ಪ್ರೀತಿಯ ಸುಧೆಯ ಧಾರೆಯೆರೆದು..
ಬೈಗುಳಗಳ ಚಾಣ ಹೊಡೆದು..
ಸಂಸ್ಕಾರದ ಎರಕ ಹೊಯ್ದು..
ನನ್ನ ವ್ಯಕ್ತಿತ್ವ ಕಡೆದ ..
ಶಿಲ್ಪಿಯಂತ ಅಪ್ಪನಿಗೆ..
ಸುಭಾಷಿತದ ಉಕ್ತಿಯಂತೆ
ಐದು ವರ್ಷಗಳ ಕಾಲ ಮುದ್ದಿಸಿ..
ಆಮೇಲೆ ಹತ್ತು ವರ್ಷ ದಂಡಿಸಿ..
ಶೋಡಷದಲ್ಲಿ ಸ್ನೇಹಿತೆಯಂತೆ ಕಂಡ
ಸ್ನೇಹಿತನಂತ ಅಪ್ಪನಿಗೆ..
ಹಂಸ ಕ್ಷೀರ ನ್ಯಾಯದಂತೆ
ನೋವೆಲ್ಲ ತನ್ನಲ್ಲಿಟ್ಟುಕೊಂಡು..
ನಗು ಮಾತ್ರ ನಮ್ಮ ಪಾಲಿಗಿರಿಸಿ..
ಅಸೆ ಕನಸುಗಳಿಗೆಲ್ಲ ಬೆಂಬಲದ ನೀರುಣಿಸಿ
ಇಡುವ ಪ್ರತಿ ಹೆಜ್ಜೆಗೂ ಅಂತಃಶಕ್ತಿಯಾಗುವ
ಅಪ್ಪನಂತಹ ಅಪ್ಪನಿಗೆ ...
"ಹುಟ್ಟುಹಬ್ಬದ ಹಾರ್ದಿಕ ಶುಭಾಷಯಗಳು"
happy birthday to dady :)
ReplyDeleteಲೋಕವನ್ನು ಬ್ರಹ್ಮ ಸೃಷ್ಟಿಸಿದ...
ReplyDeleteಮಾತೃ ಜನ್ಮ ಕೊಟ್ಟಳು...
ಪಿತೃ ಪರಿ ಪರಿ ಜ್ಞಾನ ಕೊಟ್ಟರು ..
ನಿಮ್ಮ ಪಿತ"ಮಹಾ"ರಿಗೆ ನಮ್ಮ ಕುಟುಂಬದಿಂದ
ಜನುಮದಿನದ ಶುಭಾಶಯಗಳು
ಚೆನ್ನಾಗಿದೆ ಅಕ್ಷರ ನಮನ...
ReplyDeleteಅವರ ಒಲವ ಹರಕೆ ಹಾರೈಕೆಗಳ ನೆರಳು ನಮ್ಮಂಥ ಕಿರಿಯರ ಮೇಲೆ ಇರಲಿ ನಿರಂತರ...
ನಿನ್ನ ಅಪ್ಪಂಗೆ ನನ್ನ ಕಡೆಯಿಂದಾನೂ ನಮನ ಮತ್ತು ಶುಭಾಶಯ ತಿಳಿಸು...
ಅಪ್ಪನ ಮಗಳು ಎನಿಸಿಕೊಂಡು ಬಿಟ್ಟೆ ಪುಟ್ಟಿ. ಅಪ್ಪನಿಗೆ ಒಳ್ಳೆಯ ಜನುಮದಿನದ ಉಡುಗೊರೆ.
ReplyDeleteನನಗೆ ಅಪ್ಪ ಅಸ್ಪಷ್ಟ, ನಾನು ಮೂರು ವರ್ಷ ಮಗುವಿದ್ದಾಗಲೇ ಅವರು ತೀರಿಕೊಂಡರು. ಆದ್ದರಿಂದ . ನನಗೆ ’ಪಿತೃ ಶೋಕಂ ನಿರಂತರಂ"
happy birth day to your dady...
ReplyDeleteಕವನದಲ್ಲಿ ಜನ್ಮದಿನದ ಶುಭಾಶಯ .. ಚೆನ್ನಾಗಿದೆ .. ನನ್ನ ಕಡೆಯಿಂದನೂ ಶುಭಾಶಯ ಹೇಳ್ಬಿಡು ....
ReplyDeleteತುಂಬಾ ಸುಂದರವಾಗಿದೆ..ಜೊತೆಜೊತೆಗೆ ಸಂಸ್ಕೃತ ಸುಭಾಷಿತದ ಅರ್ಥ ಕೂಡ ಚೆನ್ನಾಗಿ ವಿವರಿಸಿದ್ದೀರ. ತಮ್ಮೆಲ್ಲ ಕಷ್ಟವನ್ನ ನುಂಗಿ ಎಲ್ಲ ಪ್ರೀತಿ ಪ್ರೇಮವನ್ನ ನಮಗೆ ಧಾರೆಯೆರೆದು ನಮ್ಮ ಖುಷಿಯಲ್ಲಿ ಅವರ ಖುಷಿಯನ್ನ ಕಾಣುವ ಅವರ ಋಣವನ್ನ ಎಷ್ಟು ಜನ್ಮವೆತ್ತಿದರೂ ತೀರಿಸಲು ಸಾಧ್ಯವಿಲ್ಲ.
ReplyDelete"ಜೀವೆತ ಶರದಃ ಶತಮ್" ಎಲ್ಲರಿಗೂ ಒಳ್ಳೆಯದಾಗಲಿ.
ಧನ್ಯವಾದ ಎಲ್ಲರಿಗೂ .....
ReplyDelete