![]() |
ರೂಪದರ್ಶಿ : ಶ್ರೇಯಾ . ಫೋಟೋ : ವಿನೋದ್ ಕುಮಾರ್ |
ಸ್ನಿಗ್ದ ನಗುವಿಗೊಂದು
ಮುಗ್ದತೆಯ ಚೌಕಟ್ಟು...
ಪುಟ್ಟ ತಲೆಯೊಳಗೊಂದು ...
ತುಂಟಾಟದ ಜಗತ್ತು ...
ಬಾಲ್ಯಕ್ಕಿಷ್ಟೇ ಗೊತ್ತು ..
ರೂಪದರ್ಶಿ : ಪ್ರಣತಿ ಹೆಗಡೆ , ಫೋಟೊ : ಸುಷಮಾ ಭಟ್ |
ಇಲ್ಲ ಬೆಡಗು ಬಿನ್ನಾಣ
ಒನಪು ವಯ್ಯಾರಗಳ
ಜರೂರತ್ತು . ...
ಬೆರಗು ಕಂಗಳಲಿ ...
ಕುತೂಹಲದ ಸುರುಳಿ ...
ಬಾಲ್ಯಕ್ಕಿಷ್ಟೇ ಗೊತ್ತು ...
![]() |
ರೂಪದರ್ಶಿ:ಅಬ್ಜಾ ದಿಗ್ವಾಸ್ , ಪ್ರಾಚಿ , ಫೋಟೊ : ದಿಗ್ವಾಸ್ ಜಿ . ಹೆಚ್ |
ಬೇಕಿಲ್ಲ ಬದುಕಿಗೊಂದೇ ದಾರಿ ..
ಬದುಕಲ್ಲೊಂದೇ ಗುರಿಯೆಂಬ ಉಯಿಲು
ಪುಟ್ಟ ಕಂಗಳಿಗೆ
ಕಾಣೋದೆಲ್ಲ ಆಟದ ಬಯಲು
ಬಾಲ್ಯಕ್ಕಿಷ್ಟೇ ಗೊತ್ತು ..
ಗೊತ್ತಿಲ್ಲ ಸಮಾಜ
ಅದಕ್ಕೊಂದಿಷ್ಟು ಕಟ್ಟು ಪಾಡು ..
ಪುಟ್ಟ ಗುಲಾಬಿ ತುಟಿಗಳಲಿ
ಹಾಲುಗಲ್ಲದ ತೊದಲ ಹಾಡು
ಬಾಲ್ಯಕ್ಕಿಷ್ಟೇ ಗೊತ್ತು ..
ರೂಪದರ್ಶಿ: ಪಾರ್ಥ , ಫೋಟೊ : ಸುಷಮಾ ಭಟ್ |
ತಿಳಿದಿಲ್ಲ ಅನಾಚಾರ ..
ಅದರದಿಷ್ಟು ಲೆಕ್ಕಾಚಾರ ..
ಬೊಗಸೆ ಕೈಗಳಲಿ
ಹಿಡಿದ ಸ್ಲೇಟು ಬಳಪದ ಚಿತ್ತಾರ
ಬಾಲ್ಯಕ್ಕ್ಕಿಷ್ಟೇ ಗೊತ್ತು ...
ನಮ್ಮನ್ನು ಸಂಪೂರ್ಣ ಕಾಲದ ಯಂತ್ರದಲ್ಲಿ ಕೂಡಿಸಿ, ಬಾಲ್ಯಕ್ಕೆ ಹೊತ್ತೋಯ್ದ ಪುಟ್ಟ ಗೆಳತಿ. ನಿನಗೆ ನಮ್ಮ ಶರಣು.
ReplyDelete"
ತಿಳಿದಿಲ್ಲ ಅನಾಚಾರ ..
ಅದರದಿಷ್ಟು ಲೆಕ್ಕಾಚಾರ ..
ಬೊಗಸೆ ಕೈಗಳಲಿ
ಹಿಡಿದ ಸ್ಲೇಟು ಬಳಪದ ಚಿತ್ತಾರ
ಬಾಲ್ಯಕ್ಕ್ಕಿಷ್ಟೇ ಗೊತ್ತು ... "
ಕಡೆಯ ಸಾಲುಗಳಂತೂ ಅಪೂರ್ವ....
ಧನ್ಯವಾದ ಬದರಿ ಸರ್ ...
DeleteNice one Sandhya :-) We have to see the God in the innocence of Child...
