Wednesday 4 April 2012

ಕಾಯುತ್ತಿದ್ದೇನೆ ಗೆಳತಿ ಕತ್ತಲ್ಲಲ್ಲಿ..


ಮನಸ್ಸಿನಿಂದ ನೀನೆದ್ದು ಹೋದ 
ರಭಸಕ್ಕೆ  ಎದೆಮನೆಯ 
ಪ್ರೀತಿಯ ಹಣತೆ ಆರಿಹೋಗಿತ್ತು..
ಆದರೂ ಕಾಯುತ್ತಿದ್ದೇನೆ 
ಗೆಳತಿ ಕತ್ತಲ್ಲಲ್ಲಿ..
ಎಂದಾದರೊಮ್ಮೆ 
ನೀ ಮರಳಿ ಬರಬಹುದು 
ಈ ಮನಸ್ಸಿಗೆ..
ಪ್ರೇಮದ ಹಣತೆ 
ಮತ್ತೆ ಉರಿಯಬಹುದು..
ಎದೆ ಮನೆಯಲ್ಲಿ 
ಮತ್ತೆ ಬೆಳಕಾಗಬಹುದೆಂಬ 
ನಿರೀಕ್ಷೆಯಲ್ಲಿ...

13 comments:

  1. ಆದರೂ ಕಾಯುತ್ತಿದ್ದೇನೆ
    ಗೆಳತಿ ಕತ್ತಲ್ಲಲ್ಲಿ..
    ಎಂದಾದರೊಮ್ಮೆ
    ನೀ ಮರಳಿ ಬರಬಹುದು
    ಈ ಮನಸ್ಸಿಗೆ.. nice lines ...

    ReplyDelete
  2. ತುಂಬಾ ಚಂದದ ಸಾಲುಗಳು.......ಕಾಯುವಿಕೆ ನಿರಂತರ...

    ReplyDelete
  3. ನನ್ನೊಳಗಿನ ಕನಸು,ಮೌನರಾಗ, Ishwara Bhat ಧನ್ಯವಾದ... ಎಲ್ಲರಿಗು

    ReplyDelete
  4. ಉರಿಯುತ್ತಿರಲಿ ನಿರೀಕ್ಷೆಯ ಹಣತೆ
    ಅರಳುತ್ತಿರಲಿ ಸದಾ ಚೆಂದದ ಕವಿತೆ :)

    ReplyDelete
  5. chanda idde sandhya....ಪ್ರೇಮದ ಹಣತೆ
    ಮತ್ತೆ ಉರಿಯಬಹುದು..
    ಎದೆ ಮನೆಯಲ್ಲಿ
    ಮತ್ತೆ ಬೆಳಕಾಗಬಹುದೆಂಬ
    ನಿರೀಕ್ಷೆಯಲ್ಲಿ... nice..... :)

    ReplyDelete
  6. Kaayuvudaralloo khushiyide!
    Good one :)

    ReplyDelete
  7. ಮನವೆಂಬ ಒಲೆಯಲ್ಲಿ ಕಟ್ಟಿಗೆಯಿಂದಾದ ಪ್ರೀತಿಯ ಕೆಂಡವಿದ್ದರೆ ಸಾಕು..ತುಸು ಗಾಳಿಗೆ ಮತ್ತೆ ಪುಟವಿಟ್ಟು..ದೀಪದ ಬೆಳಕು ಜೋರಾಗಿರುತ್ತೆ..ಗಾಳಿಯ ನಿರೀಕ್ಷೆಯಲ್ಲಿರುವ ಗೆಳೆಯನ ಆಶಯ ನವಿರಾಗಿ ವ್ಯಕ್ತಪಡಿಸಿರುವ ಬಗೆ ಚಂದ ಅನಿಸುತ್ತದೆ...ಸುಂದರ ಪಿ.ಎಸ್

    ReplyDelete