Wednesday 16 October 2013

ತೋಚಿದ್ದು.... ಗೀಚಿದ್ದು....




ಕಣ್ಣಂಚುಗಳು 
ಮಾತನಾಡಲು ಕಲಿತಾಗಿಂದ 
ಬಚ್ಚಿಟ್ಟ ಭಾವಗಳ್ಯಾಕೋ 
ಗುಟ್ಟಾಗಿ ಉಳಿದಂತಿಲ್ಲ .. 
ನಿಂತಲ್ಲಿ ನಿಲ್ಲಲೊಲ್ಲದ 
ಮನದಲ್ಲೀಗ ಮೊದಲ ಒಲವ 
ಒಳಹರಿವ ಪುಳಕ 
******************************

ಅದೇನೋ ಬೆಳಗಿಂದಲೂ 
ನಿನ್ನ ನೆನಪು...
ಮೈ ಮನಗಳ ಸುತ್ತಿಕೊಂಡಿದೆ ...
ಆಗ ತಾನೇ ಆಕಳಿಸಿ...
ಎದ್ದ ಬೆಕ್ಕು ಹಾಲಿಗಾಗಿ ..
ಮನೆಯೊಡತಿಯ ಕಾಲು ಸುತ್ತುವಂತೆ ...
***********************************

ರಚ್ಚೆ ಹಿಡಿಯುವ ಮೊದಲೇ 
ರಮಿಸುವ ಅಮ್ಮನಂಥಹ 
ಮನಸ್ಸು ನಿನ್ನದು ... 
ಬರಿ ಪ್ರೀತಿಯೊಂದಿದ್ದರೆ 
ಪ್ರೇಮಿಗಳಿಗೂ ಅವಮಾನವಂತೆ.. 
ಮುನಿಸಿಗೂ ಅವಕಾಶವಿರಲಿ 
ಮಹರಾಯ ... !! 
*******************************

ಚೂರು ಹೃದಯ ಬಡಿತ 
ತಪ್ಪಿದ್ದರೂ ಪ್ರೀತಿಯಾಗಿಬಿಡುತ್ತಿತ್ತು 
ಎಂದವನಿಗೆ ಗೊತ್ತಾಗದಂತೆ .. 
ಹೃದಯ ಬಡಿತ ತಪ್ಪಲಿ ದೇವರೇ 
ಎಂದು ಬೇಡುವಾಗ 
ಹುಚ್ಚು ಮನಕೆ ಯಾಕೋ 
ಕಾಲುಂಗುರದ ಬಯಕೆ ...
*********************************


ನೀ ನನ್ನಲ್ಲಿ ಕನಸುಗಳ 
ಹುಟ್ಟಿಸಿರಲಿಲ್ಲ ... 
ಕನಸು ಕಟ್ಟುವ ಕಲೆ ಮಾತ್ರ 
ಹೇಳಿಕೊಟ್ಟಿದ್ದೆ .. 
ಕಟ್ಟುತ್ತಾ ಹೋದ ಕನಸೊಂದು 
ನಿನ್ನದೇ ರೂಪತಳೆಯಿತು .. 
ಕೊನೆಗೂ ನೀ ನನ್ನ 
ಕನಸಾಗಿಯೇ ಉಳಿದುಬಿಟ್ಟೆ ...
******************************

ದುಃಖದ ಕಟ್ಟೆಯೊಡೆಯುವ ಮುನ್ನ 
ಮನಸ್ಸಿಗೇಕೋ ಚಿಟ್ಟೆಯಾಗುವ 
ಹಂಬಲವಿತ್ತು .... 
ಎಳೆ ಎಳೆಯಾಗಿ ಬಣ್ಣ 
ತುಂಬಿಕೊಂಡ ಚಿಟ್ಟೆಯದೀಗ 
ದುಃಖ ಗೆದ್ದ ಸಂಭ್ರಮ .... 
*******************************

ಅವನು ಗೆದ್ದು ಸಂಭ್ರಮಿಸಿದ 
ನಗುವಿನಲ್ಲೆಲ್ಲ ... 
ಅವಳ ಸತ್ತ ಕನಸುಗಳ 
ವಿಷಾದದ ಗೆರೆಯಿತ್ತು ... 
******************************

ನಗೆಮಲ್ಲಿಗೆಯಿವಳು .. 
ಕಣ್ತುಂಬಿ ಬರುವಂತೆ ನಕ್ಕವಳು .. 
ಮನ ತುಂಬಿ ನಗಿಸುವವಳು .. 
ತನ್ನೊಳಗಿನ ನಗು 
ಕೊಂದು ಹೋದವನನ್ನೂ 
ಮುಗುಳುನಗೆಯಲ್ಲೇ 
ಕ್ಷಮಿಸಿಬಿಟ್ಟವಳು ... 
****************************

