Monday, 17 June 2013

ಯಾಕಾಯಿತು ನಿನ್ನ ಪರಿಚಯ ... ಅರೆಕಾಲದ ಖುಷಿಗಾಗಿ ...ಯಾಕಾಯಿತು ನಿನ್ನ ಪರಿಚಯ ... ಅರೆಕಾಲದ ಖುಷಿಗಾಗಿ ... 

ನಿನ್ನ ಅಸ್ತಿತ್ವವೇ ಗೊತ್ತಿಲ್ಲದಾಗ ... 

ನನ್ನದೇ ಆದ ಪ್ರಪಂಚ . ತುಂಬಿ ತುಳುಕವ ಖುಷಿ. ನಕ್ಕಷ್ಟು ಇಮ್ಮಡಿಯಲ್ಲಿ ನಗು.  ಅಲ್ಲಿ ನಾನು. ನನ್ನದೊಂದು ದೊಡ್ಡ ಅವಕಾಶ . ಯಾರಿಗೂ ಸೋತಿದ್ದಿಲ್ಲ , ಬಗ್ಗಿದ್ದಿಲ್ಲ. ನಡೆದಿದ್ದೇ  ದಾರಿ. ಕಂಡಷ್ಟೂ ನನ್ನದೇ. ಪುಟಿಪುಟಿಯುವ ಜೀವ ಸೆಲೆಯಲ್ಲಿ  ಆರಾಮಾಗಿದ್ದೆ ನಾನು... 

ನಿನ್ನ ಅಸ್ತಿತ್ವ ಗೊತ್ತಾದಾಗ ... 

ನನ್ನ ಪ್ರಪಂಚದ ಬಹು ಭಾಗ ನೀನಾದೆ.ನಿನ್ನಿಂದ ಬೆಳಗು.. ನಿನ್ನೊಂದಿಗೆ ಮುಗಿವ ಇರುಳು. ನಿನ್ನವೇ ಮಾತುಗಳು.. ನೀ ಕೊಟ್ಟರೆ ಮಾತ್ರ ಅಲ್ಲಿ ಮೌನಕ್ಕೆ ಆಸ್ಪದ .  ನಿನಗಾಗಿ ಇಲ್ಲದ ಛಲ .. ಎಲ್ಲ ಗೆಲ್ಲಬಲ್ಲೆ ಎಂಬ ಹಂಬಲ. ಪ್ರಪಂಚ ಎದುರಾದರೂ ನಿನ್ನ ಜೊತೆಯಿದೆ ಎಂಬ ಬೆಂಬಲ. ಖುಷಿಯಾಗಿದ್ದೆ ನಾನು ... 

ನಿನ್ನ ಅಸ್ತಿತ್ವ ಇದ್ದೂ ಇಲ್ಲದಂತಾದಾಗ ... 

ನನ್ನ ಪ್ರಪಂಚವೇ ಖಾಲಿಯಾದಂತೆ ಭಾಸ. ತುಂಬಿಕೊಂಡಿದ್ದ ಖುಷಿಯೀಗ ತೂತು ಮಡಿಕೆಯಲ್ಲಿನ ನೀರು.   ಸಂಜೆಗಳಿಗೆಲ್ಲ ಮೌನದ ಹೊದಿಕೆ. ಕಂಡ ಕನಸುಗಳೆಲ್ಲ ಕಾದ ಗಾಜಿನಂತೆ. ಕಣ್ಣೀರಿಗೂ ಹೊರಬರಲು ಭಯ. ಬೊಗಸೆಯೊಡ್ಡಿಯೂ ಗೊತ್ತಿಲ್ಲದ ನಾನು ಎರಡೂ ತೋಳು ಚಾಚಿ ನಿಂತಿದ್ದೆ ನಿನ್ನ ಮುಂದೆ.  ಸೋಲೇ  ಗೊತ್ತಿಲ್ಲದ ನಾನೆಂಬ ನಾನು ಸೋತಿದ್ದೆ .. 

ನಿನ್ನ ಅಸ್ತಿತ್ವವೇ ಇಲ್ಲದಂತಾದಾಗ ... 

