Monday 13 May 2013

ನೀನಿರಬೇಕಿತ್ತು ..





ಮಿತ್ರ ದಿನೇಶ್ ಮನೀರ್ ತೆಗೆದ ಈ  ಫೋಟೊ ನೋಡಿ ಬರೆದ ಸಾಲುಗಳಿವು. ಅವರದೇ ವೆಬ್ಸೈಟ್ ನ ಚಿತ್ರ -ಕಾವ್ಯ ಸರಣಿಯಲ್ಲಿ ನನಗೊಂದು ಅವಕಾಶ ಸಿಕ್ಕಿತ್ತು. ನನ್ನ ಸಾಲುಗಳಿಗಿಂತಲೂ ಚಂದದ ಫೋಟೋ ಇಲ್ಲಿದೆ. ಒಮ್ಮೆ ನೋಡಿ ಬನ್ನಿ .

Thank you Dineshanna for this opportunity ... 


ಹೊಸ ಬೆಳಗಿನಲ್ಲಿ ... 
ಅಂಗಳದ ತುಂಬಾ 
ಹರಳು ಇಬ್ಬನಿಯ  
ರಂಗವಲ್ಲಿ ಮೂಡಿತ್ತು ...

ಎಳೆ ಬಿಸಿಲ ಉಂಗುರಗಳ 
ಜೊತೆಯಾಗಿ ನೀನಿರಬೇಕಿತ್ತು ..  

ಊರಂಚಿನ ಹಸಿರ ಮೇರೆಯೆಲ್ಲ 
ಆಗಸದ ಕೆಂಪಿನಲ್ಲಿ ಕರಗಿ 
ಕತ್ತಲ ಮಡಿಲಲ್ಲಿ  ಮಲಗುತಿರಲು 
ಬೀಸು ತಂಗಾಳಿಯಲ್ಲಿ 
ಹಿತವಾದ ಮೌನವಿತ್ತು 

 ಮೌನಕ್ಕೆ ಜೊತೆಯಾಗಿ 
 ಸಖ ನೀನಿರಬೇಕಿತ್ತು 
ಹೊಳೆಯಂಚಿನ ಹಾದಿಯಲ್ಲಿ 
ಸುಮ್ಮನೆ ನಡೆವಾಗ .. 
ಏಕಾಂಗಿ ಮನ ಜೊತೆಯಲ್ಲಿ 
ನಿನ್ನ ಕಲ್ಪಿಸಲು 
ಆಡುವ ಸಾವಿರ ಮಾತುಗಳಿತ್ತು .. 

ನನ್ನೊಲವ ಮಾತುಗಳ 
ಜೊತೆಯಾಗಿ ನೀನಿರಬೇಕಿತ್ತು .. 

ಪಾದ ತೋಯಿಸಿದ ಅಲೆಗಳು 

ಮರಳಿ ಬರುವುದರೊಳಗಾಗಿ ... 
ಹಸಿ ಮರಳ ಮೇಲೆ 
ಹೆಜ್ಜೆಗುರುತು ಮೂಡಿತ್ತು  .. 

ಜೋಡಿ ಹೆಜ್ಜೆಗಳಿಗೆ 
ಜೊತೆಯಾಗಿ ನೀನಿರಬೇಕಿತ್ತು... 


25 comments:

  1. ಜೊತೆ ಸಾಗೋ ಜೀವದ ಗುಂಗಲ್ಲಿ ಚಂದ ಚಂದದ ಸಾಲುಗಳು...:)
    ಚಿತ್ರವೂ ಚಂದ...

    ReplyDelete
  2. ಮಳೆ ನೀರಿನ ಹನಿ ಹನಿಯಲ್ಲಿ ಮಿಗುವ ಸಿಗುವ ಭಾವಕ್ಕೆ ಜೊತೆ ಸಿಕ್ಕಾಗ ಹೆಜ್ಜೆ ಗುರುತು ಮೂಡಿಸುವ ಚತುರತೆ ಅಲೆಗಳ ಮೇಲೆ ಹಾಡು ಬರುವ ತಂಗಾಳಿಯಂತೆ ಇರುತ್ತದೆ.. ಸುಂದರ ಚಿತ್ರಕ್ಕೆ ಸುಂದರ ಪದಗಳ ಚೌಕಟ್ಟು. ಒಂದು ನೆರಳು ಬೆಳಕಿನ ಆಟ... ಇನ್ನೊಂದು ಮುಂಜಾನೆ ಮುಸ್ಸಂಜೆಯ ನಡುವಿನ ಭಾವುಕತೆ ...ದಿನೇಶ್ ಚಿತ್ರಕ್ಕೆ ಎಸ್ ಪಿ ಯ ಪದಗಳು ಮೊಬೈಲ್ ಗೆ ಸಿಮ್ ಹಾಕಿದಂತೆ ಸರಿಯಾದ ಜೋಡಣೆ .. ಸೂಪರ್ ಎಸ್ ಪಿ

    ReplyDelete
    Replies
    1. ಚಿತ್ರದ ಭಾವವೆಷ್ಟಿತ್ತೋ ಗೊತ್ತಿಲ್ಲಾ .. ಇಷ್ಟಿಷ್ಟೇ ನನ್ನ ಭಾವವನ್ನು ಮೂಡಿಸುವ ಪ್ರಯತ್ನ ಮಾಡಿದ್ದೇನೆ . ಇಷ್ಟಪಟ್ಟಿದ್ದಕೆ ಧನ್ಯವಾದ ,..

