Friday, 4 July 2014

ಕ್ರಶ್ ...:)ಆಗ ತಾನೆ ಬಟ್ಟೆ ಒಗೆದು ಬಂದು ಗೋಡೆಗೆ ಆನಿಕೊಂಡು ಕುಳಿತಿದ್ದಳು ಸ್ಮಿತಾ. ಕೈ ಲ್ಲಿ ಮೊಬೈಲ್ ಇತ್ತಾದರೂ ಎನೂ ಮಾಡದೆ ಕುಳಿತಿದ್ದಳು. ತನ್ನನ್ನು ಒಮ್ಮೆಯಾದರೂ ನೋಡಬಹುದೇನೋ ಎನ್ನುತ್ತಲೆ ಮೊಬೈಲ್ ಎರಡು ಬಾರಿ ಕೂಗಿತ್ತಾದರೂ ಅದರ ಕಡೆಗೆ ಲಕ್ಷ್ಯವಿರಲಿಲ್ಲ ಇವಳಿಗೆ. ಸ್ಮಿತಾ ಹೆಸರಿಗೆ ತಕ್ಕಂತೆ ನಗುವ ನಗಿಸುವ ಹುಡುಗಿ. ಅವಳಿಗಿಂತ ಮುಂಚೆ ನಗು ಮನೆಯೊಳಗೆ ಕಾಲಿಟ್ಟಿರುತ್ತದೆ. ಅಂಥ ಹುಡುಗಿಯ ಗಂಭೀರವದನ ಯಾಕೊ ಆಕೆಯ ಗೆಳತಿಯರಿಗೆ ಇಷ್ಟವಾಗಲಿಲ್ಲ. ಕೊರಳ ತಬ್ಬಿ ಧನ್ಯಾ ಕೇಳಿದಳು, " ಏನಾಯ್ತೆ ಪಾಪಚ್ಚೀ?"

" ಬಟ್ಟೆ ಒಣಹಾಕಿ ಬಂದ ಐದೇ ನಿಮಿಷಕ್ಕೆ ಮಳೆ ಬಂತಲ್ಲ , ಅದಕ್ಕೆ ಅಮ್ಮಾವ್ರಿಗೆ ಹೊಟ್ಟೆ ಉರಿತಿರಬೇಕು" ಎಂದು ಸಾಂಬಾರ್ ಗೆ ಉಪ್ಪು ಹಾಕುತ್ತಾ ಇಲ್ಲೊಂಚೂರು ಉಪ್ಪು ಸುರಿದಳು ಚಂದು.

ಒಂದು ನಿಟ್ಟುಸಿರಿನೊಂದಿಗೆ ಸ್ಮಿತಾಳ ಬಾಯಿಂದ ಬಂದ ಮಾತು "ಪವನ್ ನ ನೋಡಿದೆ ಕಣ್ರೆ , ಅವನ ವೈಫ್ ಜೊತೆ" ಇಷ್ಟೇ ಅಲ್ಲೊಂದು ಮೌನವೂ ಕೂಡಿಕೊಂಡು ಬಿಟ್ಟಿತ್ತು ಆ ಮೂವರ ನಡುವೆ.

ಈಗೊಂದು ಫ್ಲಾಶ್ ಬ್ಯಾಕ್ ಬೇಕಲ್ಲ.. ತಗೋಳಿ ..