ಮತ್ತೆ ನಿನ್ನ ನೆನಪುಗಳು
ಚಿಗುರತೊಡಗಿದ್ದವು ..ಚಿವುಟಿಬಿಟ್ಟೆ .... 
ಇಷ್ಟು ದಿನ ಅವುಗಳ ಅಸ್ತಿತ್ವವೇ 
ಇಲ್ಲದಂತೆ ಬದುಕಿದವಳಿಗೆ ,
ಈಗ ಕಾಲಿಗೆ ತಡವುವಂತೆ 
ಅವು ಮತ್ತೆ ಚಿಗುರುವುದು 
ಬೇಕಾಗಿರಲಿಲ್ಲ.. 
******************************

35 comments:

  1. ಒಂದಕ್ಕಿಂತ ಒಂದು ಸುಂದರ .. ಒಲವು ಹರಿಯುತ್ತಿರಲಿ .. ಮುರಿಯುತ್ತಿರಲಿ ( ಇದು ಕವನದಲ್ಲಿ ಮಾತ್ರ ಆಗಲಿ ) :)

    ReplyDelete
    Replies
    1. ಜೋಡಣೆ ಯ ಕಾರ್ಯ ನಡೆಯುತ್ತಿರಲಿ ಅಂತ ಆಶಯ ನಾ ಪ್ರವೀಣ್ .. ??

      ಫೆವಿಕಾಲ್ ತಂದಿಟ್ಕಳವು ಹೇಳತೆ..

      ಥ್ಯಾಂಕ್ ಯು ..

      Delete
  2. very nice..............................

    ReplyDelete
  3. ತುಂಬಾ ಚೆನ್ನಾಗಿದ್ದು...... super comeback.. :) loved each and every poem.... full of life... fantastic :D :D

    ReplyDelete
  4. ಯಾವ ಹನಿಗೆ ನಾ
    ಓಟು ಹಾಕಲಿ ಗೆಳತಿ ಒಂದಕಿಂತಲೂ ಒಂದು ಮನೋ ಚಿಕಿತ್ಸಕ

    ReplyDelete
  5. ಚಂದ ಬರದ್ದೆ ಸಂಧ್ಯಾ.. ಮೊದಲ ಸಾಲೆ ಮನ ಸೆಳೆಯಿತು..:)

    ReplyDelete
  6. ಮೊದಲ ಒಲವ ಪುಳಕದಲ್ಲಿ ಶುರುವಾಗಿ, ನಗು ಕೊಂದವನನ್ನು ಮುಗುಳು ನಗುವಲ್ಲೇ ಕ್ಷಮಿಸಿ, ಕಾಲಿಗೆ ತಡವುವ ಅವನ ನೆನಪುಗಳ ಚಿಗುರನ್ನು ಚಿವುಟಿ ಹಾಕುವಲ್ಲಿಗೆ ಒಂದು ಹನಿ ಹನಿ ಪ್ರೇಮ ಕಹಾನಿಯ ಅಂತ್ಯ.. ಭಲೇ ಸಾಲುಗಳು.. ಮತ್ತಷ್ಟು ಬರಲಿ ಇಂತವು...

    ReplyDelete
    Replies

    1. ಬರೆದು ಒಂದಕ್ಕೊಂದು ಜೋಡಿಸಿ ಹಾಕುವಾಗ ಇದು ಕವನದೊಳಗೊಂದು ಕಥೆಯಾಗಬಹುದು ಎಣಿಸಿರಲಿಲ್ಲ. ನೀವು ಗುರುತಿಸಿದಿರಿ..

      ಥ್ಯಾಂಕ್ ಯು ..:)

      Delete
  7. "ಕೊನೆಗೂ ನೀ ನನ್ನ
    ಕನಸಾಗಿಯೇ ಉಳಿದುಬಿಟ್ಟೆ ..."

    Wow superb...

    ReplyDelete
  8. ಒಲವ ಒಳ ಹರಿವ ಪುಳಕ ಧಾರೆ ಸದಾ ಸುರಿಯುತಿರಲಿ...
    ಎಲ್ಲವೂ ಚೆಂದ ಚೆಂದ ಸಾಲುಗಳು...

