Thursday, 11 July 2013

ಈ ಸ್ನೇಹವೇ ಅಪ್ಯಾಯಮಾನ..

"ಮೌನ ಗೌರಿ.. ಅದೆಷ್ಟು ಮುದ್ದಾಗಿ ಕಾಣ್ತಾ ಇದ್ದೀಯ. ಹಬ್ಬದ ದಿನ ಹೆಣ್ಣು ಮಕ್ಕಳು ಹೀಗೆ  ರೆಡಿ ಆಗಿ ಮನೆತುಂಬಾ ಓಡಾಡ್ಕೊಂಡು ಇದ್ರೆ ಎಷ್ಟು ಖುಷಿ ಗೊತ್ತಾ" ಅಂತ ಅಮ್ಮ  ಗಲ್ಲಕ್ಕೊಂದು ಪುಟ್ಟ ಬೊಟ್ಟಿಟ್ಟು ಹೊರಗೆ ಹೋದಳು. ಅಷ್ಟು ಚಂದವಿದ್ದೀನಾ ? ಅಂದುಕೊಂಡು ಕನ್ನಡಿ ನೋಡಿಕೊಂಡೆ. ಯಾಕೋ ಹಿಂದೆ ನಿಂತು ನೀನೇ ನಕ್ಕಂತಾಯಿತು. ನನ್ನ ತುಟಿಯಂಚಿನ ಪುಟ್ಟ ನಗು ನೆನಪಿನ ಸುರುಳಿ ಬಿಚ್ಚಿಟ್ಟಿತ್ತು. ಆ ಕನ್ನಡಿಯೂ ನಿನ್ನದೇ ಉಡುಗೊರೆ ತಾನೇ. ಅದೊಂದು ಹುಟ್ಟು ಹಬ್ಬದ ದಿನ ಬೆಳಿಗ್ಗೆ ಮನೆ ಬಾಗಿಲ ಮುಂದೆ ಇದ್ದ ಆಳೆತ್ತರದ ಗಿಫ್ಟ್ ಪ್ಯಾಕ್ ನೋಡಿ ಏನಿರಬಹುದು ಎಂದು ಓಪನ್ ಮಾಡಿದವಳಿಗೆ ಕಂಡಿದ್ದು ನನ್ನದೇ  ಸಂಪೂರ್ಣ ರೂಪ. 

ಅವತ್ತು  ನಾನು ಅಮ್ಮ ನೋಡು ನೋಡುತ್ತಿದ್ದಂತೆ ನೀ ಬೈಕ್ ನಿಂದ ಬಿದ್ದಿದ್ದೆ. ಹೋಗಿ ಯಮ ಗಾತ್ರದ ರಾಯಲ್ ಎನ್ಫಿಲ್ದ್ ಬೈಕ್ ನ ಎತ್ತಿ ನಿನ್ನನ್ನು ಎಬ್ಬಿಸಿ ನಿಲ್ಲಿಸಿದವಳಿಗೆ ನೀನು ಡ್ರೈವ್ ಮಾಡಲಾರೆ ಎನಿಸಿತ್ತು . ಅದೇ ಬೀದಿಯ ತುದಿಯವನೆಂದು ಗೊತ್ತಿತ್ತು .ಅದಕ್ಕೆ ಬೈಕ್ ಸ್ಟಾರ್ಟ್ ಮಾಡಿ ಕುಳಿತುಕೋ ಎಂದವಳನ್ನು ಅನುಮಾನದಿಂದ ನೋಡಿದ್ದೆ ನೀನು. " ಬೈಕ್ ಓಡ್ಸೋಕೆ ಬರುತ್ತೆ ರೀ " ಎಂದು ವಿಥ್ ಗೇರ್ ಡ್ರೈವಿಂಗ್ ಲೈಸೆನ್ಸ್ ತೋರಿಸಿದ್ದೆ ನಾನು. ಒಂದು ನಗು , ಸಣ್ಣ ಸಹಾಯ , ಸಾಕಲ್ಲವಾ ಒಂದು ಗೆಳತನಕ್ಕೆ. ಬೆಳಿಗ್ಗೆ ಬೆಳಿಗ್ಗೆ ಕಣ್ಣಿಗೆ ಬೆಳಕು ಬಂದು ಎಚ್ಚರವಾಗುತ್ತದೆ ಎಂದು ಬಯ್ಯುತ್ತಿದ್ದ ನನ್ನ ರೂಮಿನ ದೊಡ್ಡ ಕಿಟಕಿಗಳು ಪ್ರೀತಿಯಾಗತೊಡಗಿದ್ದು  ಆ ಕಿಟಕಿಗಳಿಂದ ನಿಮ್ಮನೆಯ ಟೆರ್ರೆಸ್ ಕಾಣುತ್ತದೆ ಎಂದು ಗೊತ್ತಾದಾಗಲೇ. ಅಲ್ಲಿ ಟೆರ್ರೆಸ್ ಮೇಲೆ ಓಡಾಡುತ್ತಾ ನೀನು ಮೆಸೇಜ್ ಮಾಡಿದರೆ ಇಲ್ಲಿ ಕಿಟಕಿಯ ಬಳಿಯಲ್ಲಿ ಕುಳಿತು ರಿಪ್ಲೈ ಟೈಪಿಸುವುದು . ರಿಪ್ಲೈ ಗೆ ಸ್ವಲ್ಪ ತಡವಾದರೂ ಸಾಕು ಸನ್ನೆಗಳಲ್ಲಿ ಜಗಳ ಶುರು. ಬೆಳಿಗ್ಗೆ ನಿನ್ನದೇ ಕಾಲ್ ನಿಂದ  ನಾನೆದ್ದು ಕಿಟಕಿಯ ಹತ್ತಿರ ಬಂದರೆ ಅಲ್ಲೇ ಟೆರ್ರೆಸ್ ಮೇಲೆ ನಿಂತು ಕೈ ಬೀಸಿ ಹಾಯ್ ಎನ್ನುತ್ತಿದ್ದ ನೀನು . ನಿನ್ನ ಪರಿಚಯ ಗಟ್ಟಿ ಆದ ದಿನದಿಂದ ಆ ಕಿಟಕಿಗಳ ಕರ್ಟನ್ಸ್ ತೆಗೆದುಬಿಟ್ಟಿದ್ದೆ ನಾನು. 

ಗೆಳೆತನವನ್ನು ಅಷ್ಟಾಗಿ ಹಚ್ಚಿಕೊಳ್ಳದೆ ಬೆಳೆದ ನನಗೆ ಮೊದಲ ಬಾರಿ ಗೆಳೆತನದ ಬಗೆಗೆ ಪ್ರೀತಿ ಮೂಡಿಸಿದ್ದು  ಸರ್ವಗುಣ ಸಂಪನ್ನ(?)ನ್ನಾಗಿ ಸಿಕ್ಕ ನೀನು ..!! ಮನೆಯಲ್ಲಿ ಜವಬ್ದಾರಿಯುತ ಮಗ ಎನಿಸಿಕೊಂಡು ಊರಲ್ಲೂ ಪರೋಪಕಾರಿ ಎಂದು ಹೇಳಿಸಿಕೊಳ್ಳುವವನು., ಕೆಲವೊಮ್ಮೆ ಅದ್ಯಾರಿಗೋ ರಕ್ತ ಬರುವಂತೆ ಚಚ್ಚ್ಚಿ ಬಂದು  ಮನಸೋ ಇಚ್ಛೆ ಬಿಯರ್ ಕುಡಿಯುತ್ತಾ ತಣ್ಣಗೆ ಕುಳಿತುಕೊಳ್ಳುತ್ತಿದ್ದೆ. ಟ್ರಿಪ್ ,ಎಕ್ಷ್ಸ್ಕರ್ಶನ್ಸ್  ಅಂತ ಹೊರಗಡೆ ಹೋದಾಗ, ಎಷ್ಟೇ ತಡವಾದರೂ ನನ್ನನ್ನು ಸೇಫ್ ಆಗಿ ಮನೆ ತಲುಪಿಸಿದ್ದ ನೀನೇ ,ನನ್ನ ಜೊತೆ ಬರಬೇಡ ಅಂತ ಹೇಳಿದರೂ ಕೂಡ ಅದೆಲ್ಲಿಗೋ ನಾನೂ ಬರುತ್ತೇನೆ ಎಂದು ನಿನ್ನ ಬೆನ್ನಿಗಂಟಿ ಕುಳಿತ ನನ್ನನ್ನು ಮದ್ಯ ದಾರಿಯಲ್ಲಿ ಬೀಳಿಸಿ ತಿರುಗಿ ನೋಡದೆ ಹೋಗಿದ್ದೆ .  ಕೆಟ್ಟತನ ಮತ್ತು ಒಳ್ಳೆತನ ಎಲ್ಲವನ್ನೂ ಮೀರಿ ನಿನ್ನನ್ನು ಇಡಿಯಾಗಿ ಒಪ್ಪಿಕೊಂಡಿದ್ದಕ್ಕೆ ದ್ವೇಷಿಸುವ ಮನಸ್ಸೇ ಬರಲಿಲ್ಲ. long drive  ಎಂದು ಎಲ್ಲಾದರೂ ಕರೆದುಕೊಂಡು ಹೋಗಿ ಸುಮ್ಮನೆ ಬಿಯರ್ ಕುಡಿಯುತ್ತಾ ಕುಳಿತುಬಿಡುತ್ತಿದ್ದೆ. " ನನ್ನನ್ನೇಕೆ ಕರೆತಂದಿದ್ದು ಎಂದು ಕೇಳಿದರೆ , ವಾಪಸ್ ಸೇಫ್ ಆಗಿ ಮನೆ ತಲುಪಿಸಲು ಡ್ರೈವರ್ ಬೇಕಲ್ಲ ಎಂದು ನಗುತ್ತಿದ್ದೆ. ನಿನ್ನ ಆ ನಗು ನನಗಿಷ್ಟ.  ಡೆಲ್ಲಿ ರಾಜಕೀಯದಿಂದ ಹಿಡಿದು ಪಕ್ಕದ ಬೀದಿಯ ಹುಡುಗಿಯ ಬಗ್ಗೆ ಎಲ್ಲವನ್ನೂ ಮಾತನಾಡುವ ನೀನು ಪ್ರೀತಿ ವಿಷಯದಲ್ಲಿ ಮಾತ್ರ ಮೌನಿಯಾಗಿಬಿಡುತ್ತಿದ್ದೆ. ನಿನಗೆ ಯಾವುದೇ flash back ಗಳಿಲ್ಲದಿದ್ದರೂ ನಿನ್ನ ಮೌನಕ್ಕೆ ಮಾತ್ರ ಉತ್ತರ ಸಿಕ್ಕಿಲ್ಲ ನನಗೆ. ಗೆಜ್ಜೆ ಸದ್ದು ಕೇಳೋಕೆ ಚಂದ ಕಣೆ ಎಂದ ನಿನ್ನ ಮಾತಿನಿಂದ ಘಲ್ ಘಲ್ ಎನ್ನುವ ಗೆಜ್ಜೆ ಹಾಕುವುದ ಕಲಿತಿದ್ದೆ. "ಏನಾದ್ರು ಗಿಫ್ಟ್ ಕೊಡಬೇಕು ಅನಿಸ್ತಿದೆ ಏನು ಕೊಡಲಿ" ಎಂದು