Sunday, 1 December 2013

ಆತ್ಮೀಯವೆನ್ನಿಸುವ ಎಲ್ಲ ಭಾವಗಳೂ ಪ್ರೀತಿಯೇ ಆಗಿರಬೇಕು ಎಂದೇನೂ ಇಲ್ಲ ಅಲ್ಲವಾ.

ಸಂಡೆ ಟೆಡ್ಡಿ ಬೇರ್  ತೊಳೆದಿಟ್ಟು ಬಂದವಳು ಮೊಬೈಲ್ ನೋಡಿದರೆ same  unknown number ನಿಂದ ಎರಡು ಮಿಸ್ಸಡ್ ಕಾಲ್ ಇತ್ತು. "ಕಾಲ್  ಮಿಸ್ಸಾಯ್ತಲ್ಲೇ" ಅಂತ ಅವಳ ಮುಖ ನೋಡಿದೆ. "ಬೇಡ ಕಣೆ ಈಗ ತಾನೆ ಟೆಡ್ಡಿ ಬೇರ್  ತೊಳೆದಿಟ್ಟು ಬಂದಿದ್ದೀಯಾ ಹುಷಾರು" ಎಂದು ಕಣ್ಣು ಮಿಟುಕಿಸಿ ಬೈ ಎಂದು ಹೊರಟಳು ಸಂಡೆ ಸುತ್ತಾಟಕ್ಕೆ. ನನ್ನ ಮನಸ್ಯಾಕೋ ಹಿಂದೆ ಸುತ್ತ ತೊಡಗಿತ್ತು. ಅವತ್ತು ಎಲ್ಲೋ ಬಿಸಾಕಿದ್ದ ಮೊಬೈಲ್ ಗೆ  ನಿನ್ನ ನಂಬರ್ ನಿಂದ ಬಂದ ಕಾಲ್ ನೋಡಿ ನಾನೇ ವಾಪಸ್ ಮಾಡಿದ್ದೆ. ಅಲ್ಲಿವರಿಗೂ ನಿನ್ನ ನಂಬರ್ ನನಗೆ unknown ಆಗಿತ್ತು. "ಬೈ ಮಿಸ್ಟೇಕ್ ಡಯಲ್ ಆಗಿದೆ" ಎಂದವನಿಗೆ, ಇಟ್ಸ್ ಓಕೆ ಎಂದು ಕಟ್ ಮಾಡಿದ್ದೆ.  so  sweet voice  ಎಂದು ಬಂದ ಮೆಸೇಜ್ ಗೆ thanks ಎಂದೆ. ಅನ್ಲಿಮಿಟೆಡ್ ಫ್ರೀ   ಮೆಸೇಜ್ ಗಳು ಒಂದಕ್ಕೊಂದು  ಕೊಂಡಿಯಾಗುತ್ತ ಹೋಗಿ ಒಂದು ಗೆಳೆತನ ರೂಪುಗೊಂಡು ಬಿಟ್ಟಿತ್ತು. ನಿನ್ನ ಹೆಸರು unknown  ಎಂದೇ save  ಆಗಿತ್ತು. ಇವತ್ತಿಗೂ ಹಾಗೆ ಇದೆ ಕೂಡಾ. 