ReplyDeleteyes Girish...
DeleteThank you
ಈ ಅಧರ್ಮಗಳ ಬೀಡಲ್ಲಿ ದೇವರಿಗೆ ನಿಲ್ಲೋಕೆ
ReplyDeleteಜಾಗಾನೇ ಇಲ್ವಂತೆ....
ಅದಕ್ಕಾಗಿ ಆತ ಎಳಸು ಜೀವದಲ್ಲಿ ನೆಲೆಸಿದ್ದಾನಂತೆ...
ಮಗುವಿನ ಮನಸ್ಸೆಂದರೆ ಹಾಗೇ ತಾನೇ?
ಇನ್ನೂ ಏನೂ ಮೂಡಿರದ ಬೆಳ್ಳಂಬಿಳುಪಿನ ಹಾಳೆ..
ಯಾವ ವಿಕಾರಗಳೂ ಮೂಡಿರದ ಸ್ವಚ್ಛ ಮೂರ್ತಿ...
ಕಣ್ಣಿಗೆ ಕಂಡದ್ದೇ ಆನಂದ...
ಬಾಲ್ಯಕ್ಕಿಷ್ಟೇ ಗೊತ್ತು ಚಂದದ ಕವಿತೆ ಸಂಧ್ಯಾ...
ನಿಜ ರಾಘವ... ಮಕ್ಕಳ ಮನಸ್ಸು ಆಗ ತಾನೇ ಕರೆದ ಹಾಲಂತೆ ಶುದ್ಧ ...
DeleteLiked your lines and Raghava's lines too.. :)
DeleteThanks Kavya...
Deleteಎಲ್ಲಿಗೋ ಒಯ್ಯುವ 'ದೇವರ ಮುಗುಳು ನಗೆಯ' ಛಾಯಾಚಿತ್ರಗಳು...
ReplyDeleteಆ ಮುಗ್ಧಲೋಕವ ಮತ್ತೆ ಹಂಬಲಿಸುವಂತಾಗಿಸುವ ಅಕ್ಷರಗಳ ಚಿತ್ತಾರ...
ಇನ್ನೇನ ಹೇಳಲಿ...ಬಾಲ್ಯದ ಆ ಹೊಳೆ ದಂಡೆಯ ಮರಳ ಗೂಡಿನ ನೆನಪಲ್ಲಿ ಕಳೆದುಹೋಗಿದ್ದೇನೆ...
ಸಂಧ್ಯಾ - ನಿಜಕ್ಕೂ ಹೊಟ್ಟೆಕಿಚ್ಚಾಗುವಷ್ಟು ಖುಷಿಯಾಗುತ್ತಿದೆ ಭಾವ ಬರಹದಲಿ ತೇಲಿ...
Thank you Shree...
Deleteಭಾರತ ಕೃಷ್ಣ ಪರಮಾತ್ಮ ಹೇಳುತ್ತಾನೆ "ನಾನು ಹೇಳಿದಂತೆ ಕೇಳು ಆದರೆ ನಾ ಮಾಡಿದಂತೆ ಮಾಡಬೇಡ" ಆದರೆ ಮಕ್ಕಳು ಹೇಳುತ್ತವೆ "ಮಾಡೋದನ್ನ ಅನುಸರಿಸಿ ಜಗತ್ತನ್ನು ಸುಂದರವಾಗಿರಿಸಿ"
ReplyDeleteಈ ಮಾತುಗಳು ನಿನ್ನ ಕವನದ ಸಾಲುಗಳನ್ನು ಓದಿದಾಗ ಮನಪಟಲಕ್ಕೆ ಬಡಿಯಿತು. ಸುಂದರವಾದ ಜಗತ್ತು ಆ ಬಾಲ್ಯದ ಲೋಕ. ಅಷ್ಟೇ ಸುಂದರವಾಗಿ ತೆರೆಗೆ ತಂದಿರುವ ಪದಗಳು ಅದಕ್ಕೆ ಒಪ್ಪುವ ಚಿತ್ರಗಳು ಎರಡು ಹೊಂದಿಕೆಯಾಗಿವೆ. ಎಸ್ ಪಿ ಸೂಪರ್
ಮಕ್ಕಳನ್ನು ಸಂಭಾಳಿಸುವುದು ಕಷ್ಟ ... ಅವರಂತೆ ನಡೆಯುವುದೇ ಸುಲಭ ಶ್ರೀಕಾಂತಣ್ಣ
Deleteಒಳ್ಳೆಯತನ ಅಷ್ಟೇ ಗೊತ್ತಿರುವ ಬಾಲ್ಯಕ್ಕೊಮ್ಮೆ ಹೋಗಿ ಬಂದ ಹಾಗಾಯ್ತು! ಉತ್ತಮ ಕವಿತೆ, ಸಂಧ್ಯಾ ಭಟ್ :)
ReplyDeleteಚಂದದ ಕವನಕ್ಕೆ ಅಷ್ಟೇ ಚಂದದ ಚಿತ್ರಗಳನ್ನೂ ಜೋಡಿಸಿದ್ದಿ..