ಈ ಮೂವರು ಹುಡುಗಿಯರು ಒಂದಾತ್ಮ ಮೂರು ಜೀವಾ ಅಂತ ಹೇಳದಿದ್ರೂ ಹಂಗೆ ಇದಾರೆ. ಒಂದೊಳ್ಳೆ residencial ಏರಿಯಾದಲ್ಲಿ ಒಂದು ಬಿಲ್ಡಿಂಗ್ ನ ನಾಲ್ಕನೇ ಫ್ಲೋರ್ ನಲ್ಲಿ ಇವರದೊಂದು ರೂಮು. ಹಗಲೆಲ್ಲ ಕೆಲಸ, ರಾತ್ರಿ ಸ್ವಲ್ಪ ಮಸ್ತಿ , ಕುಸ್ತಿ, ಗಲಾಟೆ ಜೀವನ ನಮ್ಮ ಹೆಣ್ಮಕ್ಕಳದ್ದು. ಅವರೊದ್ದೊಂದು ಪ್ರಪಂಚ, ಅಲ್ಲಿ ಯಾರಿಗೂ ಪ್ರವೇಶವಿಲ್ಲ. ಅಲ್ಲಾಗಿದ್ದು ಹೊರಗಡೆ ಹೋಗಲ್ಲ.. :) ಸೇರಿಯಸ್ನೆಸ್ ಅನ್ನೋದನ್ನ ಜೀವನದಲ್ಲಿ ಎಲ್ಲಿ ಬೇಕೋ ಅಲ್ಲೊಂದೆ ಉಪಯೋಗಿಸಿಕೊಂಡು, ಉಳಿದ ಟೈಮ್ ಲ್ಲಿ ಜೀವನಕ್ಕೆ ನಗೋದು ಕಲಿಸುತ್ತಾ ಬದುಕುವ ಸಿಂಪಲ್ ಲೈಫು ನಮ್ಮ ಹುಡುಗಿಯರದು. ಈ ಕ್ರಶ್ ಅನ್ನೊದು ಹೆಂಗೆ ಬೇಕಾದ್ರು ಆಗಬಹುದು. ಅದು ರೂಪದ ಮೇಲೆ ಮಾತ್ರ ಡಿಪೆಂಡ್ ಅಲ್ಲ ಎನ್ನುವುದು ಇವರ ವಾದ. ಈಗ ಧನ್ಯಾಗೆ ಅವಳ ಬಾಸ್ ಮೇಲೆ ಫ಼ುಲ್ ಲವ್ ಇದೆ. ಹಂಗಂತ ಅವನೇನು ಸುರಸುಂದರಾಂಗನೂ ಅಲ್ಲ. ಅವನಿಗೆ ಆಗಲೇ ಮೂವತ್ತರ ಮೇಲಾಗಿದೆ ವಯಸ್ಸು. ಅದು ಅವರ ನಾಲೇಡ್ಜ್ ಬಗ್ಗೆ ಅವಳಿಗಾದ ಕ್ರಶ್ಚ್ಯ್. ಹಾಗೆ ನಮ್ಮ ಚಂದನಾಗೂ ಪಕ್ಕದ ಸೆಕೆಂಡ್ ಫ಼್ಲೋರ್ ನ ಶ್ಯಾಮ್ ಕಂಡ್ರೆ ಇಷ್ಟ.ಹಂಗಂತ ಅವ್ಳು ಏನು ರೂಪಕ್ಕೆ ಮರುಳಾದವಳಲ್ಲ. ಅದು ಅವನ ಬಳಿ ಇರುವ ಯುನಿಕಾರ್ನ್ ಬೈಕ್ ಮತ್ತು ಸ್ವಲ್ಪ ಮಟ್ಟಿನ ಅವನ ಸ್ಟೈಲ್ ನಿಂದ ಬಂದಿದ್ದು. ಹಾಗೆ ಅವಳಿಗೆ ಆ ಕಾರ್ನರ್ ಮನೆಯ ತ್ರಿ-ಫ಼ೊರ್ಥ್ ಕೂಡಾ ಕೂಡಾ ಇಷ್ಟ. ಈ ತ್ರಿ-ಫೋರ್ಥ್ ಅಂದ್ರೆ ಆತನ ಹೆಸರು ಗೊತ್ತಿಲ್ಲ. ಅವನನ್ನು ನೋಡಿದ್ದೆಲ್ಲ ತ್ರಿ-ಫೋರ್ಥ್ ನಲ್ಲೆ. ಹಂಗಾಗಿ ಆ ಹೆಸರು. ಅವನು ಯಾಕಿಷ್ಟ ಅಂದ್ರೆ ಅದಕ್ಕೆ ಕಾರಣ ಅವನ ಬಳಿ ಇರೊ ಒಂದು ದೈತ್ಯಾಕಾರದ ಲ್ಯಾಬ್ರಡಾರ್ ನಾಯಿ. ಇನ್ನು ನಮ್ಮ ಕಥಾನಾಯಕಿ ವಿಶ್ಯಕ್ಕೆ ಬಂದ್ರೆ ಅವಳಿಗೂ ಎದುರು ಮನೆಯ ನಡೆದಾಡುವ ಲೈಬ್ರೆರಿ ಚಂದನ್, (ಯಾವಾಗಲೂ ಏನಾದರೂ ಓದುತ್ತಿರುತ್ತಾನೆಂದು ಅವನಿಗೆ ಆ ಹೆಸರು ಎಂದು ಬಿಡಿಸಿ ಹೇಳಬೇಕಾಗಿಲ್ಲ ತಾನೆ,) ಹಾಗೆ ಕೆಳಗಡೆಯ ಅಂಗಡಿ ಹುಡುಗ ಕಿರಣ್ ಇವರೆಲ್ಲ ಮೇಲೂ ಕ್ರಶ್ ಇದ್ದೇ ಇದೆ. ಇಲ್ಲಿ ಒಬ್ಬರಿಗೆ ಒಬ್ಬನ ಮೇಲೆ ಮಾತ್ರ ಕ್ರಶ್ ಆಗಬೇಕೆಂಬ ನಿಯಮವಿಲ್ಲ. ಇವರ ಪ್ರಕಾರ ಕ್ರಶ್ ಎಷ್ಟು ಜನರ ಮೇಲೂ ಯಾವಾಗ ಬೇಕಾದರೂ ಆಗಬಹುದು. ಮತ್ತೂ ಒಬ್ಬನ ಮೇಲೆ ಇಬ್ಬರಿಗೂ ಕ್ರಶ್ ಆಗಬಹುದು..!! ಅದಕ್ಕಾಗಿ ಜಗಳ ಕಾದಾಟಗಳೇಲ್ಲ ಇಲ್ಲ. ಈ ಎಲ್ಲ ವಿಷಯಗಳು ಅವರ ಹರಟೆಕಟ್ಟೆ ಹಾಟ್ ಸ್ಪಾಟ್ ಟೆರ್ರೆಸ್ ಮೇಲೆ ನಿತ್ಯ ಚರ್ಚಿತ.

