Saturday 27 April 2013

ತೋಚಿದ್ದು .. ಗೀಚಿದ್ದು ...



ಸತ್ತ ಸಂಬಂಧಗಳೆಲ್ಲ .. 
ಸವಿ ನೆನಪುಗಳಾಗಿ 
ಫ್ರೇಮ್ ನಲ್ಲಿ ಕುಳಿತಿವೆ .. 

ಮುಚ್ಚಟೆಯಿಂದ 
ಮನದ ಪೆಟ್ಟಿಗೆಯಲ್ಲಿಟ್ಟು .. 
ಬೀಗ ಹಾಕಿದ್ದಾಗಿದೆ ... 

ಕೀ ಕಳೆಯಬೇಕೆಂದಾಗೆಲ್ಲ 
ಹಾಳಾದ್ದು ಕೀಲಿಯಿಟ್ಟ  ಜಾಗ 
ತಪ್ಪದೆ ನೆನಪಾಗುತ್ತದೆ...  

****************************

ಹೀಗೊಂದು ಕೆಟ್ಟ ಕನಸು... 
ಸೇತುವೆಗಳೆಲ್ಲ ಗೋಡೆಗಳಾಗಿ 
ಬದಲಾದಂತೆ ... 

*****************************
ಒಂದು ವೇಳೆ ಅವನು ಕೃಷ್ಣನಾದರೆ 


ಭಾಮೆ ನಾನೇ, ...

ನೀ ರಾಧೆಯಾಗಬೇಕಿತ್ತೇನೋ. ...

ಆದರೆ ನಾ ಭಾಮೆಯಾಗಲೂ ಇಲ್ಲ...

ನಿನಗೆ ರಾಧೆಯಾಗಲೂ ಬಿಡಲಿಲ್ಲ. ...

ಅವನು ಮಾತ್ರ ರಾಮನಾಗಿಬಿಟ್ಟ ...

ಚೆಂದದ ಅವನದೇ ಸಂಸಾರದಲ್ಲಿ. ...

************************

ನೀ ಅರ್ಧದಲ್ಲೇ ಎದ್ದು ಹೋದ 
ನಂತರವೂ ನಿನ್ನ ಹೊರತಾದ 
ಬದುಕೊಂದಿದೆ ಎಂದು 
ಅರ್ಥ ಮಾಡಿಕೊಂಡಾಗಿನಿಂದ 
ನಿನ್ನ ನೆನಪುಗಳಿಗೆ 
ಪೂರ್ಣವಿರಾಮ ಬಿದ್ದಿದೆ ... 

************************

ಮರೆವಿನ ಅಲೆಗಳು...
ಎಲ್ಲವನ್ನೂ ಅಳಿಸುತ್ತವೆ..
ಮನದ ತೀರದಲ್ಲಿ ಬರೆದ...
ನಿನ್ನ ಹೆಸರೊಂದನ್ನು ಬಿಟ್ಟು...

********************
ದ್ವೇಷಿಸಲು ಸಾಧ್ಯವಿಲ್ಲದಷ್ಟು
ನಿನ್ನನ್ನೂ ಪ್ರೀತಿಸಿದ್ದಕ್ಕೋ ಏನೋ ..
ನಿನ್ನನ್ನು ಕಳೆದುಕೊಂಡದ್ದಕ್ಕೆ 
ಬೇಸರವಿಲ್ಲ ಕಣೋ .. . 
ಆದರೆ ಕೊಟ್ಟಂತೆ ಮಾಡಿ 
ಕಸಿದುಕೊಂಡ ಬದುಕಿನ 
ಪರಿಸ್ಥಿತಿಯ ಬಗೆಗೆ 
ಒಂದು ಮೌನ ತಿರಸ್ಕಾರವಿದೆಯಷ್ಟೇ..
-----



 ಇಲ್ಲಿನ ಮೊದಲ ಮೂರು ಹನಿಗಳು ಏಪ್ರಿಲ್ ಹದಿನೆಂಟರ "ಅವಧಿ" ಯಲ್ಲಿ ಪ್ರಕಟಗೊಂಡಿದ್ದವು. 

24 comments:

  1. ತೋಚುವ ಮನಕ್ಕೆ ಗೀಚುವ ಹಂಬಲ ಬಂದಾಗ ಏಳುವ ಪದಗಳು..... ಅಕ್ಷರಗಳನ್ನು ಹುಡುಕಿ ತಡಕಿ ಕರೆತರುತ್ತವೆ. ಕೈ ಬೀಸಿ ಕರೆದರೂ ಬರದ ಭಾವಗಳು.... ಪದಗಳಲ್ಲಿ ಅಡಗಿ ಕೂತಾಗ ಸಿಗುವ ಆನಂದವೇ ಆನಂದ. ಪ್ರತಿಯೊಂದು ಚುಟುಕಗಳು ಪ್ರಭಾವಶಾಲಿಯಾಗಿವೆ.