ReplyDeleteನೈಸ್ ಒನ್ ಡಾರ್ಲಿಂಗ್...
ಮಕ್ಕಳ ಮುಗ್ಧತೆಯಲ್ಲಿ ದೇವರನ್ನು ಕಾಣುತ್ತೇವೆ... ಸುಂದರ ಬಾಲ್ಯ ನೆನೆಪಿಸುವ ಸಾಲುಗಳು ಸಂಧ್ಯಾ... ನಾವು ಮಕ್ಕಳಾಗಬಾರದೇ ಎಂದೆನಿಸುತ್ತದೆ.
ReplyDeleteNice sandya ...ಇಲ್ಲ ಬೆಡಗು ಬಿನ್ನಾಣ
ReplyDeleteಒನಪು ವಯ್ಯಾರಗಳ
ಜರೂರತ್ತು . ...liked it
Thank you... Prasaad, Sush Darling, Sugunakka... and Venkatesh Hegde...:)
Deleteಒಂದೆ ಒಂದು ಜನ್ಮದಲ್ಲಿ ಒಂದೆ ಬಾಲ್ಯ ಒಂದೆ ಹರಯ ನಮಗದಷ್ಟೇ ಏತಕೋ ! beautiful pictures n wonderful lines...
ReplyDeleteThank you very much madam and welcome to my blog..
Deleteಹೌದು, ಈ ಮಕ್ಕಳ ಬಾಲ್ಯ ಯಾವಾಗಲೂ ಹೀಗೆ ಕುಶಿ ಕುಶಿಯಾಗಿರಲಿ..beautiful lines for each picture..Thanks for using Shreya's picture..- Vanitha.
ReplyDeleteಶ್ರೇಯಾಳ ಫೋಟೋ ನೋಡುತ್ತಾ ಬಾಲ್ಯ ನೆನಪಾಯಿತು ... ಹಾಗೆಯೇ ಈ ಸಾಲುಗಳು ಕೂಡ .. ಚಂದದ ಫೋಟೊ. ಈ ಫೋಟೊ ಬಳಸುವಾಗ ಎಲ್ಲೋ ಒಂದು ಸಣ್ಣ ಭಯವಿತ್ತು. ನಿಮ್ಮ ಆತ್ಮೀಯತೆಯಿಂದ ದೂರವಾಯ್ತು .
Deleteಧನ್ಯವಾದ ವನಿತಾ ಮೇಡಂ ..
beautiful lines for very good pictures..Thanq for using my picture...
ReplyDeleteಚಿತ್ರಗಳು ಬರೆಸುತ್ತವೆ... ಅಲ್ಲಿನ ಭಾವಗಳು ತಂತಾನೇ ಸಾಲುಗಳಾಗುತ್ತವೆ ... ಅಂಥಹ ಸಾಲುಗಳನ್ನು ಕಟ್ಟಿಕೊಡುವ ಸಾಮರ್ಥ್ಯ ಫೋಟೊಗಳಿಗಿದೆ. ಅಂಥಹ ಚಂದದ ಫೋಟೊ ಕೊಟ್ಟಿದ್ದಕ್ಕೆ , ಸಾಲುಗಳನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು ..
Deletehttp://kooki.ca/images/blackdot.png
ಪುಟ್ಟ ಮಕ್ಕಳಿಗೆ ದೃಷ್ಟಿಯಾಗದಿರಲಿ ...
Sundara kavanakke abhinandane....
ReplyDeleteThank you Dinakar Sir...
Deleteಸುಂದರ ಸಾಲು ಸಂಧ್ಯಕ್ಕಾ. ...
ReplyDeleteಪದಗಳ ಪಕ್ಕವಿರುವ ಫೋಟೋಗಳು ಈ ಬ್ಲಾಗ್ ಬರಹದ ಹೊಸತನದ ಅನಿಸ್ತು...