ನಿನ್ನ ಮೊದಲ ಭೇಟಿಯೂ ಅಷ್ಟೇ, ಐದು ನಿಮಿಷ ಕಣೆ ಬಂದೆ ಇಲ್ಲೇ ಎಲ್ಲೋ ಇದಾನಂತೆ ಅಂತ ಫ್ರೆಂಡ್ ಗೆ ಹೇಳಿ ಬಂದವಳನ್ನು ಊರು ಸುತ್ತಲು ಕರೆದುಕೊಂಡು ಹೋಗಿದ್ದೆ ನೀನು. ನಿನ್ನೊಂದಿಗಿನ ಮಾತುಗಳಲ್ಲಿ, ನೀ ಕೊಟ್ಟ ಕಂಫರ್ಟಬಲ್ ಫೀಲಿಂಗ್ ನಲ್ಲಿ  ಫ್ರೆಂಡ್ ಮತ್ತು ಸಮಯದ ನೆನಪೇ ಇಲ್ಲದೆ ಅನಾಮತ್ತು ನಾಲಕ್ಕು ತಾಸು ಕಳೆದಿದ್ದೆ ನಿನ್ನೊಂದಿಗೆ. ವಾಪಸ್ ಬಂದವಳನ್ನು ಏನಮ್ಮಾ  ಎನ್ನುತ್ತಾ ಹುಬ್ಬುಹಾರಿಸಿ ಕೇಳಿದ ಅವಳಿಗೆ he is a good guy  ಎಂದಷ್ಟೇ ಹೇಳಿದ್ದೆ ನಾನು. ನಿನ್ನ  ಕೆಲಸ ಗಳೆಲ್ಲ ಮುಗಿದು ನೀ ಫೋನ್ ಮಾಡುತ್ತಿದುದ್ದೆ ಹತ್ತು ಗಂಟೆಯ ನಂತರ. ಆಮೇಲೆ ಹನ್ನೆರಡು ಗಂಟೆಯವರೆಗೂ ಮಾತಾನಾಡುತ್ತಿದ್ದೆವು ನಾವು. ಪ್ರತಿದಿನದ ದಿನಚರಿಯಾಗಿತ್ತು. ವಿಷಯಗಳ ಕೊರತೆಯೇ ಇರಲಿಲ್ಲ ಇಬ್ಬರ ನಡುವೆ. ಗೆಳೆತನ ಗಾಢವಾಗಿತ್ತು ಎಂಬುದಕ್ಕೆ ಮತ್ತೇನೂ ಸಾಕ್ಷಿ ಬೇಕಿಲ್ಲ  ಅಲ್ಲವಾ. "ಜಸ್ಟ್ ಹೊರಟೆ ಆಫೀಸ್ ಇಂದ, ಐಸ್ ಕ್ರೀಂ ತಿನ್ನೋಣಾ ಅನಿಸ್ತಿದೆ ಕಣೋ" ಎಂದರೆ, "ಸ್ವಲ್ಪ ಅರ್ಜೆಂಟ್ ಇದೆ ಕಣೆ ಆಮೇಲೆ ಮಾಡ್ತೀನಿ" ಎಂದು ಸಡನ್ ಆಗಿ ಫೋನ್ ಕಟ್ ಮಾಡಿದವನು, ನಾ ನನ್ನ ಸ್ಟಾಪ್ ನಲ್ಲಿ ಇಳಿಯುವ ಹೊತ್ತಿಗೆ ಅಲ್ಲೇ ಇದ್ದು, "ನಡಿ ಯಾವ ಐಸ್ ಕ್ರೀಮ್ ತಿಂತಿಯಾ ?" ಅಂತ ಕೇಳಿ surprise  ಕೊಟ್ಟಿದ್ದು ಇನ್ನೂ ನೆನಪಿದೆ. "ಆಫೀಸ್ ಕೆಳಗಡೆ ಇದ್ದೇನೆ ಬೇಗ ಬಾ "ಎಂದವನು, ನನ್ನನ್ನು ದೇವಸ್ತಾನದ ಬಾಗಿಲಿಗೆ ಕರೆದುಕೊಂಡು ಹೋಗಿ ನಿಲ್ಲಿಸಿ, "ನಿನ್ನ ಜೊತೆ ದೇವಸ್ತಾನಕ್ಕೆ ಬರಬೇಕು ಅನ್ನಿಸ್ತು ಕರೆದುಕೊಂಡು ಬಂದೆ. ದೇವಸ್ತಾನಕ್ಕೆ ಬರುವಂತೆ ಇದ್ದೀಯಾ ತಾನೇ ?" ಎಂದು ಕಣ್ಣು ಮಿಟುಕಿಸಿದ್ದೆ.  ನನ್ನ ಹುಟ್ಟುಹಬ್ಬದ ದಿನ ಎಲ್ಲಾ ಕೆಲಸಗಳನ್ನು ಬದಿಗೊತ್ತಿ ನನ್ನೊಂದಿಗೆ ಕಳೆದದ್ದು, ನೀ ಕೊಂಡ ಫ್ಲಾಟ್  ನಲ್ಲಿ ಪುಟ್ಟ ಕೇಕ್ ನೊಂದಿಗೆ ನೀನೊಬ್ಬನೇ ಸೆಲೆಬ್ರೇಟ್ ಮಾಡಿದ್ದು. ಉಡುಗೊರೆಯಾಗಿ ನೀ ಕೊಟ್ಟ ಟೆಡ್ಡಿ ಬೇರ್, ಚೆಂದದೊಂದು ಪಿಲ್ಲೋ  ಇದೆಲ್ಲ ನೆನಪುಗಳು ಇನ್ನು ಹಸಿ ಹಸಿ. ನಮ್ಮಿಬ್ಬರಲ್ಲಿ  ಮುಚ್ಚುಮರೆಯಿರಲಿಲ್ಲ. ಎಲ್ಲ ವಿಷಯಗಳು ಗೊತ್ತಿರುತ್ತಿದ್ದವು. ನಿನ್ನ ತೋಳು ತಬ್ಬಿ ಬಿಕ್ಕಿದ ದಿನಗಳು ಬಹಳವಿದ್ದವು. ಅದೇನೋ ಕಾರಣಕ್ಕೆ ತುಂಬಾ ಬೇಜಾರಾಗಿ ನನ್ನ ಮಡಿಲಲ್ಲಿ ನೀ ತಲೆಯಿಟ್ಟು ಅತ್ತಿದ್ದು ಇನ್ನು ನೆನಪಿದೆ. 