ಹಾಗಂತ ನಮ್ಮ ಹುಡುಗಿರೇನು ಚೆಲ್ಲು ಚೆಲ್ಲು ಅಂದ್ಕೊಂಡ್ರೆ ತಪ್ಪಾಗಿ ಬಿಡುತ್ತೆ. ತುಂಬಾ ಡೀಸೆಂಟ್ ಹುಡುಗಿರು. ಊರಿಗೆ ಇವರಷ್ಟೇ ಪದ್ಮಾವತಿಯರಲ್ಲದಿದ್ದರೂ ಇವರನ್ನು ಮಾತನಾಡಿಸಲು ಪ್ರಯತ್ನ ಪಟ್ಟು ಸೋತವರ ಲಿಸ್ಟ್ ಉದ್ದದ್ದಿದೆ. ಮೇಲೆ ಹೇಳಿದ ಇವರೆಲ್ಲರ ಕ್ರಶ್ ಗಳ ಬಳಿಯೂ ಮಾತನಾಡಿದವರಲ್ಲ ಇವರುಗಳು. ಪಕ್ಕದ ಟೆರ್ರೆಸ್ ನ ಹುಡುಗರು ಏನಾದರೂ ಕೇಳಿದರೂ ಕೂಡಾ ಕೇಳಿದ್ದಷ್ಟಕ್ಕೆ ಬಿಗಿಯಾದ ಉತ್ತರದೊಂದಿಗೆ ಮಾತು ಮುಕ್ತಾಯ.

