Thursday 9 August 2012

ಯಾರಿಗೂ ದಕ್ಕಲಿಲ್ಲ ಇಡಿಯಾಗಿ.


ದೇವಕಿಯ ಕರುಳ ಕುಡಿಯಾಗಿ ..
ಯಶೋಧೆಯ ಕಣ್ಣ  ಬೆಳಕಾಗಿ ...
ತುಂಟ ಗೊಲ್ಲರಲಿ ...
ತಂಟೆ ಮಾಡುವ ಒಡನಾಡಿಯಾಗಿ..
ರುಕ್ಮಿಣಿ ಸಖನಾಗಿ .. 
ದ್ರೌಪದಿ ಸಹೋದರನಾಗಿ ...
ಭಾಮೆಯ ಮುಂಗೋಪದ ನುಡಿಯಾಗಿ ..
ವಿರಹಿ ರಾಧೆಯ ಬಿಸಿಯುಸಿರ ಕಿಡಿಯಾಗಿ ..
ಕಳ್ಳ ಕೃಷ್ಣ  ಕೊನೆಗೂ ...
ಯಾರಿಗೂ   ದಕ್ಕಲಿಲ್ಲ  ಇಡಿಯಾಗಿ ..

11 comments:

  1. ಇಡಿಯಾಗಿ ಯಾರಿಗೂ ದಕ್ಕದಿರುವುದರಲ್ಲೇ ಕೃಷ್ಣನ ಗೆಲುವಿದೆಯೇನೋ...
    ಅವರವರ ಭಾವಕ್ಕೆ ಬೇಕಾದಂತೆ ಇಷ್ಟಿಷ್ಟೇ ಸಿಕ್ಕಿ ಇನ್ನಷ್ಟು ಬೇಕಿತ್ತೆನಿಸಿ ಕಾಡುವುದರಿಂದಲೇ ಕೃಷ್ಣ ಎಲ್ಲರಿಗೂ ಅಷ್ಟೊಂದು ಪ್ರಿಯನೇನೋ...
    ಕಿಲಾಡಿ ಅವನು - ಎಷ್ಟೆಲ್ಲ ತುಂಟಾಟ ಆಡಿಯೂ ಸಭ್ಯನೆನಿಸಿಕೊಂಡ ಹಿರಿಮೆ ಅವನದು...
    :::
    ಚಂದದ ಸಾಲುಗಳು ಸಂಧ್ಯಾ...

    ReplyDelete
    Replies
    1. ಯಾರಿಗೂ ದೊರಕದೆಯೇ ಕೃಷ್ಣ ಗೆದ್ದಿದ್ದು ಶ್ರೀ..
      ಧನ್ಯವಾದ ಇಷ್ಟಪಟ್ಟಿದ್ದಕ್ಕೆ

      Delete
  2. ಸಂಧ್ಯಾ.....ಸೊಗಸಾಗಿದೆ ಕೃಷ್ಣನ ಇಡಿ ಜೀವನದ ಅಂಗಳವನ್ನ ಕೆಲ ಹಿಡಿ ಪದದಲ್ಲಿ ಮೊಗೆದು ತೆಗೆದ ರೀತಿ
    ಯುಗ ಪುರುಷರೇ ಹಾಗೆ...ಹರಿಯುವ ನದಿಯಂತೆ..ತನ್ನ ಪಾತ್ರದಲ್ಲಿ ಬರುವ ಎಲ್ಲರನು ತನ್ನ ಪ್ರಭಾವದಿಂದ ಶ್ರೀಮಂತಗೊಳಿಸುತ್ತ...ಎಲ್ಲರ ಜೊತೆಯಲ್ಲಿಯೂ..ಆದ್ರೆ ಯಾರ ಜೊತೆಗೂ ಇರದೇ..ತಮ್ಮ ಕೈಂಕರ್ಯ ಮುಗಿಸುತ್ತಾರೆ..

    ReplyDelete
    Replies
    1. ನಿಮ್ಮ ಮಾತು ನಿಜ ಅಣ್ಣಯ್ಯ.. ಧನ್ಯವಾದ

      Delete
  3. ಯಾಕಿಲ್ಲ ಭಕ್ತರಿಗೆ ಮತ್ತು ದಾಸರಿಗೆ ಆತ ದೊರಕಿದ ಒಟ್ಟಾಗಿ.

    ಈ ನಡುವೆ ಕೃಷ್ಣನ ಬಗೆಗೆ ಓದಿನ ಕವನಗಳಲೆಲ್ಲ ವಿಭಿನ್ನ ಕವನ ಇದು.
    www.badari-poems.blogspot.com

    ReplyDelete
  4. vibhinnavaagi,chendavaagi krishnanabagege varnisiddeeri....chendada kavite..

    ReplyDelete
  5. ಇಡಿಯಾಗಿ ದಕ್ಕಲ್ಲಿಲ್ಲ..
    ಪರಿಪೂರ್ಣ ಭಾವ ಮೂಡಿಸುವಲ್ಲಿ ಸೋಲಲ್ಲಿಲ್ಲ..
    ಚಂದದ ಕವನ...

    ReplyDelete