ನಾನೇ ಕುಸಿದಂಥ  ಭಾವ . ನನ್ನ ಪ್ರಪಂಚ ಖಾಲಿ ಖಾಲಿ. ಕಣ್ಣೀರು ಖಾಲಿಯಾಯ್ತಾ? ಗೊತ್ತಿಲ್ಲ . ಅಳು ಬರಲೇ ಇಲ್ಲ. ಮಾತಿದೆಯಾ? ಗೊತ್ತಿಲ್ಲ . ಮೌನ ಸಹನೀಯ. ಬಡಿಯುತ್ತಿರುವ ಹೃದಯ ಬಂಡೆಯಾಗಿದೆ.  ಹೆಪ್ಪುಗಟ್ಟಿದ ಹನಿಗಳದು ಹೊರಬಲಾರೆನೆಂಬ ಮುಷ್ಕರ. ಮುಚ್ಚ್ಹಿದ ಕತ್ತಲ ಬಾಗಿಲಾಚೆಗೊಂದು ಬೆಳಕಿರಬಹುದಾ ? ಆ ಬೆಳಕಿನಲ್ಲಿ ನೀನಿರಬಹುದಾ ? ಎಂಬ ಭ್ರಮೆಯಲ್ಲಿ ಸತ್ತು ಬದುಕುತ್ತಿದ್ದೇನೆ; ಕನಸುಗಳು ಉಸಿರಾಡುತ್ತಿವೆಯಲ್ಲ....

29 comments:

 1. Replies
  1. ವಿಟ್ಟಲ್ ಇದು ಸಂಬಂಧಗಳ ಅಸ್ತಿಸ್ತ್ವಗಳ ಮೆಟ್ಟಿಲುಗಳನ್ನು ಚಿತ್ರಿಸಲು ಪ್ರಯತ್ನ ಪಟ್ಟಿದ್ದಷ್ಟೇ. ಆ ಸಂಬಂಧ "ಅವನೇ" ಅಗಿರಬೇಕೆಂದೇನೂ ಇಲ್ಲ . "ಅವಳು " ಆಗಿರಬಹುದಲ್ಲವೇ ??

   Delete
 2. ಇಲ್ಲಿ ನೀನೆಂಬುದು ನಿನ್ನೆ ಕಂಡ ನಾಳೆಗಳೆಡೆಗಿನ ಕನಸೂ ಆದೀತು...
  ನೀನೆಂಬ ಒಂದು ಕನಸು ಸತ್ತರೂ ಹೊಸ ಕನಸಿಗೆ ಬಸಿರಾಗೋ ಮನಸಿಗಿನ್ನೂ ಉಸಿರಿದೆಯಲ್ಲವಾ...
  ಅಷ್ಟು ಸಾಕಲ್ಲವಾ ನಾಳೆಗಳಿಗೆ ನಗೆಯ ತುಂಬಲು...
  ಚಂದದ ಬರಹ ಕಣೇ ಪೂಪಿ...:)

  ReplyDelete
  Replies
  1. ಕನಸುಗಳಿಗೆ ಜೀವ ತುಂಬಿಕೊಡುವ ಮನಸ್ಸಿದ್ದರೂ ಅದೇಕೋ ಬಣ್ಣ ಮಾಸಿದ ಕನಸುಗಳೇ ಕೆಲವೊಮ್ಮೆ ಕಾಡುತ್ತವೆ .. ನಿನ್ನೆಯಿಟ್ಟ ರಂಗೋಲಿಯನ್ನು ಮತ್ತೆ ನಾಳೆಯೂ ನಿನ್ನೆಯಂತೆಯೇ ಬಿಡಿಸಲು ಸಾದ್ಯವಿಲ್ಲ ಅಲ್ಲವೇ ??

   ಧನ್ಯವಾದ ...

   Delete
 3. ಪರಿಚಯದ ಮೆಟ್ಟಿಲು ಹತ್ತುತ್ತ ಹೋದಂತೆ ಕೆಲವೊಮ್ಮೆ ಗುಣಗಳು ಅವಗುಣಗಳಾಗುತ್ತವೆ.. ಅವಗುಣಗಳು ಗುಣಗಳಾಗುತ್ತವೆ.. ಎರಡು ಸಂದರ್ಭದಲ್ಲಿ ಕಳೆದುಕೊಂಡ ಇಲ್ಲವೇ ಪಡೆದುಕೊಂಡ ಭಾವ ಹೇಳಲಾಗದಷ್ಟು .. ಪದಗಳು ನೀರಿನ ಝರಿಯಂತೆ ಇಳಿದ ಪರಿ ಸುಂದರವಾಗಿದೆ ಎಸ್ ಪಿ

  ReplyDelete
  Replies
  1. ಇಲ್ಲಿ ಅವಗುಣಗಳು ಗುಣಗಳಾದರೆ ನಾ ಬದಲಾಯಿಸಿದ್ದು ಎಂಬ ಹಮ್ಮು ... ಗುಣಗಳು ಅವಗುಣಗಳಾದರೆ ನೀ ಬದಲಾಗಿದ್ದೀಯಾ ಎಂಬ ಕೊರಗು. ಸಂಬಂಧಗಳ ಮೆಟ್ಟಿಲುಗಳೆರಿದಂತೆಲ್ಲ ಮನಸ್ಸೆಂಬುದು ಹುಚ್ಚು ಕುದುರೆಯಾಗುತ್ತದೆ ಅನಿಸುತ್ತದೆ. ನಂಬಿಕೆ , ಆತ್ಮೀಯತೆ , ಪ್ರೀತಿಯೇ ಕಡಿವಾಣಗಳಾಗಬೇಕೇನೋ ಅಲ್ಲವಾ ??