ಇಂತಿಪ್ಪ ನಮ್ಮ ಹುಡುಗಿಯರಿಗೊಬ್ಬ ಮಿಸ್ಟರ್ ಪರ್ಫೆಕ್ಟ್  ಇದ್ದ. ಆತನೆಂದರೆ ಮೂವರಿಗೂ ಇಷ್ಟ. ಅವನೆಂದರೆ ಮೂವರಿಗೂ "ನಮ್ಮೆಜಮಾನ್ರು".. :) ಆ ಹುಡುಗನ ಕೂಲ್ ಕೂಲ್ ಕಣ್ಣುಗಳು, ಆತನ ಬ್ಲ್ಯಾಕ್ ಹೊಂಡಾ ಕಾರು, ಬ್ರೌನ್ ಸ್ಪಾನಿಯಲ್ ಜಾತಿಯ ನಾಯಿ ಇವೆಲ್ಲದರಿಂದ ಅವನು ನಮ್ಮ ಹುಡುಗಿಯರಿಗೆ ಹಾಟ್ ಕೇಕ್. ಟೆರ್ರೆಸ್ ನ ಹರಟೆಯಲ್ಲಿ ಅವನನ್ನು ನೋಡುವುದು ಒಂದು ಭಾಗ. ಅದೊಂದು ದಿನ ಏದುಸಿರು ಬಿಡುತ್ತಾ ಬಂದ ಚಂದುವಿಗೆ ಎನಾಯ್ತೊ ಎಂದು ಉಳಿದಿಬ್ಬರು ತಲೆ ಕೆಡಿಸಿಕೊಂಡರೆ ಇವಳು ನಿಧಾನಕ್ಕೆ ನೀರು ಕುಡಿದು "ಅವನ ಹೆಸರು ಪವನ್ ಕಣ್ರಲೇ "ಎಂದಾಗ, ಎಲ್ಲರೂ ತಮ್ಮ ಹೆಸರುಗಳ ಮುಂದೆ ಪವನ್ ಎಂದು ಬರೆದು ಖುಷಿ ಪಟ್ಟಿದ್ದೆ ಪಟ್ಟಿದ್ದು. ಅವನ ಕಂಡರೆ ಆ ದಿನವೇನೊ ಖುಷಿ.. ಅವನು ಬೆಳಿಗ್ಗೆ ಆಫೀಸ್ ಹೊರಟರೆ ನಮ್ಮ ಹುಡುಗಿಯರೆಲ್ಲ ಒಂದೊಂದು ನೆಪದಲ್ಲಿ ಹೊರ ಹೋಗಿ ಅವನ ನೋಡಿ ಕೂಲ್ ಕೂಲ್ ಅನ್ನುತ್ತಾ ಬರುವುದು ದಿನಚರಿ. ಇನ್ನು ರಾತ್ರಿಯ ನಾಯಿ ಜೊತೆಯ ವಾಕಿಂಗ್ ಅಂತೂ ಅವನಿಗಿಂತ ಶ್ರದ್ದೆಯಿಂದ ಕಾಯುವವರು ಈ ಹುಡುಗಿಯರು. ಅವನೇನು ವಿಶ್ವಾಮಿತ್ರನೇನಲ್ಲ, ನಮ್ಮ ಹುಡುಗಿಯರು ನೋಡುವುದು ಅವನಿಗೂ ಗೊತ್ತು. ಅವನದು ಇವರ ಕಡೆಗೊಂದು ಕಳ್ಳ ನೋಟ ಇರುತ್ತಿತ್ತು. ಆದರೆ ನಗು ಮಾತ್ರ ಅದ್ಯಾಕೋ ಸ್ಮಿತಾಳಿಗೆ ಮಾತ್ರ ಮೀಸಲು. ಅವನು ಸ್ಮೈಲ್ ಕೊಟ್ಟಾ ಕಣ್ರೆ ಎನ್ನುತ್ತಾ ಸ್ಮಿತಾ ಬಂದರೆ ಉಳಿದಿಬ್ಬರಿಗೆ ಸ್ವಲ್ಪ ಹೊಟ್ಟೆ ಉರಿಯುತ್ತಿತ್ತು. ಹಿಂಗಿತ್ತು ಲೈಫು ಅಂದ್ಕೊಳೋ ಹೊತ್ತಿಗೆ ಒಂದು ದಿನ ಹಠಾತ್ತಾಗಿ ಹುಡುಗ ಗಾಯಬ್..!!! ಆಗಿನ ವಿರಹ ವೇದನೆಯನ್ನು ವಿವರಿಸಲು ಪದಗಳಿಲ್ಲ ಬಿಡಿ. ಹಂಗಾಗಿ ಆ ಪ್ರಯತ್ನಕ್ಕೆ ಹೋಗಲ್ಲ. ಇನ್ನು ತುಂಬಾ ಕ್ರಶ್ ಗಳಿದ್ದರೂ, ಹೊಸಬರೂ add ಆಗುತ್ತಿದ್ದರೂ ಪವನ್ ಮರೆಯಾಗಿರಲಿಲ್ಲ. ಅವನಿಗೊಂದು ಜಾಗ ಹಾರ್ಟ್ ಲ್ಲಿ, ಅವನಿಗಾಗಿ ಸ್ವಲ್ಪ ಟೈಮ್ ಹರಟೆಯಲ್ಲಿ ಇದ್ದೇ ಇತ್ತು. ಇಂತಿರುವಾಗ ಸುಮಾರು ಮೂರು ತಿಂಗಳ ನಂತರ ಅವನ ಮನೆ ಮುಂದೆ ಶಾಮಿಯಾನ , ತೋರಣಗಳನ್ನೂ ನೋಡಿದ ಹುಡುಗೀರಿಗೆ ಅಸೆ ಚಿಗುರಿದ್ದು ಪವನ್ ನೋಡಬಹುದೆಂದು. ಟೆರ್ರೆಸ್ ಮೇಲೆ ಉಟ ಮಾಡಿ ಶಬರಿಯರಂತೆ ಕಾದ ಇವರಿಗೆ ಶ್ರೀರಾಮ ದರ್ಶನವಾದದ್ದು ಮದುಮಗನಾಗಿ, ಸಾಕ್ಷಾತ್ ಸೀತಾಮಾತೆಯೊಂದಿಗೆ. ಅವನ ಮದುವೆ ಇವರೆಲ್ಲರಿಗೂ ಹೃದಯ ವಿದ್ರಾವಕ ಘಟನೆಯಂತೆ ಭಾಸವಾಗಿತ್ತು. ಅಂದಿನ ಹರಟೆ ಕಟ್ಟೆಯೂ ಮೌನವಾಗಿತ್ತು.