ಸಾಮಾನ್ಯವಾಗಿ ಟೆಡ್ಡಿ , ಹೂ ಇದೆಲ್ಲ ಗಿಫ್ಟ್ ಕೊಡುವವನು ಪ್ರೇಮಿ ಎಂಬುದು ಜನಜನಿತ. ನಮ್ಮಿಬ್ಬರದು ಪ್ರೀತಿ ಎಂದೇ ನಮ್ಮಿಬ್ಬರ ಜೊತೆಯಲ್ಲಿದ್ದವರು ಭಾವಿಸಿದ್ದರು.ನಾವು ಹಾಗೆಯೇ ಇದ್ದೆವು ಬಿಡು. ಎಲ್ಲೆಂದರಲ್ಲಿ ಜೊತೆಯಾಗಿ ತಿರುಗಿದ್ದೇವೆ. ಎಷ್ಟೋ ಪರಿಚಯಸ್ತರ ಕಣ್ಣಿಗೆ ಬಿದ್ದಿದ್ದೇವೆ. ಆದರೆ ನಮ್ಮಲ್ಲಿ ಭಾವನೆಗಳೇಕೆ ಬದಲಾಗಲಿಲ್ಲವೋ ಗೊತ್ತಿಲ್ಲ. ನೀ ಕೊಡಿಸಿದ ಟೆಡ್ಡಿ ಅಪ್ಪಿ ಮಲಗುವಾಗ, ಆ ದಿಂಬಿಗೆ ಒರಗಿ ಕೂರುವಾಗ ಭಾವನೆಗಳು ಬದಲಾಗಲೇ ಇಲ್ಲ. ಬದಲಾಗಿದ್ದರೆ ಇಷ್ಟು ಹೊತ್ತಿಗೆ ನಾ ನಿನ್ನ  ಹೆಂಡತಿಯಾಗಿರುತ್ತಿದ್ದೆ ಎಂದು ನೆನೆಸಿಕೊಂಡರೆ ನಗು ಬರುತ್ತದೆ. ನಿನ್ನದೊಂದು ನೋಟ, ಸ್ಪರ್ಶ ಕೂಡಾ ಹಾಗಿರಲಿಲ್ಲ. "ಮನೆಗೆ ಹೋದರೆ ಮದುವೆಯ ಮಾತು ಎತ್ತುತ್ತಾರೆ. ನನಗೆ ಈ ಮದುವೆಯ ಮಾತೆ ಇಷ್ಟ ಆಗೋಲ್ಲಾ" ಎನ್ನುತ್ತಿದ್ದವನ convince ಮಾಡಿ ಊರಿಗೆ ಕಳಿಸುವಲ್ಲಿ ಸಾಕೋ ಸಾಕಾಗಿತ್ತು.  ನೀ ಹೋದ ಹದಿನೈದು ದಿನಗಳಲ್ಲಿ ಎಷ್ಟು ಮಿಸ್ ಮಾಡಿಕೊಂಡಿದ್ದೆ ಗೊತ್ತಾ. ಒಂದೊಂದು ದಿನಗಳು ಎಷ್ಟು ಕಷ್ಟಪಟ್ಟಿದ್ದೆ. ನಿನ್ನ ಕಂಡಾಗ ಮತ್ತೆ ಮನಸ್ಸಿಗೆ ರೆಕ್ಕೆ ಬಂದಷ್ಟೇ ಖುಷಿ . ವಾಪಾಸ್ ಬಂದವನು "ಮದುವೆಯಾಗಬಾರದು ಎಂದುಕೊಂಡವನನ್ನು ಹಾಳು ಮಾಡಿದ ಪಾಪಿ ಕಣೆ ನೀನು. ನಿನ್ನ next birthday  ದಿನ ನನ್ನ ಮದುವೆ" ಎಂದು ಕಾಫಿ ಡೇ ಯಲ್ಲಿ ಕೂರಿಸಿಕೊಂಡು ಹೇಳಿದ್ದೆಯಲ್ಲ. ತುಂಬಾ ಸಂತಸಗೊಂಡಿದ್ದೆ ನಾನು. ನಿನ್ನೊಡನೆ ಶಾಪಿಂಗ್ ಗೆಲ್ಲ ಓಡಾಡಿದವಳಿಗೆ, ನಿನ್ನ  ಮದುವೆಗೆ ಬರಲಾಗಲಿಲ್ಲ. ಮದುವೆಯ ಗಡಿಬಿಡಿಯಲ್ಲಿದ್ದರೂ ಗೆಳೆಯರಲ್ಲಿ ಹೇಳಿ ನನ್ನಿಷ್ಟವಾದ ಪುಸ್ತಕಗಳು ಮತ್ತು ಒಂದು ದೊಡ್ಡ ಬೊಕ್ಕೆ ನನ್ನ ಹುಟ್ಟುಹಬ್ಬದ ದಿನ  ನನಗೆ ತಲುಪುವಂತೆ ಮಾಡಿದ್ದೆ ನೀನು. ಅವತ್ತು ಖುಷಿಯಿಂದ ಕಣ್ಣಲ್ಲಿ ನೀರು ಬಂದಿತ್ತು. 