ಚೆಂದ...ಚೆಂದ...
ತುಂಬಾ ಚೆನ್ನಾಗಿದೆ ಸಂಧ್ಯಾ.... ಚಿತ್ರಗಳು ಅಧ್ಭುತವಾಗಿದೆ... :))
ReplyDeleteಮಕ್ಕಳ ಮುಗ್ಧ ರೂಪವನ್ನ ಶಬ್ಧಗಳಲ್ಲಿ ಸುಂದರವಾಗಿ ಸೆರೆಹಿಡಿದಿದ್ದೀರ. ತುಂಬಾ ಹಿಡಿಸಿತು.
ReplyDeleteಶುಭವಾಗಲಿ.
Thank you Chinmay, Sumathi akka, Ganesh Khare sir..
Deleteಹಾವು ತೂಗಿ
ReplyDeleteಹೆಡೆಯವ ಬಿಚ್ಚಿ
ಮುಖದ ಬಳಿ ಬಂದರೆ
ಕೊಡುವುದಷ್ಟೇ ಗೊತ್ತು
ಹಾಗೇ ಕಣ್ಮುಚ್ಚಿ ಹೂಮುತ್ತು
ಬಾಲ್ಯಕಿಷ್ಟೇ ಗೊತ್ತು.....
ಸುಂದರ ಕಲ್ಪನೆ ಮತ್ತು ತಕ್ಕ ಭಾವಸೆರೆ ಹಿಡಿದ ಭಾವಚಿತ್ರ...ಸುಂದರ ಪದಗಳ ಚಿತ್ರ ಚೌಕಟ್ಟು...ಸಂಧ್ಯಾ ಪುಟ್ಟಾ...ಸೂಪರು.
Deleteಭಯ್ಯಾ ಚಂದದ ಪದ ಚೌಕಟ್ಟು ಈ ನಿಮ್ಮ ಕಾಮೆಂಟ್... :)
ಧನ್ಯವಾದಗಳು
--
kavite tumba chennagi ide Sandhya......keep writing :)
ReplyDeleteThank you Rajesh SIr... and Welcome..
Delete
ReplyDeleteನಿಜ .... ಬಾಲ್ಯವಿಷ್ಟೇ ....
ಪುಟ್ಟ ಪುಟ್ಟ ಪ್ರೀತಿ ,ಚಿಕ್ಕ ಚಿಕ್ಕ ಕನಸುಗಳು ...
ಸ್ನಿಗ್ಧ ,ಮುಗ್ಧ ನಗು .....
ಹುಳುಕೇ ಕಾಣದ ಸ್ವಚ್ಚಂದ ಮನ ...
ವಾಹ್ !!! ಎಷ್ಟೆಲ್ಲಾ ಅಲ್ವಾ ಬಾಲ್ಯ ಅಂದ್ರೆ ??
ತುಂಬಾ ಇಷ್ಟವಾದ ಕವನ ಸಂಧ್ಯಕ್ಕ :)
ಬರೀತಾ ಇರಿ
ಧನ್ಯವಾದ
ಹೌದು ಪುಟ್ಟಾ .. ಬಾಲ್ಯವೆಂದರೆ ಸಾಕಷ್ಟು .. ಮೊಗೆದಷ್ಟು ... ಖುಷಿಯೇ ... ನಾ ಬರೆದದ್ದದ್ದು ಕೆಲವಷ್ಟೇ ...
DeleteThank you
ತುಂಬಾ ಸುಂದರ ಕವಿತೆ..
ReplyDeleteಹೂವಿನಂಥಹ ಬಾಲ್ಯದ ಬಗೆಗೆ..
ಬಹಳ ಇಷ್ಟವಾಯ್ತು ಸಾಲುಗಳು..
ಹಾಗೂ ಮುದ್ದಾದ ರೂಪದರ್ಶಿಗಳು..
ಫೋಟೊ ತೆಗೆದವರಿಗೂ ಜೈ ಹೋ !!
ಈ ಮುದ್ದಾದ ಮಕ್ಕಳ ಚಿತ್ರಗಳು ನನ್ನ ಸಾಲುಗಳನ್ನು ಸುಂದರಗೊಳಿಸಿದ್ದು.
Deleteಧನ್ಯವಾದ ಪ್ರಕಾಶಣ್ಣ
No words to say... No Comments !!! :)
ReplyDeleteThank you.... <3
Deleteಸಖತ್ತಾಗಿದ್ದು ಸಂದ್ಯಕ್ಕ..