ನವ್ ಕಮ್ ಟು ದಿ ಪಾಯಿಂಟ್, ಅದು ನಡೆದು ಒಂದು ವಾರದ ಮೇಲೆ ಸ್ಮಿತಾ ನೋಡಿದ್ದು ಅದೇ ಪವನ್ ನ ಅವನ ಪತ್ನಿಯೊಂದಿಗೆ. ಹಾಗಾಗಿಯೇ ಮೌನ ಗೌರಿಯಂತೆ ಕುಳಿತಿದ್ದು. ಇದೇ ವಿಷ್ಯ ಉಳಿದವರಿಗೆ ಇಷ್ಟವಾಗಿರಲಿಲ್ಲ.

ಅದಕ್ಕೆ ಧನ್ಯಾ "ನೋಡೆ ಈ ಕ್ರಶ್ ನೆಲ್ಲ ಸಿರಿಯಸ್ ಆಗಿ ತಗೊಂಡು, ಮುಂದೆ ಲವ್ವು ಪವ್ವು ಅಂದ್ಕೊಂಡ್ರೆ ಜೀವನ ಹಾಳಾಗಿಹೋಗುತ್ತೆ. ನಡಿ ಪಕ್ಕದ ಗ್ರೀನ್ ಬಿಲ್ಡಿಂಗ್ ಗೆ ಹೊಸದಾಗಿ ಯಾರೋ ಬಾಡಿಗೆಗೆ ಬಂದಿದ್ದಾರಂತೆ ಚಂದು ಹೇಳ್ತಿದ್ಲು, ನೋಡ್ಕೊಂಡು ವಯಸ್ಸಿಗೊಂಚೂರು ಮರ್ಯಾದಿ ಇಡೋಣ "ಎನ್ನುತ್ತಾ ಟೆರ್ರೆಸ್ ಗೆ ಎಳೆದುಕೊಂಡು ಬಂದರೂ ಸ್ಮಿತಾಳ ಮನಸ್ಸ್ಯಾಕೋ ಹಿಂಬಾಗಿಲ ಕಿಟಕಿಯ ಕಡೆಗೇ ಎಳೆಯುತ್ತಿತ್ತು .

