Monday 30 April 2012

ಒಂಟಿ ಹೆಜ್ಜೆಗುರುತುಗಳಲ್ಲಿ...

ಮರೆತರೂ ಮರೆಯದೆ ...
ಮತ್ತೆ ಮತ್ತೆ ನೆನಪಾಗಿ..
ಕಾಡುವೆ ನೀನು..
ಕೊಲ್ಲುವ ನೆನಪುಗಳಲ್ಲಿ..
ಕದಡಿದ ಸಂಬಂಧಗಳಲ್ಲಿ..
ನೀರು ಬತ್ತಿದ ಕಣ್ಣುಗಳಲ್ಲಿ..
ನೀ ಬಿತ್ತಿದ ಕನಸುಗಳಲ್ಲಿ..
ಒಡೆದ ಮನದ 
ಕನ್ನಡಿಯ ಪ್ರತಿಬಿಂಬಗಳಲ್ಲಿ..
ಬಾಳ ಪಯಣದ 
ಒಂಟಿ ಹೆಜ್ಜೆಗುರುತುಗಳಲ್ಲಿ...

8 comments:

  1. ಚೆನ್ನಾಗಿದೆ....

    ಹೇಗಿದ್ದರೂ...
    ನಿನ್ನ ...
    ಮೆಲುಕುಗಳು..
    ನೆನಪುಗಳೇ ಹಾಗೆ...

    ಬರಡನ್ನೂ ಚಿಗುರಿಸುತ್ತವೆ...
    ನೋವಿನಲ್ಲೂ...

    ReplyDelete
  2. ಸ್ವಲ್ಪ ಸಾದಾ ಅನ್ನಿಸ್ತು..... ಮನಸ್ಸು ಮಾಡಿದರೆ ಇನ್ನೊ ಚೆಂದದ ಕವಿತೆ ಕಟ್ತೀರಿ.....

    ReplyDelete
  3. ಚೆನ್ನಾಗಿದೆ....
    ನೆನಪುಗಳಿಂದಲೇ ಕವನ,
    ನೆನಪುಗಳಿಂದಲೇ ಜೀವನ,
    ನೆನಪುಗಳ ನೆನಪಲ್ಲೇ
    ಸಾಗುತಿದೆ ನಮ್ಮೀ ಪಯಣ.

    ReplyDelete
  4. ನೆನಪುಗಳು ಮರಳ ಮೇಲೆ ಬರೆದ ಗೆರೆಗಳಲ್ಲ..ಅದು ಮನದ ಕಲ್ಲ ಮೇಲೆ ಕೆತ್ತಿದ ಅಕ್ಷರಗಳು..ಮನ ಒಡೆದರು ಅಕ್ಷರಗಳು ಬಿಡಿಯಾಗಿ ಬಿಡುತ್ತವೆ..ಮತ್ತೆ ಒಂದಕ್ಕೊಂದು ಜೋಡಿಸಹೋಗಿ ಅರ್ಥಗಳೇ ಬೇರೆಯಾಗುತ್ತವೆ..ಆದ್ರೆ ನೆನಪುಗಳು ಮಾತ್ರ ಮರೆಯಾಗಲ್ಲ...ಅಕ್ಷರಗಳನ್ನು ಜೋಡಿಸಿದ ರೀತಿ ಶಾಲೆಯಲ್ಲಿ ಮಕ್ಕಳು ಸಾಲಾಗಿ ಶಿಸ್ತಿನಂತೆ ಸಾಗುವ ದೃಶ್ಯ ನೆನಪಿಗೆ ಬರುತ್ತವೆ..
    ಸೂಪರ್ ಎಸ್.ಪಿ.

    ReplyDelete