ReplyDeletephotos are also really nice :-)
ಮಕ್ಕಳ ಮುಗ್ಧ ಮನಸ್ಸು,ಕಪಟವರಿಯದ ಆ ಮುದ್ದು ಮುದ್ದು ನಗು ಯಾರಿಗೆ ತಾನೇ ಇಷ್ಟವಾಗುವುದಿಲ್ಲ? ನಮ್ಮ ಮಕ್ಕಳೇ ಬಾಲ್ಯ ಕಳೆದು ಯೌವನಕ್ಕೆ ಕಾಲಿಟ್ಟಿದ್ದರೂ ನಾವು ಈಗಲೂ ನಮ್ಮ ಬಾಲ್ಯವನ್ನು ನೆನೆ ನೆನೆದು ಖಷಿ ಪಡುತ್ತೇವೆ.ಇನ್ನು ನಮ್ಮ ಮಕ್ಕಳ ಬಾಲ್ಯದ ನೆನಪಾದರಂತೂ ಆ ದಿನವಿಡೀ ಖುಷಿಯಾಗಿರುತ್ತೇವೆ.ತಲೆಮಾರಿನಿಂದ ತಲೆಮಾರಿಗೆ ಮಕ್ಕಳ ಬಗೆಗಿನ ಪ್ರೀತಿ,ಮಮತೆ ಹೆಚ್ಚಾಗುತ್ತಲೇ ಹೋಗುತ್ತದೆ.ಅದೇ ಮಕ್ಕಳ ಮಹಿಮೆ!
ReplyDeleteಬಾಲ್ಯಕ್ಕಿಷ್ಟೇ ಗೊತ್ತು ತುಂಬಾ ಮುದ್ದಾದ ಕವನ ಸಂದ್ಯಾ
Thank you very much.. Prashasti and Nanda amma...:)
Deleteನೀವು ಬರೆದ ಈ ಕವನ Super ಆಗಿದೆ... ನಮಗೂ ಇಷ್ಟೇ ಗೊತ್ತು! :) :) ಸುಂದರ ಫೋಟೋಗಳು! ತುಂಬಾ ಇಷ್ಟ ಆಯ್ತು ;)
ReplyDeleteಥ್ಯಾಂಕ್ಯು ಪ್ರದೀಪ್ ,..
Delete" ತಿಳಿದಿಲ್ಲ ಅನಾಚಾರ ..
ReplyDeleteಅದರದಿಷ್ಟು ಲೆಕ್ಕಾಚಾರ ..
ಬೊಗಸೆ ಕೈಗಳಲಿ
ಹಿಡಿದ ಸ್ಲೇಟು ಬಳಪದ ಚಿತ್ತಾರ " ಈ ಸಾಲುಗಳು ಬಾಳ ಇಷ್ಟವಾದವು.
ಎಷ್ಟೇ ದೊಡ್ಡವರಾದರೂ, ಬಲ್ಲವರಾದರೂ...,
ಮಕ್ಕಳ ರೀತಿಯ ತಿಳಿ ಮನಸ್ಸನ್ನು ಕಾಯ್ದುಕೊಳ್ಳುವುದು ... ಇಂಪಾಸಿಬಲ್ಲು..
ಬಾಲ್ಯಕ್ಕಿ ಷ್ಟೇ ಗೊತ್ತು ಅಂದುಕೊಂಡೇ .. ಬಹಳಷ್ಟನ್ನು ವಿವರಿಸಿದ್ದೀರಿ..
ಧನ್ಯವಾದಗಳು.
Thank you Chetan
Deleteಕಪಟವರಿಯದ ಬಾಲ್ಯದ ಬಗ್ಗೆ ಸುಂದರ ಕವಿತೆ, ಬಾಲ್ಯದಲ್ಲಿನ ಮುಗ್ದತೆ , ಅದರಲ್ಲಿನ ಹೂರಣವನ್ನು ಚೆನ್ನಾಗಿ ಅನಾವರಣ ಮಾಡಿ ಅದಕ್ಕೆ ಸುಂದರವಾದ ಪದಗಳ ಅಲಂಕಾರ ಮಾಡಿದ ಕವಿತೆ ಇದು ತಂಗ್ಯವ್ವ, ಬಹಳ ಇಷ್ಟಾ ಆಯ್ತು
ReplyDeleteThank you Balanna
Delete