   ಥ್ಯಾಂಕ್ ಯೂ ...

   Delete
 4. ತುಂಬಾ ಚೆನ್ನಾಗಿ ಬರೆದಿದ್ದೀಯಾ... ಕೆಲವು ಪರಿಚಯಗಳು ಹಿತವೆನ್ನಿಸುತ್ತವೆ.

  ReplyDelete
 5. ನಿಮ್ಮ ಮಾತು ನಿಜ ಸಂದ್ಯಕ್ಕ.. ಮನಸು ಮಾತಾಡಿದೆ. ಒಳ್ಳೆಯ ಭಾವ ಬರಹ.

  ReplyDelete
 6. ಬದುಕೊಂದು ದೂರ ತೀರದ ದಾಹ ತೀರದ ಪಯಣ....
  ಇಲ್ಲಿ ಜೊತೆಯಾಗಿ ಬರುವರೆಷ್ಟೋ... ಪ್ರೀತಿ ಕೊಡುವರೆಷ್ಟೋ....
  ನಗೆಯ ಹಂಚುವರೆಷ್ಟೋ....
  ಆದರೆ ನಾವು ಸಮರ್ಥಿಸಿಕೊಳ್ಳುವ ನಮ್ಮ ಭರವಸೆಗಳಿಗೆ ನಾವು
  ಮಣೆ ಹಾಕಿರುತ್ತೇವೆ.....
  ಎಲ್ಲೋ ಜೊತೆಯಾಗಿ ಪ್ರೀತಿ ಕೊಟ್ಟು ನಗೆಯ ಹಂಚಿ ಹೋದ ಮಾಯಗಾರ
  ಮತ್ಯಾವುದೋ ಅವನ ಭರವಸೆಗಳಿಗೆ ಮಣೆ ಹಾಕಿ ಅವನ ತೀರದಲ್ಲಿಳಿದು ಬಿಡುತ್ತಾನೆ...
  ನಮ್ಮಲ್ಲಿರುವುದು ಅವನು ಹಂಚಿದ ನಗೆ ಮಲ್ಲಿಗೆಯ ಕಂಪು ಮಾತ್ರ....
  ನಾವು ಇಳಿಯುವ ತೀರದಲ್ಲಿ ನಮಗಾಗಿಯೇ ಒಂದು ಹೂವು ಅರಳಿದೆ ಎಂದು
  ತಿಳಿದು ಹೊರಟು ಬಿಡಬೇಕು....

  ಚಂದವಾಗಿದೆ ಬರಹ...

  ReplyDelete
  Replies
  1. ದೂರ ತೀರದ ಪಯಣದಲಿ ಕ್ಷಣ ಕಾಲ ಒಟ್ಟಿಗಿದ್ದು ತೀರದ ನೆನಪುಗಳ ಬುತ್ತಿ ಕೊಟ್ಟು ಹೋಗುವ ಸಂಬಂಧಗಳೇ ಹಾಗೆ ಅಲ್ಲವಾ. ಆಗಾಗ ತೆರೆದು ನೆನಪುಗಳ ಮೆಲ್ಲುವುದಷ್ಟೇ ಕೆಲಸ... ಅದು ಕಷ್ಟದ್ದೂ ಕೂಡಾ

   ಇಷ್ಟ ಪಟ್ಟಿದ್ದಕ್ಕೆ ಧನ್ಯವಾದ ರಾಘವ

   Delete
 7. parichayada, snehada, premadabhaavagalannu vingadisida reeti khushi aaytu :)

  chendaneya baraha sandhyaa as usual.

  ReplyDelete
 8. i guess, u r talking here about a more deeper attachment that cannot be expressed in mere words!

  ReplyDelete
  Replies
  1. Yes.. Sir.. talking about stages of a relation which can't be expressed ..

   Thank you

   Delete
 9. ಭಾವ ಯಾಕೋ ತೀರಾ ಹತ್ತಿರ ಅಂತನಿಸಿ ಕ್ಷಣವೊಂದಕ್ಕೆ ಕಂಗಾಲಾದೇ ನಾ .
  ಕಳೆದು ಹೋದ ಪ್ರೀತಿ ಮತ್ತೆ ಸಿಗಲಿ .