17 comments:

 1. ಸಂಧ್ಯಾ ಸುಂದರಿ ಪುನರಾಗಮನಂ ಬ್ಲಾಗಂಗಣಂ ಅಮಿತಾನಂದ ಮಯಂ||

  ಹರೆಯದ ಕ್ರಶ್ಶುಗಳು ಬದುಕಿನ ಪೂರ ಕಾಡುವ ನೋವು ಲೇಪಿತ ಪುಳಕಗಳು.
  ಇಲ್ಲಿ ಕಥನ ಅದು ಕಟ್ಟಿಕೊಟ್ಟ ರೀತಿಯಲ್ಲಿ ಪೂರ್ಣ ಗೆದ್ದಿತು.

  ReplyDelete
 2. ಎಲ್ಲರ ಬದುಕಿನಲ್ಲೂ ಒಂದು ಸಲವಾದರೂ ಆಗುವ ಚಂದದ ಭಾವ.. ಅದನ್ನು ಅಕ್ಷರಗಳಲ್ಲಿ ಚಂದಕ್ಕೆ ಪೋಣಿಸಿದ್ದಿರ ಮಜವೆನಿಸಿತು ಒಂಥರಾ... ಬರಹದ ಮೇಲೆ ಪುಟ್ಟ krush ಆಯಿತೇನೋ...

  ReplyDelete
 3. ಸಂಧ್ಯಾ...
  ಕ್ರಶ್ ಕುರಿತಾದ ಚಂದದ ಲೇಖನ...

  ReplyDelete
 4. ಸುಂದರ ಬರಹ ... ಹಳೆಯ ಎಲ್ಲಾ ಕ್ರಶ್ ಗಳ ನೆನಪಾಯ್ತು ಒಮ್ಮೆ ....! :D ಬದರಿ ಸರ್ ಹೇಳಿದಂಗೆ ಏನೋ ಒಂಥರಾ ನೋವಿನ ಪುಳಕ ..! ಹಾಗೆ ತುಟಿಯಂಚಿನಲ್ಲೊಂದು ನಗು :)

  ReplyDelete
 5. ಸಂಧ್ಯೆಯಂಗಳಿದಿ ಮತ್ತೆ ಹರಡಿದೆ ಹುಣ್ಣಿಮೆ ಹಾಲ್ಬೆಳದಿಂಗಳು...ಹೊಸ ಗರಿಗೆದರಿದ ಕುಹೂ – ಮಾಮರದ ಚಿಗುರೊಡೆದ ಕೊಂಬೆಯ ಮೇಲಿಂದ ಕೂಗಿದಂತೆ ಕೋಗಿಲೆ ಇಂಪಾಗಿ.....ಆಹಾ...ಹೀಗೂ ಭಾವಗಳು. ಸಂಧ್ಯಾ ಪುಟ್ಟಾ (ಸಾರಿ ಹಾಗೇ ಕರಿಯೋದು ನಾನು) ಚನ್ನಾಗಿದೆ ಕಥೆ

  ReplyDelete
 6. ನಿಶ್ಚಯವಾದ ಬದುಕಿನ ಹಾದಿಯಲ್ಲಿ ಸಾಗಲು ಸಜ್ಜಾಗಿ ನಿಂತಾಗಿಂದ ರಂಗವಲ್ಲಿ ಕಾಣದಿದ್ದ ಅಂಗಳ ಮತ್ತೆ ನಳನಳಿಸುತ್ತಿದೆ.. ಮತ್ತೆ ಶುರುವಾದ ಅಂಗಳಕ್ಕೆ ಕೊಟ್ಟದ್ದು ಸರಿಯಾದ ಲೇಖನ. ಮೊದಲಿಗೆ ವಿವಾಹಜೀವನಕ್ಕೆ ಶುಭಾಶಯಗಳು..

  ದ್ರೋಣಚಾರ್ಯರು ಏಕಲವ್ಯನ ಕ್ಷಮೆ ಕೇಳಿದರೂ.. ಕಳೆದು ಹೋಗಿದ್ದು ಬರಿ ಏಕಲವ್ಯನ ಹೆಬ್ಬೆರಳು.. ಆದರೆ ಗೆದ್ದೇ ಗೆಲ್ಲುತೇನೆ ಎಂಬ ಛಲವಲ್ಲ!!!