    ನೆನಪುಗಳು ಕನಸಲ್ಲಿ ಸಿಕ್ಕ ಭಾವದಂತೆ ಅಲ್ಪವಿರಲಿ ಪೂರ್ಣ ವಿರಲಿ ವಿರಾಮವಂತೂ ಇದ್ದೆ ಇರುತ್ತದೆ. ಸುಂದರ ಕವನಗಳ ಮಾಲೆ ಎಸ್ ಪಿ

    ReplyDelete
  2. ನಿಜಕ್ಕೂ ಸುಂದರವಾದ ಭಾವ ಸಂಧ್ಯಕ್ಕಾ ...
    ಕೊಟ್ಟಂತೆ ಮಾಡಿ
    ಕಸಿದುಕೊಂಡ ಬದುಕಿನ
    ಪರಿಸ್ಥಿತಿಯ ಬಗೆಗೆ
    ಒಂದು ಮೌನ ತಿರಸ್ಕಾರವಿದೆಯಷ್ಟೇ..
    ವಾಹ್ ಬಿಟ್ಟು ಇನ್ನೇನನ್ನೂ ಹೇಳಲಾಗದ ಭಾವ ಲಹರಿ
    ತುಂಬಾನೆ ಇಷ್ಟ ಆಯ್ತು ...

    ReplyDelete
  3. ಬಿಡಿ ಭಾವಗಳ ಸಂಕಲವು ಚೆನ್ನಾಗಿದೆ. ನನಗೆ ಅತ್ಯಂತ ನೆಚ್ಚಿಗೆಯಾದದ್ದು:
    " ಕೀ ಕಳೆಯಬೇಕೆಂದಾಗೆಲ್ಲ
    ಹಾಳಾದ್ದು ಕೀಲಿಯಿಟ್ಟ ಜಾಗ
    ತಪ್ಪದೆ ನೆನಪಾಗುತ್ತದೆ... "
    ಹೌದಲ್ಲವೇ? ಯಾಕೆ ನೆನಪೇ ಹೀಗೆ ನೀನು?

    ReplyDelete
  4. ಒಂದಕ್ಕಿಂತ ಒಂದು ಅಧ್ಭುತ... ನೈಸ್ ಸಂಧ್ಯ :-)

    ReplyDelete
  5. ಚೆಂದಿದ್ದು ಸಂದ್ಯಕ್ಕ .. ಹೊಸ ಪದ "ಮುಚ್ಚಟೆ" :-)

    ReplyDelete
  6. ಇಷ್ಟಿಷ್ಟೇ ಮಾತಲ್ಲಿ ಎಷ್ಟೆಲ್ಲ ಭಾವಗಳು...
    ಇಷ್ಟವಾಯಿತು ಅಂತ ಮತ್ತೆ ಬಿಡಿಸಿ ಹೇಳಬೇಕಾ....

    ReplyDelete
  7. ಗೀಚಿದ್ದೆಲ್ಲಾ
    ನಾಚುತ್ತಿದೆ
    ಈಗೀಗ ಸಂದ್ಯೆ
    ಅಂಗಳದಲಿ
    ಚಂದ್ರನಿಲ್ಲ....


    ಬಹಳ ಚನ್ನಾಗಿವೆ ಒಂದಕ್ಕಿಂತ ಒಂದು ಸುಂದರ ಸಂಧ್ಯಾ

    ReplyDelete
  8. ಆರೂ ಕವಿತೆಗಳು, ಇಷ್ಟವಾದವು. ಪ್ರತಿಯೊಂದು ಕವಿತೆಯೂ ತನ್ನದೇ ಆದ ಅರ್ಥ ಹೊಂದಿದೆ, ಚಂದದ ಕವಿತೆ ಬರೆದ ತಂಗಿಗೆ ಜೈ ಹೊ ಎನ್ನೋಣ

    ReplyDelete
  9. ಒಂದಿಕ್ಕಿಂತ ಒಂದು ಸುಂದರ ಸಾಲುಗಳು .... ಸಾಲದ್ದಕ್ಕೆ ಅಲ್ಲಲ್ಲಿ ಕಾಡುವ ರಾಧೆಯ ಭಾವ ....
    ಬರೆಯುತ್ತಿರಿ ... :)

    ReplyDelete
    Replies
    1. Thanks Ravikiran... Radhe endigu kaaduvavale... Welcome to my blog

      Delete
  10. ಸಂಧ್ಯಾ, ತುಂಬಾ ತುಂಬಾ ಚೆನ್ನಾಗಿವೆ!

    ReplyDelete
  11. ಮರೆವಿನ ಅಲೆಗಳು...
    ಎಲ್ಲವನ್ನೂ ಅಳಿಸುತ್ತವೆ..
    ಮನದ ತೀರದಲ್ಲಿ ಬರೆದ...
    ನಿನ್ನ ಹೆಸರೊಂದನ್ನು ಬಿಟ್ಟು...

    ಸಾಲುಗಳು ತುಂಭಾ ಇಷ್ಟವಾಯಿತು... ಹೀಗೆ ಬರೆಯುತ್ತಿರಿ

    ReplyDelete