ಇವತ್ತಿಗೆ ಹೆಚ್ಚು ಕಡಿಮೆ ಮೂರು ವರ್ಷಗಳಾದವು ನಿನ್ನ ಮದುವೆಯಾಗಿ. ಚಂದದ ಸಂಸಾರ. ಇವತ್ತಿಗೂ ನಿನ್ನ ಖುಷಿಯಲ್ಲಿ ನನಗೊಂದು ಪಾಲಿದೆ. ನಿನ್ನ ನೆನಪುಗಳೇ ಹಾಗೆ ನೋಡು ಟೆಡ್ಡಿ ಬೇರ್ ನಿಂದ ತೆಗೆದಿಟ್ಟ ಹತ್ತಿಯಂತೆ, ಹರಡಿಕೊಂಡು ಬಿಡುತ್ತವೆ. ನಿನ್ನ ಎಲ್ಲ ನೆನಪು ಮಾಡಿಕೊಳ್ಳುತ್ತಲೇ ಒಣಗಿದ್ದ ಟೆಡ್ಡಿ ಗೆ ಹತ್ತಿ ತುಂಬಿ ಹೊಲಿದ್ದಿದ್ದಾಯ್ತು.ನಿನ್ನ ನೆನಪುಗಳನ್ನು ಜೋಪಾನವಾಗಿ ಎತ್ತಿಟ್ಟಿದ್ದಾಯ್ತು.ಆತ್ಮೀಯವೆನ್ನಿಸುವ ಎಲ್ಲ ಭಾವಗಳೂ ಪ್ರೀತಿಯೇ ಆಗಿರಬೇಕು ಎಂದೇನೂ ಇಲ್ಲ ಅಲ್ಲವಾ. ಇವತ್ತಿಗೂ ನೀ ಕೊಟ್ಟ ಟೆಡ್ಡಿ ಯನ್ನೇ ತಬ್ಬಿ ಮಲಗುತ್ತೇನೆ ಯಾವತ್ತಿನಂತೆ... 

48 comments:

 1. ಸಂಧ್ಯಾ ಮೇಡಂ,
  ನಿಮ್ಮಆತ್ಮೀಯ ಭಾವನೆಗಳು ತುಂಭಾ ಮುದ್ದಾಗಿ ಬರೆದಿದ್ದಿರಾ.
  ಲೇಖನ ಸೂಪರ್ ಓದಿ ಸಂತಸವಾಯಿತು

  ReplyDelete
  Replies
  1. ಕಲ್ಪನಾಭಾವಗಳು ಅಕ್ಷರಗಳಾಗಿವೆ ಕನಸು..
   ಧನ್ಯವಾದ .. :)

   Delete
 2. ಸಂಧ್ಯಾ,

  ಚಂದದ ಕಥೆ, ಚಂದದ ಬರಹ, ಎಂದಿನಂತೆ. ಇಷ್ಟ ಆಯ್ತು :)

  ಕೆಲವು ಸಂಬಂಧಗಳೇ ಹಾಗೆ ಅಲ್ಲವೇ? ಪ್ರೀತಿಯೇನೋ ಅದು ಎಂದು ಎಲ್ಲರೂ ಅಂದುಕೊಂಡುಬಿಡುತ್ತಾರೆ. ಆ ಭಾವವನ್ನು ಹಂಚಿಕೊಂಡವರನ್ನು ಬಿಟ್ಟು ಮತ್ತಾರಿಗೂ ಅರ್ಥ ಆಗದ ಸುಂದರ ಭಾವವದು.