      Delete
  3. ಸುಂದರ ಚಿತ್ರಕ್ಕೆ ಅತಿ ಸುಂದರ ಸಾಲುಗಳು.. ಕವನ ಓದಿ ಖುಷಿಯಾಯ್ತು..

    ReplyDelete
  4. ನೂರು ಕಾಲಕ್ಕೂ ಒಪ್ಪುವ ಸಾಲುಗಳಿವು
    " ನನ್ನೊಲವ ಮಾತುಗಳ
    ಜೊತೆಯಾಗಿ ನೀನಿರಬೇಕಿತ್ತು .."

    ಒಳ್ಳೆಯ ಸುಲಲಿತ ಶೈಲಿ ಮತ್ತು ಭಾವ ಲಹರಿ.

    ReplyDelete
  5. ಅಂದವಾದ ಬರಹ......
    ನೀನಿರಬೇಕಿತ್ತು.................

    ReplyDelete
  6. ಬೇಕಿತ್ತು..
    ಇರಬೇಕಿತ್ತು...ಕಿತ್ತು ಹೋಗುವ ಮುನ್ನ...

    ಮನದೊಳಗೆ
    ಮೆಲ್ಲಗೆ
    ಇದ್ದು..
    ಕಾಡುತ್ತವೆ...
    ಇಲ್ಲವಲ್ಲ ಎನ್ನುವ ಭಾವ..

    ಅಭಿನಂದನೆಗಳು ಚಂದದ ಕವನಕ್ಕೆ..
    ಅದರ ಭಾವಕ್ಕೆ...

    ReplyDelete
    Replies
    1. ಜೊತೆಯಾಗೋ ... ಜೊತೆಗಿರೋ ಭಾವಗಳು ...

      ಚಂದದ ಕವನದ ಪ್ರತಿಕ್ರಿಯೆಗೆ ಧನ್ಯ ಪ್ರಕಾಶಣ್ಣ .....

      Delete
  7. ಎಲ್ಲಾ ಭಾವಕ್ಕೂ ... ಜೊತೆಯಾಗಿ... ಗೆಳೆಯಾ ನೀರಲೇಬೇಕು ... :) ಅಲ್ದ...? :)

    ReplyDelete
    Replies
    1. ಹೌದು ಕಾವ್ಯಾ ... ಅವನಿರಬೇಕು ....:)

      Thank you

      Delete
  8. ನೀನಿರಬೇಕಿತ್ತು ...ತುಂಬಾ ಸುಂದರವಾಗಿದೆ

    ReplyDelete
  9. ಸಂಧ್ಯೆಯಂಗಳದ ತುಂಬಾ ಅವನಿರಬೇಕು ಯಾವಾಗಲೂ ಜೊತೆಯಾಗಿ ..
    ಮನದ ಚಂದಿರನಾಗಿ :)
    ಇಷ್ಟವಾಯ್ತು ಸಂಧ್ಯಕ್ಕ :)

    ReplyDelete
    Replies
    1. ಕತ್ತಲೆಯಲ್ಲಿ ಬಿಟ್ಟು ಹೋಗುವ ಭಯ ಕಾಡುವ ಬದಲು ಆತ ಮನ ಬೆಳಗೋ ಸೂರ್ಯನಾಗಲಿ ಪುಟ್ಟಿ ...

      Thank you

      Delete
  10. Hi Sandya, i always you to see your posting's in F.B, but never got a chance to read those, but today finally made some time to read couple of those and really i was completely surprised.

    You are such a beautiful writer & i can not imagine your inner feelings through writing,really fantastic.I recently made an entry in your fan list, keep writing.

    Thank you...Pravin Bhat.

    ReplyDelete
  11. ಸಂದ್ಯಾ ಪುಟ್ಟಾ,

    ಕಾವ್ಯದ ಗಂಧ ಗಾಳಿ ನನಗಿಲ್ಲ.

    ಆದರೂ ನಮ್ಮ ಪುಟ್ಟ ಬರೆದಿದ್ದಲ್ಲವಾ..... ಓದಿದೆ

    ಚೆನ್ನಾಗಿದೆ ಮರಿ.

    ReplyDelete
    Replies
    1. Hettavarige heggana muddu anno gaade ide....:) hettammanalladiddaroo ee ammanigoo naanendare muddu allava..:)

      Thank you

      Delete
  12. >> ಊರಂಚಿನ ಹಸಿರ ಮೇರೆಯೆಲ್ಲ
    ಆಗಸದ ಕೆಂಪಿನಲ್ಲಿ ಕರಗಿ
    ಕತ್ತಲ ಮಡಿಲಲ್ಲಿ ಮಲಗುತಿರಲು
    ಬೀಸು ತಂಗಾಳಿಯಲ್ಲಿ
    ಹಿತವಾದ ಮೌನವಿತ್ತು << nice poem :-)

    ReplyDelete
  13. ಸಂಧ್ಯಕ್ಕಾ ತುಂಬಾ ಚೆನ್ನಾಗಿದ್ದು........... ಬಹಳ ದಿನಗಳ ನಂತರ ಮನಸಿಗೆ ತಂಪು ನೀಡುವ ಕವಿತೆ ಓದಿದ ಅನುಭವ......... :)

    ReplyDelete