    ReplyDelete
  9. ಸಂಧ್ಯಾ ಮಸ್ತಸಾ.... :P ಎಲ್ಲದೂ ಸೂಪರ್ ... :)
    ಚೂರು ಹೃದಯ ಬಡಿತ
    ತಪ್ಪಿದ್ದರೂ ಪ್ರೀತಿಯಾಗಿಬಿಡುತ್ತಿತ್ತು
    ಎಂದವನಿಗೆ ಗೊತ್ತಾಗದಂತೆ ..
    ಹೃದಯ ಬಡಿತ ತಪ್ಪಲಿ ದೇವರೇ
    ಎಂದು ಬೇಡುವಾಗ
    ಹುಚ್ಚು ಮನಕೆ ಯಾಕೋ
    ಕಾಲುಂಗುರದ ಬಯಕೆ ...
    ಇದು ರಾಶಿ ಇಷ್ಟಾ ಆತು... :)

    ReplyDelete
  10. ಸುಂದರ ಸಾಲುಗಳ ಒಂದಕ್ಕಿಂತ ಒಂದು ಭಿನ್ನವಿರುವ ಒಂದು ಧೀರ್ಘವಾದ ಕವನ.

    ReplyDelete
  11. ಸಂಧ್ಯಾ...
    2 ಮತ್ತು 4 ನೇ ಸಲುಗಳು ತುಂಬಾ ಇಷ್ಟವಾದವು...
    ಅದರಲ್ಲೂ...
    ಚೂರು ಹೃದಯ ಬಡಿತ
    ತಪ್ಪಿದ್ದರೂ ಪ್ರೀತಿಯಾಗಿಬಿಡುತ್ತಿತ್ತು
    ಎಂದವನಿಗೆ ಗೊತ್ತಾಗದಂತೆ ..
    ಹೃದಯ ಬಡಿತ ತಪ್ಪಲಿ ದೇವರೇ
    ಎಂದು ಬೇಡುವಾಗ
    ಹುಚ್ಚು ಮನಕೆ ಯಾಕೋ
    ಕಾಲುಂಗುರದ ಬಯಕೆ ...

    ತುಂಬಾ ಇಷ್ಟವಾಯ್ತು......

    ತುಂಬಾ ಚಂದ ಚಂದದ ಸಾಲುಗಳು....

    ReplyDelete
  12. ಚೂರು ಹೃದಯ ಬಡಿತ
    ತಪ್ಪಿದ್ದರೂ ಪ್ರೀತಿಯಾಗಿಬಿಡುತ್ತಿತ್ತು
    ಎಂದವನಿಗೆ ಗೊತ್ತಾಗದಂತೆ ..
    ಹೃದಯ ಬಡಿತ ತಪ್ಪಲಿ ದೇವರೇ
    ಎಂದು ಬೇಡುವಾಗ
    ಹುಚ್ಚು ಮನಕೆ ಯಾಕೋ
    ಕಾಲುಂಗುರದ ಬಯಕೆ ...


    ನನಗೆ ಈ ಕವನದಲ್ಲಿ ಕಡೇಯ ಸಾಲುಗಳು ಬಹಳ ಬಹಳ ಇಷ್ಟವಾದವು...ಒಂದು ಹುಡುಗಿ ಮದುವೆಯಾಗಬೇಕೆಂಬ ಬಯಕೆಯನ್ನು ಹೀಗೂ ವ್ಯಕ್ತಪಡಿಸಬಹುದು ಎಂದು ತಿಳಿಸಿದ ರೀತಿ ಅದ್ಭುತವಾದೆ..

    ReplyDelete
  13. chanda bareeedye sandyakka...........suuperb......

    ReplyDelete
  14. ಚಂದಾ ...ಚಂದ...
    ಮಾತಿಲ್ಲ ನನ್ನಲ್ಲಿ ..ಮೌನವೂ ಇಲ್ಲ...ಮನ ಮೂಕ
    ಇಷ್ಟು ಚಂದದ ಭಾವಗಳ ಕಟ್ಟಿ ,ಅದ ಹಾಗೆಯೇ ರವಾನಿಸೋದು ಸಂಧ್ಯಕ್ಕಂಗೆ ಮಾತ್ರ ಸಾಧ್ಯವೇನೋ ..
    ಇಷ್ಟವಾಯ್ತು...ಪ್ರೀತಿಯಾಯ್ತು ;)

    ReplyDelete
  15. ಬರಿ ಕಥೆಗಾರ್ತಿಯಲ್ಲ ಸುಂದರ ಕವಿಯತ್ರಿಯೂ ಹೌದು.. ಕಾಲ ಕಾಲಕ್ಕೆ ಬರುವ ಭಾವಗಳನ್ನು ಭಟ್ಟಿ ಇಳಿಸಿ ಪಾಕ ಹುಯ್ದು ಮಾಡುವ ಸುಂದರ ಬೆಲ್ಲದ ಅಚ್ಚೆ ಈ ಕವಿತೆಗಳು ಸೂಪರ್ ಎಸ ಪಿ

    ReplyDelete
  16. ಚೆಂದಕ್ಕಿಂತ ಚೆಂದ ನಿಮ್ಮ ಹನಿಗಳು..!!

    ReplyDelete