Monday 28 July 2014

ನಿನಗೊಂದು ಹ್ಯಾಪಿ ಬರ್ತ್ ಡೇ




ನಿನ್ನೊಡನೆ ನೇರವಾಗಿ ಆಡದ , ಆಡಲಾಗದ ಮಾತುಗಳಿವೆ . 
ಎದುರು ನಿಂತು  ಆಡದ ಜಗಳಗಳಿವೆ . 
ಆದರೆ ಇದೆಲ್ಲಕ್ಕಿಂತ ಮಿಗಿಲಾಗಿ ನೀ ಕೊಟ್ಟ ಸಂಸ್ಕಾರ ದೊಡ್ಡದಿದೆ .. 

ಬಾಸುಂಡೆ ಬರುವಂತೆ ನಿನ್ನಿಂದ ಹೊಡೆತ ತಿಂದಿದ್ದಿದೆ . 
ದೊಡ್ದವರಾಗುವವರೆಗೂ ನಿನ್ನಿಂದ ಬೈಸಿಕೊಂಡಿದ್ದಿದೆ . 
ಆದರೆ ಅದೆಲ್ಲಕ್ಕಿಂತ ಮಿಗಿಲಾಗಿ ಅಂದು ನೀ ಕೊಟ್ಟ ಶಿಕ್ಷೆ ಇಂದು ಶಿಕ್ಷಣವಾಗಿದೆ ... 

ನೀ ತೆಗೆದುಕೊಂಡ ಕೆಲವು ಕಠಿಣ ನಿರ್ಧಾರಗಳಿಂದ ಚಿಕ್ಕ  ಬೇಸರವಾಗಿದೆ .
ಹೊಡೆತ ತಿಂದ ಮೇಲೂ ಅಳಲು ಬಿಡದ ನಿನ್ನ ಮೇಲೆ ಸಣ್ಣ ದ್ವೇಷವಿದೆ . 
ಆದರೆ ಇದೆಲ್ಲಕ್ಕೂ ಮಿಗಿಲಾಗಿ ನೀ ಕೊಟ್ಟ ಮತ್ತೂ ನಿನಗೆ ನಾವು ಕೊಡಲೇಬೇಕಾದ  ಹಿಮಾಲಯದಷ್ಟು ಪ್ರೀತಿಯಿದೆ .. 

ಇವತ್ತು ಅದೇ ಪ್ರೀತಿಯಿಂದ ನಿನಗೊಂದು ಹ್ಯಾಪಿ ಬರ್ತ್ ಡೇ ಅಪ್ಪಾ ... :)

9 comments:

  1. ತಾವೇ ಭಾಗ್ಯವಂತರು ಸಂಧ್ಯಾ.
    ನಾನು ಅಪ್ಪನನ್ನು ಚಿಕ್ಕ ವಯಸ್ಸಿನಲ್ಲೇ ಕಳೆದುಕೊಂಡ ದುರ್ಧೈವಿ.

    ತಮ್ಮ ತಂದೆಯವರಿಗೆ ಭಗವಂತನು ಸಕಲ ಸುಖಃಗಳನು ಕೊಡಲಿ ಅನವರತ.

    ReplyDelete
  2. ಗಂಧ ಮರದಲ್ಲಿದ್ದಾಗ ಘಮಗುಟ್ಟುವುದಿಲ್ಲ ... ಆದರೆ ಸಾಣೆ ಕಲ್ಲಿನ ಜೊತೆ ಗುದ್ದಾಡಿದಾಗ..ಅಪ್ಪ ಎನ್ನುವ ಒಂದು ಪಾತ್ರ ನಮ್ಮ ಜೀವನವನ್ನು ರೂಪಿಸುವುದರಲ್ಲಿ ಬಹಳ ಹಿರಿಯ ಪಾತ್ರ ತೋರುತ್ತದೆ.

    ನಮ್ಮ ಜೀವನವನ್ನು ಘಮಗುಟ್ಟಿಸಲು ತಮ್ಮ ದೇಹವನ್ನು ಸಾಣೆ ಕಲ್ಲಿನಲ್ಲಿ ತೇದು ಶ್ರಮ ಪಡುತ್ತಾರೆ. ಆ ಶ್ರಮದ ಫಲ ನೋವಾದರೂ ಪರಿಮಳ ಬೀರುವ ನಮ್ಮ ಸುಂದರ ಜೀವನ..

    ಆ ಜೀವನದ ಶಿಲ್ಪಿಗೆ ನೀ ಕೋರುವ ಜನುಮದ ದಿನದ ಶುಭಾಷಯ ಸೊಗಸಾಗಿದೆ..

    ಸೂಪರ್ ಎಸ್ ಪಿ.. ನನ್ನ ಕನ್ನಡಿಯನ್ನು ಕೊಟ್ಟ ನಿನ್ನ ಜನುಮದಾತರಿಗೆ ನನ್ನ ಕಡೆಯಿಂದಲೂ ಶುಭಾಶಯಗಳು

    ReplyDelete
  3. Beautiful and honest tribute.

    ReplyDelete
  4. ನನ್ನದೂ ಶುಭಾಯವಿದೆ ಹೇಳಿಬಿಡು.....
    ಚಂದ......

    ReplyDelete
  5. ಚೆಂದಿದ್ದು ಸಂದ್ಯಕ್ಕ.. ನನ್ನ ಕಡೆಯಿಂದಲೂ ವಿಷ್ ಹೇಳ್ಬಿಡು..

    ReplyDelete
  6. ನೀವೇ ಪುಣ್ಯವಂತರು ರೀ,

    ಯಾಕೆ ಎಂದರೇ ನಾ ಸಣ್ಣ ವಯಸ್ಸಿನಲೇ ತಂದೆ ತಾಯಿ ಕಳೆದುಕೊಂಡೆ.,,

    But ಐ ಲವ್ ಯು ಸೋ ಮಚ್ ...

    ReplyDelete