  ಹಾಗೆಯೇ ಕೃಶ್ ಬರುತ್ತೆ ಹೋಗುತ್ತೆ.. ಬಂದ ಕೃಶ್ ನಂತರ ಆ ಕೃಶ್ ಮತ್ತೆ ಕೃಶ್..

  ಲೇಖನವನ್ನು ಹೇಳಿದ ಧಾಟಿ, ಆ ಯೌವನದ ಆ ಹಂತದ ಉತ್ಸುಕ ಪರಿ, ಅದನ್ನು ಹೇಳಿರುವ ಶೈಲಿ ನಿನ್ನ ಬರಹದಲ್ಲಿ ಸುಂದರವಾಗಿ ಮೂಡಿ ಬಂದಿದೆ..

  ಸೂಪರ್ ಲೇಖನ ಎಸ್ ಪಿ.. ಇಷ್ಟವಾಯಿತು... ಸಂಧ್ಯಾ ರಾಗ ಚಿತ್ರದ ಈ ಪರಿಯ ಸೊಬಗೂ ಬೇರೆ ಯಾವ ದೇವರಲೂ ಕಾಣೆ ಎಂದು ಹಾಡಬೇಕಿನಿಸುತ್ತದೆ

  ಅಂಗಳಕ್ಕೆ ಸುಸ್ವಾಗತ

  ReplyDelete
 7. ಕ್ರಶ್ಶಾಯಣ! ಚಂದ ಬರ್ದಿದ್ದೀರಿ ಸಂಧ್ಯಾ, ಹರಯದ ಫುಳಕಗಳಿಗೆ ಸುಂದರ ಅಂಗಿ ತೊಡಿಸಿದ್ದೀರಿ ಮತ್ತು ಬಣ್ಣ ತುಂಬಿದ್ದೀರಿ :-)

  - ಪ್ರಸಾದ್.ಡಿ.ವಿ.

  ReplyDelete
 8. nimma katha nayakiyara kathe odi nimma mele krush agalilla....namma punya...

  ReplyDelete
 9. ಕಥೆ ಚೆನಾಗಿದೆ ನಿರೂಪಣೆ ಎಲ್ಲೋ ಸಡಿಲ ಅನ್ನಿಸಿಬಿಡುತ್ತಿದೆ, ಇನ್ನೂ ಚೂರು ಬಿಗುವಾಗಿರಬೇಕಿತ್ತೇನೋ ಅನ್ನುವುದು ನನ್ನ ಅನಿಸಿಕೆ....

  ReplyDelete
 10. Nice explanation. Good one.

  ReplyDelete
 11. " ಅವನಿಗೊಂದು ಜಾಗ ಹಾರ್ಟ್ ಲ್ಲಿ, ಅವನಿಗಾಗಿ ಸ್ವಲ್ಪ ಟೈಮ್ ಹರಟೆಯಲ್ಲಿ ಇದ್ದೇ ಇತ್ತು. " ಕ್ರಷ್ ಗೆ ಇದಕ್ಕಿಂತ ಒಳ್ಳೆಯ Definition ಇರಲಿಕ್ಕಿಲ್ಲ ಬಿಡಿ. ಕಥೆ; ಕೊನೆ; ಅಥವಾ ಸಸ್ಪೆನ್ಸ್ ಇಲ್ಲದೇನೂ, ಚಂದಗೆ ಓದಿಸಿಕೊಳ್ಳುವ ಮುದ್ದಾದ ಬರಹ :)

  ReplyDelete
 12. ಎಲ್ಲಾ ಭಾವಗಳನ್ನೂ ಚಂದವಾಗೆ ಕಟ್ಟಿಬಿಡ್ತೀಯಲ್ಲೇ ಅಕ್ಕಯ್ಯಾ...
  ಕಳೆದು ಹೋದ,ಮರೆತು ಹೋದ ,ಎದುರಿಗೇ ಓಡಾಡೋ ಅದೆಷ್ಟೋ ಕ್ರಶ್ ಗಳ ನೆನಪಾಯ್ತು ನೋಡು ಈ ಭಾವವ ಓದೋವಾಗ.
  ಇಷ್ಟವಾಯ್ತು

  ReplyDelete