  ಬರೀತಿರಿ.

  ReplyDelete
  Replies
  1. ನಿಜ ಸುಬ್ರಮಣ್ಯ , ಪ್ರೀತಿಯಲ್ಲದ ಭಾವಗಳೂ ನೋಡೋರ ಕಣ್ಣಲ್ಲಿ ಪ್ರೀತಿಯಾಗಿಯೇ ಪ್ರತಿಬಿಂಬಿಸುತ್ತವೆ.

   ಥ್ಯಾಂಕ್ ಯು

   Delete
 3. ಚಂದದ ಭಾವ ಬರಹ ಸಂಧ್ಯಕ್ಕಾ...
  ಎಂದಿನಂತೆ ಆತ್ಮೀಯವಾಗಿ ಓದಿಸಿಕೊಂಡು ಹೋಯ್ತು :)
  ಈ ಪ್ರೀತಿ,ಆತ್ಮೀಯತೆ,ಸ್ನೇಹದ ಭಾವಗಳೇ ಹೀಗೇನೋ ಅಲ್ವಾ ತೀರಾ ಅನ್ನೋ ಅಷ್ಟು ಹತ್ತಿರವಾಗಿಬಿಡುತ್ತೆ.
  ಮುದ್ದಕ್ಕನಷ್ಟೇ ಮುದ್ದಾಗಿದೆ ಈ ಭಾವ

  ReplyDelete
 4. ಒಳ್ಳೆಯ ಬರಹ... ಖುಷಿಯಾಯ್ತು...
  ಭಾವಗಳು ಒದ್ದೆಯಾಗಿವೆ...

  ReplyDelete
 5. ಭೇಷ್ ಗೆಳತಿ, ಎಲ್ಲ ಆತ್ಮೀಯತೆಯ ಅಂತ್ಯ ಮದುವೆಯೇ ಆಗಿರಬೇಕಿಲ್ಲ ಎಂಬ ತತ್ವ ಅದೆಷ್ಟು ಆಪ್ತವಾಗಿ ಬರೆದಿದ್ದೀರ.

  ReplyDelete
 6. ಇವತ್ತಿಗೆ ಹೆಚ್ಚು ಕಡಿಮೆ ಮೂರು ವರ್ಷಗಳಾದವು ನಿನ್ನ ಮದುವೆಯಾಗಿ. ಚಂದದ ಸಂಸಾರ. ಇವತ್ತಿಗೂ ನಿನ್ನ ಖುಷಿಯಲ್ಲಿ ನನಗೊಂದು ಪಾಲಿದೆ. ನಿನ್ನ ನೆನಪುಗಳೇ ಹಾಗೆ ನೋಡು ಟೆಡ್ಡಿ ಬೇರ್ ನಿಂದ ತೆಗೆದಿಟ್ಟ ಹತ್ತಿಯಂತೆ, ಹರಡಿಕೊಂಡು ಬಿಡುತ್ತವೆ. chenagiddu sis.....

  ReplyDelete
 7. ಸೂಪರ್ ಲೈಕ್.... ಇಬ್ಬರ ನಿರ್ಮಲ ಭಾವಕ್ಕೆ ...... :) :)

  ReplyDelete
 8. ಛೇ ಓದ್ತಾ ಓದ್ತಾ ಅದರೊಳಕ್ಕಿಳಿಯುವಷ್ಟರಲ್ಲಿ ಮುಗಿದೋಯ್ತು. ದೀರ್ಘಿಸಬೇಕಿತ್ತು ಇನ್ನಷ್ಟು

  ReplyDelete
  Replies
  1. ಯಾಕೋ ಭಾವಗಳನ್ನು ಪುಟ್ಟದಾಗಿ ಕಟ್ಟಿಕೊಡುವಂತಾಯಿತು. ಧನ್ಯವಾದ.

