತು.....

    ಈ ಸಲದ ಮಳೆಗೆ ನಿನ್ನ ಕವನದಷ್ಟು ಸಂಪೂರ್ಣತೆಯಿಲ್ಲವೇನೋ.....

    ಕವನ ಮಾತ್ರ ಚನ್ನಾಗಿದೆ...

    ReplyDelete
    Replies
    1. ಕನಸು ಕಂಗಳ ಹುಡುಗಾ,
      ನಿಮ್ಮ ಮಾತು ನಿಜ, ಮಲೆನಾಡಿನ ಈ ಸಲದ ಮಳೆಗಾಲ ಸ್ವಲ್ಪ ನಿರಾಶಾದಾಯಕವೇ..
      ಧನ್ಯವಾದ

      Delete
  5. ಚಂದದ ಮಳೆ ಚಿತ್ತಾರ...
    ಮಲೆನಾಡಿನ ಪ್ರಕೃತಿ ಸೌಂದರ್ಯ... ಸೂಪರ್...

    ಅಭಿನಂದನೆಗಳು ಚಂದದ ಸಾಲುಗಳಿಗೆ......

    ReplyDelete
    Replies
    1. ಧನ್ಯವಾದ ಪ್ರಕಾಶಣ್ಣ,
      ಮಳೆಯ ಚಿತ್ತಾರದ ಸುಂದರ ಛಾಯೆಗಳು ನಿಮ್ಮ ಕ್ಯಾಮೆರಾದಲ್ಲಿ ಬರಲಿ ಎಂಬ ಸಣ್ಣ ಆಸೆಯಿದೆ..

      Delete
  6. ಮಲೆನಾಡಿನ ವರ್ಣನೆ ಮತ್ತು ಮಳೆಯ ಪ್ರಸ್ತಾಪ ಸೊಗಸಗಿದೆ.

    ಲಯ ಮತ್ತು ಭಾವಪೂರ್ಣ ಕವನವಿದು.

    ReplyDelete
    Replies
    1. ಧನ್ಯವಾದ ಬದರಿ ಸರ್,
      ಮಲೆನಾಡ , ಮಳೆಯ ವರ್ಣನೆ ಕಷ್ಟ , ಪ್ರಯತ್ನ ಮಾಡಿದ್ದೇನೆ ಅಷ್ಟೇ

      Delete
  7. ಚೆನ್ನಾಗಿದೆ ಕವಿತೆ.. ಅಲ್ರಿ ಬರೀ ನೀವೊಬ್ರೆ ನೋಡಿಬಂದು ಇಲ್ಲಿ ಕವಿತೆ ಬರಿಯೋದು ಸರೀನಾ
    ನಮಗೂ ಕರೀರಿ ನಿಮ್ಮೂರಿಗೆ..ತಂಬಳಿ, ಹುಳಿ ಎಲ್ಲಾ ತಿನ್ಸಿ..ಗುಡ್ಡ ನದಿ ಅಡ್ಡಾಡಿಸಿ ಆಗ ನೋಡಿ
    ನಾವೂ ಬರೀತೇವಿ..ಕವನ....!!

    ReplyDelete
    Replies
    1. ದೇಸಾಯಿ ಸರ್ ,
      ನಮ್ಮೂರಿಗೆ ಯಾವಾಗಲೂ ಸ್ವಾಗತ. ಖಂಡಿತ ಬನ್ನಿ, ನೀವು ಕೇಳಿದ್ದೆಲ್ಲ ಮಾಡೋಣಾ. ನಿಮ್ಮ ಕವನಗಳನ್ನು ಓದುವ ಆಸೆ ಖಂಡಿತಾ ಇದೆ.

      Delete
  8. ವಾಹ್ ವಾಹ್... ಸುಂದರ ಕವನ.... :-)

    ReplyDelete
  9. ella chennagide andiddaare ;)

    ReplyDelete