Wednesday 11 April 2012

ಇರುವುದೊಂದೇ ಆಶಯ..


 ಒಂಭತ್ತು ತಿಂಗಳು ಆಡಿದ್ದು 
ಅಮ್ಮಾ ನಿನ್ನ ಒಡಲಲ್ಲಿ...
ಆಮೇಲೆ ಬೆಳೆದದ್ದು 
ಅಪ್ಪಾ ನಿನ್ನ ನೆರಳಲ್ಲಿ..

ಅಪ್ಪನ ಏಟು ತಿಂದು ಬಿಕ್ಕಳಿಸುವಾಗ 
ಸಿಕ್ಕಿದ್ದು ಅಮ್ಮಾ ನಿನ್ನ ಮಡಿಲು..
ಅಮ್ಮನ ಬೈಗುಳಗಳಿಗೆ ಹೆದರಿ 
ಓಡಿ ಬಂದು ತಬ್ಬಿದ್ದು ಅಪ್ಪಾ ನಿನ್ನ ಹೆಗಲು..

ಬದುಕಲು ಕಲಿಸಿದ್ದು ಅಪ್ಪನ 
ಅಧಿಕಾರದ ನೀತಿ...
ಬದುಕಲ್ಲಿ ಬೆಳೆಸಿದ್ದು ಅಮ್ಮನ 
ವಾತ್ಸಲ್ಯದ ಪ್ರೀತಿ..

ನನ್ನ ಪ್ರತಿ ಕಷ್ಟಗಳಿಗೂ 
ಮಿಡಿದದ್ದು ನಿಮ್ಮ ಜೀವ..
ನನ್ನ ಪ್ರತಿ ಸಫಲತೆಯಲ್ಲೂ 
ಕಂಡದ್ದು ನಿಮ್ಮ ಕಣ್ಣಲ್ಲಿ ಧನ್ಯತಾ ಭಾವ..

ನಿಮ್ಮ ಮುದ್ದಿನ ಮಗಳಾಗಿ 
ನನಗಿರುವುದೊಂದೇ ಆಶಯ 
ಅನುಕ್ಷಣವೂ ನಿಮಗಿರಲಿ 
ಆ ಭಗವಂತನ ಅಭಯ..


13 comments:

  1. ಅಪ್ಪ ಅಮ್ಮನ ಮಮತೆ, ಪ್ರೀತಿಯ ಋಣ ತೀರಿಸಲು ಸಾದ್ಯವೇ....?
    ತನಗಿಲ್ಲದಿದ್ದರೂ ಮಕ್ಕಳಿಗೆ ಕೂಡಿಡುವ ಅಮ್ಮಾ, ತನ್ನ ಮಕ್ಕಳು ಸುಖವಾಗಿರಲೆಂದು ಅನುಕ್ಷಣ ಬೆವರು ಸುರಿಸೋ ಅಪ್ಪ....ನಿಜಕ್ಕೂ ಗ್ರೇಟ್...
    ಅಂತಹ ದೈವಸ್ವರೂಪಿಗಳಿಗೆ ಕವನದ ಸಮರ್ಪಣೆ... ಚೆನ್ನಾಗಿದೆ.....

    ReplyDelete
    Replies
    1. ಹೌದು ಸುಷ್ಮಾ ರವರೆ ಅವರಿಗೆ ಸರಿ ಸಾಟಿ ಯಾರು ಹೇಳಿ.. ಕವನ ಇಷ್ಟಪಟ್ಟಿದ್ದಕ್ಕೆ ಧನ್ಯವಾದ..

      Delete
  2. ಚೆನ್ನಾಗಿದೆ.. ಬಣ್ಣ ಚೇಂಜ್ ಮಾಡಿ ಪ್ಲೀಸ್ :)

    ReplyDelete
  3. ಚೆನ್ನಾಗಿದ್ದು.. ಇಷ್ಟ ಆತು :)

    ReplyDelete
  4. ಚೆನ್ನಾಗಿದೆ..
    ಬೆಳೆದು ದೊಡ್ಡವರಾದ ಮೇಲೆ ಅಪ್ಪ ಅಮ್ಮನ್ನ ಮರೆಯುವ ಇಂದಿನ ಯುಗದ ಜನರಿಗೆ ಇಂಥಹ ಕವಿತೆಗಳು ಮಾದರಿಯಾಗಬೇಕಿದೆ.
    ಶುಭವಾಗಲಿ.

    ReplyDelete
  5. ಅಮ್ಮ ಜೀವ ತುಂಬುವ ದೀಪದ ಸೊಡಲಾದರೆ ಅಪ್ಪ ಅದನ್ನು ಬೆಳಗುವ ಎಣ್ಣೆಯಾಗುತ್ತಾರೆ ನಾವು ಅದಕ್ಕೆ ಬತ್ತಿಯಾಗಿದ್ದರೆ ಸಾಕು...ಅವರ ಆಸೆಯ ದೀಪ ಪ್ರಕಾಶವಾಗಿ ಬೆಳಗುತ್ತದೆ...ಅಪ್ಪ ಅಮ್ಮನ ನೆರಳಲ್ಲಿ ಅರಳಿದ ಯಾವ ಸುಮವು ಬಾಡುವುದಿಲ್ಲ.ಸುಂದರ ಸಾಲುಗಳು ಎಸ್.ಪಿ..ತುಂಬಾ ಇಷ್ಟವಾಯಿತು

    ReplyDelete