   Delete
 9. ಅಂತ್ಯ ಮದುವೆಯೇ ಅಂತೇನಿಲ್ಲ ನಿಜ... ಚೆಂದದ ಬರಹ ಸಂಧ್ಯಾ ಗುಡ್

  ReplyDelete
 10. ಪ್ರೀತಿಯೇ ಇಲ್ಲದ ಸಂಬಂಧಗಳು ಇರುವುದಕ್ಕೆ ಸಾಧ್ಯವೇ ಇಲ್ಲ. ಎಲ್ಲಾ ಸಂಬಂಧಗಳೂ ಒಂದಿಲ್ಲೊಂದು ರೀತಿಯಲ್ಲಿ ಪ್ರೀತಿಯನ್ನೇ ಆಶ್ರಯಿಸಿವೆ. ತಂದೆ ತಾಯಿಯ ಜತೆಗಿನ ಸಂಬಂಧ, ಸೋದರರ ನಡುವಿನ ಸಂಬಂಧ ಇತ್ಯಾದಿ ಎಲ್ಲವೂ. ಆದರೆ ಆ ಪ್ರೀತಿಗೆ ನಾವು ನೀಡುವ ಅರ್ಥವೇ ಸಂಬಂಧವೆನಿಸುತ್ತದೆ. ಇದು ಸಕಲ ಜೀವರಾಶಿಗೂ ಅನ್ವಯಿಸುತ್ತದೆ. ಹಾಗಾಗಿ ಪ್ರೀತಿಯ ವಿನಹ ಸಂಬಂಧ ಉಹೂಂ...
  ಸಂಧ್ಯಾ...ಬರಹ ಶೈಲಿ ಕಥೆಯನ್ನು ಓದಿಸಿಕೊಂಡು ಹೋಗುತ್ತದೆ, ಚೆನ್ನಾಗಿದೆ ಮುಂದುವರಿಸಿ.

  ReplyDelete
  Replies
  1. ಪ್ರೀತಿಯ ವಿನಃ ಸಂಬಂಧಗಳಿಲ್ಲ ನಿಜ. ಆದರೆ ಪ್ರೀತಿಯಲ್ಲದ ಸಂಬಂಧಗಳೂ ಇರುತ್ತವೆ. ಉಳಿದವರ ಕಣ್ಣಲ್ಲಿ ಪ್ರೀತಿಯೆನಿಸಿಕೊಂಡು, ಅನುಭವಿಸುವ ಮನಗಳಿಗೆ ಅವರಿಟ್ಟುಕೊಂಡ ಹೆಸರುಗಳಾಗಿ ..

   ಥ್ಯಾಂಕ್ಯು ಸರ್ ,..

   Delete
 11. ಖಂಡಿತಾ ಆತ್ಮೀಯವೆನಿಸುವೆಲ್ಲ ಭಾವಗಳೂ ಪ್ರೀತಿಯೇ ಆಗಬೇಕಿಲ್ಲ....

  ಪ್ರೀತಿಯೇ ಬೆಳೆದರೆ ಅದು ತಪ್ಪೂ ಅಲ್ಲ....

  ತುಂಬಾ ನವಿರಾದ ಭಾವ....ಖುಷಿಯಾಯ್ತು ಓದಿ......

  ReplyDelete
 12. ಎರಡು ಜೀವಗಳ ನಡುವೆ ಇಷ್ಟರ ಮಟ್ಟಿಗೆ ಸಲುಗೆ, ಆತ್ಮ್ಮಿಯತೆ, ಕೊಡುಕೊಳ್ಳುವಿಕೆ ಇದ್ದ ಮೇಲೆ.., ಅದು ಪ್ರೀತಿಯೇ ಯಾಕಾಗಬಾರದು..?
  ಮುಂದೆ ಯಾರೋ ಬಂದು ತಪ್ಪಿ ಮಲಗಿದ್ದ ಅದೇ ಟೆಡ್ಡಿಯನ್ನು ಪಡೆದು ಎತ್ತಿ ಬದಿಗಿರಿಸಬಹುದು.
  ಭವಿಷ್ಯದ ಆ ಪೊಸೆಸಿವ್-ನೆಸ್ ಕೂಡ ಅವನ ಪ್ರೀತಿಯ ಒಂದು ಭಾಗ ಇರಬಹುದು ಅಲ್ಲವೇ...?

  ಇದು ನಿಮ್ಮ ಬರಹ ಮೂಡಿಸಿದ ಒಂದು ಭಾವದಿಂದ ಬಂದ ಮಾತುಗಳಷ್ಟೇ..? ತಪ್ಪಾಗಿ ತಿಳಿಯಬೇಡಿ..
  ಎಂದಿನಂತೆ ಬರಹ ಬಹಳ ಚೆನ್ನಾಗಿದೆ.

