Tuesday, 24 January 2012

ನೀನ್ಯಾರೋ....?


      ನಸುಕಿನಲ್ಲೇ ಮನದ ಮೂಲೆಯಲ್ಲಿ 
       ಅವಿರ್ಭವಿಸಿ ಇಡಿ ದಿನದ ಕೆಲಸಗಳಲ್ಲಿ
       ನೆನಪಾಗಿ ಸುಳಿದು ಬೆರಳ ಅಂಚನ್ನು 
     ತಾಕುವವ ನೀನ್ಯಾರೋ...?

     ಮುಸ್ಸಂಜೆಯ ಏಕಾಂತದಲ್ಲಿ 
     ತಂಗಾಳಿಯೊಂದಿಗೆ ಮುಂಗುರುಳುಗಳು 
     ರಚಿಸುವ ಚಿತ್ತಾರಗಳಲ್ಲಿ ಚಿತ್ರವಾಗಿ 
     ಅರಳುವವ ನೀನ್ಯಾರೋ....?

    ಸುಂದರ ರಾತ್ರಿಗಳಲ್ಲಿ 
    ಸ್ವಪ್ನಕುಂಚವನಿಡಿದು  ಮನದ ಭಿತ್ತಿಗಳಲ್ಲಿ 
    ಚಿತ್ರಗಳ ಮೂಡಿಸುವ 
    ಕಲಾವಿದ ನೀನ್ಯಾರೋ..?    
 

2 comments:

  1. ಕಲ್ಪನೆಯಲ್ಲಿ ಮೂಡಿದ ಪ್ರತಿ ಪದಗಳು ಒಂದು ಕಾವ್ಯವೇ..ಅಂತಹ ಒಂದು ಕಾವ್ಯದ ನೆರಳು ನಿನ್ನ ಅಂಗಳದಲ್ಲಿ ಮೂಡಿರುವುದು ಸುಂದರವಾಗಿದೆ..ಅಭಿನಂದನೆಗಳು ಎಸ್.ಪಿ.

    ReplyDelete