  ತುಂಬಾ ನೈಜವಾಗಿ ಬಿಂಬಿಸೋ ನಿಮ್ಮ ಪದಗಳ ಭಾವಪುಂಜಕ್ಕೊಂದು ನಮನ ಸಂಧ್ಯಕ್ಕಾ .
  ಸುಮ್ಮನೇ ಓದಿಸಿಕೊಂಡು ಹೋಯ್ತು :)
  ಚೆನ್ನಾಗಿದೆ

  ReplyDelete
  Replies

  1. ಸಂಬಂಧಗಳ ಮಜಲುಗಳೇ ಹಾಗೆ ಪುಟ್ಟಿ .. ಅರ್ಥವಾಗಲಾರವು... ಆದ್ರೆ ಆತ್ಮೀಯವಾಗಿ ಬಿಡುತ್ತವೆ ..

   ಥ್ಯಾಂಕ್ ಯು ... --

   Delete
 10. ಜೀವನದಲ್ಲಿ ಕೆಲವರ ಪ್ರವೇಶ ಹೀಗೇ ಅಲ್ದಾ ಸಂದ್ಯಕ್ಕಾ ..
  ಕೆಲವೇ ಕಾಲ ಇದ್ರೂ ತೀರಾ ಹತ್ತಿರವಾಗಿ ಮಾಸಲಾರದ ನೆನಪುಗಳನ್ನು ಉಳಿಸಿ ಮಾಯವಾಗಿ ಬಿಡ್ತಾರೆ.. ಅವರಿಲ್ಲದ ನೆನಪುಗಳಲ್ಲಿ ಕೊರಗೋದಕ್ಕಿಂತ ಅವರು ಬರದಿದ್ದರೆ ಚೆನ್ನಾಗಿರ್ತಿತ್ತೇನೋ ಅನ್ಸೋಕೆ ಶುರು ಆಗತ್ತೆ

  ReplyDelete
  Replies
  1. ಹೌದು ನಿಜ ಪ್ರಶಸ್ತಿ .. ಕೆಲವೊಮ್ಮೆ ನೆನಪುಗಳ ಕಂಪಲ್ಲಿ ಬದುಕು ಚಂದವೇನೋ ಎನಿಸುವುದು ಸುಳ್ಳಲ್ಲ ಅಲ್ಲವಾ ...

   ಧನ್ಯವಾದ

   Delete
 11. hoovanta hrudayavanu kallu maadida !
  adarondu anukoola ivatte baadi astitva kaledukollabekilla .. prati male bisilu chali tadedu saaviraru kaala balabahudu !

  ReplyDelete
  Replies
  1. ಬಂಡೆಯಂತೆ ಬದುಕಬಹುದೇನೋ... ಆದರೆ ಸುರಿವುದೆಲ್ಲ ನೆನಪಿನ ಮಳೆಯಾದಲ್ಲಿ ಕಲ್ಲೂ ಕರಗೀತಲ್ಲವೇ ..:)

   Thank you

   Delete
 12. ಭಾವನೆಗಳು ಹರಿತವಾಗಿವೆ, ಚೆನ್ನಾಗಿದೆ.

  ReplyDelete
 13. " ಕಂಡ ಕನಸುಗಳೆಲ್ಲ ಕಾದ ಗಾಜಿನಂತೆ. ಕಣ್ಣೀರಿಗೂ ಹೊರಬರಲು ಭಯ " ಬಹುಷಃ ಆ ಕಣ್ಣ ಹನಿ ಹೊರ ಬರದೇ ಇರೋದು, ಕಾದ ಗಾಜಿನಂತಿರುವ ಕನಸುಗಳು ಒಡೆದು ಛಿದ್ರವಾಗದೇ ಇರಲಿ ಅಂತ ಅನ್ಸತ್ತೆ.
  ಒಂದೊಂದು ಉಪಮೆಗಳು ಕೋಟ್ ಮಾಡಿಡುವಂತಿದೆ. ಸೊಗಸಾದ ಬರಹ!!

  ReplyDelete
  Replies
  1. " ಬಹುಷಃ ಆ ಕಣ್ಣ ಹನಿ ಹೊರ ಬರದೇ ಇರೋದು, ಕಾದ ಗಾಜಿನಂತಿರುವ ಕನಸುಗಳು ಒಡೆದು ಛಿದ್ರವಾಗದೇ ಇರಲಿ ಅಂತ ಅನ್ಸತ್ತೆ. nimma ee anisike nija naanu ide arthadalli barediddu.. ekendare Kaada gajina mele tannaneya neeru biddare gaaju odeyutte...

   Thanks...

   Delete
 14. superb sandhya... tumba ista aatu

  ReplyDelete