  ReplyDelete
  Replies
  1. ಚೇತನ್ ತಪ್ಪು ತಿಳಿಯುವಂತಹ ಹೇಳಿಕೆಯಲ್ಲ ಇದು. ನೀವಂದದ್ದು ನಿಜವೇ. ಆದರೆ ಆ ಟೆಡ್ಡಿಯಲ್ಲಿರುವುದು ಸ್ನೇಹದ ಸ್ಪರ್ಶವೇ ಹೊರತು, ಪ್ರೀತಿಯ ಪೋಸ್ಸೇಸ್ಸಿವ್ ನೆಸ್ ಅಲ್ಲ. ಹಾಗಾಗಿ ಮುಂದೊಮ್ಮೆ ಯಾರೋ ಬಂದು ಟೆಡ್ಡಿ ಬದಿಗಿರಿಸಿ, ಆ ಜಾಗದಲ್ಲಿ ಇನ್ಯಾರಾದರೂ ಬಂದರೂ ಕೂಡಾ ಶೋ ಕೇಸ್ ನಲ್ಲಿ ಕುಳಿತ ಟೆಡ್ಡಿ ಕಣ್ಣು ಮಿತುಕಿಸಬಹುದೇನೋ ..:)
   Thank you

   Delete
 13. ಚೆಂದ ಇತ್ತು ಸಂದ್ಯಕ್ಕಾ.. ಪ್ರೀತಿಯಲ್ಲದ ಪ್ರೀತಿಯ ಪರಿಗೆ, ಅದ ತೋರಿಗೆ ರೀತಿಗೆ..ಎಲ್ಲಾ ಒಂದು ಸಲಾಂ.

  ReplyDelete
 14. ಚೆಂದದ ಬರಹ ಸಂಧ್ಯಾ. ಎರಡು ಸಂಭಂಧಗಳ ನಡುವಿನ ಆ ಶುಭ್ರತೆ ನನ್ನನ್ನ ಬಹಳ ಕಾಡಿದ್ದು ನಿಜ. ಸ್ವಲ್ಪ ಕಾಳಜಿ ಹೆಚ್ಚಾದರೂ ಸಂಭಂಧಗಳಿಗೆ ಬೇರೆ ರೂಪ ಕೊಟ್ಟು ಅಪಾರ್ಥ ಮಾಡಿಕೊಂಡು ಬಿಡುವ ಹಲವರಿಗೆ ಉದಾಹರಣೆಯಾಗಬಹುದಾದ ಬರಹ. ಇಷ್ಟ ಆಯ್ತು ಸಂಧ್ಯಾ.

  ReplyDelete
 15. ಸ್ನೇಹ, ಬಾಂಧ್ಯವ್ಯ, ಆತ್ಮೀಯತೆ, ಕಕ್ಕುಲತೆ, ಆಪ್ಯಾಯತೆ ಪ್ರೇಮ, ಪ್ರೀತಿ....ಎಲ್ಲದರಲ್ಲಿ "ಪ್ರೇಮ" ಎಕ್ಸ್ ಕ್ಲೂಸಿವ್ ಪ್ರೇಯಸಿ-ಹೆಂಡತಿ ವರೆಗೆ ಬರುವ ಶಬ್ದ. ಮಿಕ್ಕವೆಲ್ಲಾ ಇದೇ ರೀತಿ ಹತ್ತಿರಮಾಡುವ ಸಂಬಂಧಗಳೇ ಆದರೆ..ಇವುಗಳ ವ್ಯಾಕರಣವೇ ಬೇರೆ. ಸುಂದರ ಲೇಖನ ಪುಟ್ಟಿ...ಎಂದಿನ ಲವಲವಿಕೆ ನಿನ್ನ ಲೇಖನದಲ್ಲಿ ಮಿಸ್ ಆಗಿಲ್ಲ.

  ReplyDelete
 16. Like it very much Sandhya..... :-)

  ReplyDelete
 17. ಗೆಳೆತನದ ಗಾಢವಾದ ನಿಷ್ಕಲ್ಮಶ ಪ್ರೀತಿಯನ್ನು ಸುಂದರವಾಗಿ ಲೇಖಿಸಿದ್ದೀರಿ, ಸಂಧ್ಯಾ.

