ವರುಷವೊಂದು ಉರುಳಿದ್ದು ...
ಸ್ವಲ್ಪ ಅತ್ತಿದ್ದು ... ಜಾಸ್ತಿ ನಕ್ಕಿದ್ದು ..
ಒಂಚೂರು ಸಾಧನೆ ...
ಸಿಕ್ಕ ಬೆಟ್ಟದಷ್ಟು ಪ್ರೀತಿ ..
ನಮ್ಮವರೇ ನಮಗೆ ಮೋಸ ಮಾಡಿದ್ದು ..
ಯಾರೋ ನಮ್ಮವರಾಗಿದ್ದು ..
ಪರಿಚಿತರು ಅಪರಿಚಿತರಾದದ್ದು ..
ಅಪರಿಚಿತರು ಪರಿಚಿತರಾದದ್ದು ..
ದಿನಗಳು ಬದಲಾದಂತೆ ..
ಬದುಕು ಬದಲಾದದ್ದು ...
ಎಲ್ಲವೂ ಈಗ ಇತಿಹಾಸವೇ ..
ವರುಷವೊಂದು ರೆಪ್ಪೆ ಮಿಟುಕಿಸುವಂತೆ ಉರುಳಿ ಹೋಯಿತು ...
ಹೌದು ಇದು ಎಲ್ಲರ ಕಥೆ..... ನಿಮಗೆ ಹೊಸ ವರ್ಷದ ಹಾರ್ಧಿಕ ಶುಭಾಷಯ...
ReplyDeleteಹಹಹ... ಎಲ್ಲರಿಗೂ ಹಾಗೆ ಅಲ್ವಾ ಸಂಧ್ಯಾ... ಹೊಸ ವರ್ಷದ ಶುಭಾಶಯಗಳು
ReplyDeleteಸಂಧ್ಯಾ ಬದುಕೇ ಹಾಗಲ್ಲವಾ....
ReplyDeleteಊಹಿಸದೇ ಇರುವ ತಿರುವುಗಳು ಬರುವುದು ಬದುಕಿನ ವಿಷಯದಲ್ಲಿ ಮಾತ್ರವೇ ಇರಬೇಕು....
ಸಿಕ್ಕಿದ್ದು ಪ್ರೀತಿಯಾದರೆ ಅದರಲ್ಲಿ ಸಂತೋಷವಿದೆ...
ಆಗಿದ್ದು ಮೋಸವಾದರೆ ಅಲ್ಲೊಂದು ಪಾಠವಿದೆ....
ನಮಗೆ ಮೋಸವಾಯಿತು ಅಂದರೆ ನಾವು ಮೋಸ ಹೋಗುವ ಪ್ರಮಾಣ
ಅಷ್ಟು ಕಡಿಮೆಯಾಯಿತು ಅಂತಲೇ ಅರ್ಥ...
ಮುಂಬರುವ ವರ್ಷಕ್ಕೆ ಶುಭ ಆಶಯ...
ವಾವ್ಹ್ ... ನೀವು ಹೇಳೋದ ನಿಜ. ನಿಮಗೂ ಹೊಸ ವರ್ಷದ ಶುಭಾಶಗಳು....
ReplyDeleteನಮ್ಮ ಕಥೆನು ಸ್ವಲ್ಪ ಇದೆ ಥರ ನೋಡಿ...
ReplyDeleteಕಳೆದ ಬಾರಿ ಹೊಸ ವರ್ಷದ ಸಮಯದಲ್ಲಿ ನಾನು ಬರೆದ ಕೆಲವು ಸಾಲುಗಳು ಈ ಲಿಂಕ್ ನಲ್ಲಿದೆ ನೋಡಿ...
http://giri-shikhara.blogspot.in/2011/12/happy-new-year.html
ಜೀವನ ಒಂದು ಘಟ್ಟ ಪ್ರದೇಶದ ಹಾದಿಯ ಹಾಗೆ.ಏರು..ಇಳಿಜಾರು..ಹೋಂಡಾ, ಕುಳಿ, ಎಲ್ಲವು ಇರುತ್ತದೆ..ಅಂಥಹ ಹಾದಿಯಲ್ಲಿ ಸಿಗುವ ಸಂತಸದ ಜಲಪಾತಗಳು, ಸ್ನೇಹದ ಹಸ್ತ ಚಾಚುತ್ತಾ ಬರುವ ಮೋಡಗಳು, ಜೊತೆಗೆ ನಿಲ್ಲುವ ಇಬ್ಬನಿಯ ಹನಿಗಳು ಎಲ್ಲವು ಸೊಗಸು...ಸುಂದರ ಸಾಲುಗಳು ಎಸ್ ಪಿ. ಹೊಸ ವರ್ಷದ ಹರುಷದ ಶುಭಾಶಯಗಳು!
ReplyDeleteಧನ್ಯವಾದಗಳೊಂದಿಗೆ ...
ReplyDeleteಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು
ಇದು ವಾಸ್ತವ......ಚೆನ್ನಾಗಿದೆ......ಹೊಸ ವರ್ಷದ ಶುಭಾಶಯಗಳು.....
ReplyDeleteವರುಷಗಳು ಉರುಳುತ್ತಾ ಹೋದ ಹಾಗೆ ಜಗತ್ತು ನಾವಂದುಕೊಂಡ ಹಾಗೆ ಇರುವುದಿಲ್ಲ ಎಂಬುದು ಮನದಟ್ಟಾಗುತ್ತಾ ಹೋಗುತ್ತದೆ.ಕಹಿ ವಾಸ್ತವದ ಅನುಭವ ಜೀವನದ ಆರಂಭದಲ್ಲೇ ಆದರೆ ನಾವು ಬುದ್ದಿವಂತಿಕೆಯಿಂದ ಹೆಜ್ಜೆಯಿಡುತ್ತೇವೆ.
ReplyDeleteಹೊಸ ವರುಷ ಸಂಧ್ಯಾಳಿಗೆ ಹೊಸ ಹರುಷ ತರಲಿ
ನೋಡು ನೋಡ್ತಿದ್ದಂಗೇ ಮತ್ತೊಂದು ವರ್ಷ ಉರುಳಿ ಹೋತು !
ReplyDeleteಗಳಿಸಿದ್ದೆಷ್ಟು ಕಳೆದಿದ್ದೆಷ್ಟು ಅಂತ ನೋಡೋದ್ರೊಳಗೆ ಸಂಕ್ರಾತಿಯೂ ಬಂದು ಬಿಡ್ತು !.. ಹೊಸ ವರ್ಷದ ಮತ್ತು ಸಂಕ್ರಾಂತಿಯ ಶುಭಾಶಯಗಳು :-)