  ReplyDelete
 18. ಚಂದದ ಕಥೆ ಸಂಧ್ಯಕ್ಕಾ :)....ಬರೆದ ರೀತಿ ರಾಶಿ ಇಷ್ಟ ಆತು....ಸರಳ ,ಸುಂದರ.....
  ಒಂದು ಉತ್ಕೃಷ್ಟವಾದ ಮುಕ್ತ ಗೆಳೆತನವನ್ನು ಬಯಸುವುದು ನಮ್ಮೆಲ್ಲರ ಸಹಜತೆ.....
  ಅಂತಹ ಸಂಬಂಧವನ್ನು ನಿರುಪಣೆಯ ಹಾದಿಯಲ್ಲಿ ವಿಕಾರಗಳಿಗೊಡ್ಡದೆ ಆಪ್ತವಾದ ಅಂತ್ಯದಲ್ಲಿ ಕೊನೆಗಾಣಿಸಿದ್ದು ಬಹುಷಃ ಈ ಕಥೆ ಎಲ್ಲರ ಮನಗೆಲ್ಲುವಂತೆ ಮಾಡಿದೆ ಅನಿಸುತ್ತಿದೆ.....ವಂದನೆಗಳು :)

  ReplyDelete
 19. ನಿಮ್ಮ ಬರಹ ಓದಲು ಇಷ್ಟವಾಯ್ತು. ಕೆಲವೊಮ್ಮೆ ಆತ್ಮಿಯತೆ ಪ್ರಿತಿಯೆಂದು ತಪ್ಪು ತಿಳಿವಳಿಕೆಯಿಂದ ಒಳ್ಳೆಯ ಸ್ನೇಹವನ್ನು ಕಳೆದುಕೊಳ್ಳುವುದೂ ಉಂಟು.

  ReplyDelete
 20. Excellent as usual, Wanted to start my day by reading something good... I was thinking what to read and the first thing came to my mind is your blog. Searched for the latest article and it did not disappoint :) thanks, now I can work ;-)

  ReplyDelete
  Replies
  1. ಥ್ಯಾಂಕ್ಸ್ ಮಂಜಣ್ಣ .. ಈ ಥರದ ಕಾಮೆಂಟ್ ಗಳು ಖುಶಿನೂ ಕೊಡ್ತು ಅದ್ರ ಜೊತೆ ಜವಾಬ್ದಾರಿನೂ ಜಾಸ್ತಿ ಮಾಡ್ತು ..
   Thank you very much..

   Delete
 21. ಚಂದದ ಭಾವ ಬರಹ..
  ಟೈಟಲ್ ಲ್ಲೇ ಸೂಪರ್ ಕಣೆ... ಬರಹ ಇನ್ನೂ ಸೂಪರ್

  ReplyDelete
 22. tumba andada saalugalu,,naanu kooda mindu edde,,
  dhanyavaadagalu...,

  ReplyDelete
 23. ಪ್ರೀತಿಗೆ ಭಾವ ಬೇಕಿಲ್ಲ.. ಭಾಷೆ ಬೇಕಿಲ್ಲ.. ಇದೆಲ್ಲವೂ ಸರಿ.. ಗೆಳೆತನ ಎನ್ನುವುದು ಪ್ರೀತಿಯೇ .. ಪ್ರೀತಿಯೂ ಕೂಡ ಗೆಳೆತನವೆ.. ಆದರೆ ಅದು ಅದರ ಮುಂದಿನ ಸ್ಟಾಪ್ ಅಷ್ಟೇ..

  ಲೇಖನದಲ್ಲಿ ಹೇಳಿದ ಪ್ರತಿ ಮಾತು ನಿಜ.. ಸುಂದರ ಗೆಳೆತನ ಇದ್ದಾಗ ಅಲ್ಲಿ ಪ್ರೀತಿಯೇ ಅಥವಾ ಅದರ ಮುಂದಿನ ಹಂತವೇ ಎನ್ನುವ ಗೊಂದಲವೇ ಇರೋಲ್ಲ.. ಹೆಸರಿಸಲಾರದ.. ಅಥವಾ ಹೆಸರಿಸಲಾಗದ ಅದೆಷ್ಟೋ ಗೆಳೆತನ ನಮ್ಮ ಕಣ್ಣ ಮುಂದೆಯೇ ಇದೆ..


  ಸುಂದರ ಲೇಖನ ಎಸ್ ಪಿ.. ಓದಿದ್ದು ತಡವಾಗಿ .. ಆದರೆ ಲೇಖನ ಇಷ್ಟವಾಗಿದ್ದು ಎಂದಿನಂತೆ ಸದಾ ಹಿತವಾಗಿ.

  ReplyDelete
 24. ellavu kevala maaye aste..., nija jeevanakinta kanasu tumba sundara.., Preethi kooda maaye..,

  ReplyDelete
 25. This article is too good. Aa strong emotion na tumba chennagi torsideera :-)

  ReplyDelete