ಕೇಳಿದವಳಿಗೆ, "ರೀಡ್ ಆಂಡ್ ಟೈಲರ್ ಫುಲ್ ಫಾರ್ಮಲ್ ಸೆಟ್ ಕೊಡ್ಸು" ಎಂದಿದ್ದಕ್ಕಾಗಿ ಅಪ್ಪ ಕೊಡುವ ಪಾಕೆಟ್ ಮನಿಯಲ್ಲಿ ಉಳಿಸತೋಡಗಿದ್ದೆ. ಬದುಕು  ಹೀಗೆಯೇ ಸಾಗುತ್ತಿದ್ದಾಗ ಅದ್ಯಾವ ಮಾಯದಲ್ಲಿ ಭಾವನೆಗಳು ಬದಲಾಗತೊಡಗಿದವೋ ಗೊತ್ತಿಲ್ಲ. ಮನಸ್ಸು ನಿನಗೆ ಅಂಕುಶ ಹಾಕತೊಡಗಿತ್ತು. ಫಾಸ್ಟ್ ಆಗಿ ಡ್ರೈವ್ ಮಾಡಬೇಡ , ಅದೆಷ್ಟು ಕುಡಿಯೋದು ? ಯಾಕೆ ಲೇಟ್ ? ಎಂದೆಲ್ಲ ಸಣ್ಣ ಸಣ್ಣ ವಿಷಯಗಳಿಗೂ ನಿನ್ನೊಡನೆ ಜಗಳ ಆಡತೊಡಗಿದ್ದೆ. ಬೇರೆ ಹುಡುಗಿಯರ ಜೊತೆ ನೀ ಮಾತನಾಡುವುದು ನನಗೆ ಇರುಸು ಮುರಿಸಾಗತೊಡಗಿತ್ತು. ಯಾವಾಗ ನಿನ್ನನ್ನು ಬಿಟ್ಟು ಹೋಗಬೇಕೆಂದು ಸಿಕ್ಕ ಒಳ್ಳೆ ಕೆಲಸವನ್ನು ಒಪ್ಪಿಕೊಳ್ಳಲು ಮನಸ್ಸಾಗಲಿಲ್ಲವೋ ಅವತ್ತು ಭಾವನೆಗಳು ಬದಲಾಗಿವೆ ಎಂದು ಅರ್ಥವಾಗಿ  ಬಿಟ್ಟಿತು. ಯಾಕೋ ಪ್ರೀತಿಯ ಚೌಕಟ್ಟು ಹಾಕುವ ಮನಸ್ಸಾಗದೆ , ಒಲ್ಲದ ಮನಸ್ಸನ್ನು ಒಪ್ಪಿಸಿ  ಇಲ್ಲಿಗೆ ಬಂದು ಬಿಟ್ಟೆ.

"Thanks ನೀ ಕೊಟ್ಟ ನಗುವಿಗೆ" ಎಂದು ಪುಟ್ಟದಾಗಿ ಬರೆದಿಟ್ಟು ಬಂದವಳು, ಇಲ್ಲಿಗೆ ಬಂದ  ಮೇಲೆ ಕಣ್ಣಲ್ಲಿ ನೀರು ತುಂಬುವಷ್ಟು ನಗಲೇ ಇಲ್ಲ. ಇಲ್ಲಿರುವ ದೊಡ್ಡ ಕಿಟಕಿಗಳಿಗೆ ಯಾವಾಗಲೂ ಕರ್ಟನ್ ಗಳಿಂದ ಅಲಂಕಾರ. ಸದ್ದು ಮಾಡದ ನನ್ನ ಕಾಲುಚೈನ್ , ರೋಡ್ ಲ್ಲಿ ಕಾಣುವ ರಾಯಲ್ ಎನ್ಫಿಲ್ದ್ ಗಳು , ಅಲ್ಲೆಲ್ಲೋ ಕಾಣುವ 
ರೀಡ್ ಅಂಡ್ ಟೈಲರ್ ಶಾಪ್ ಎಲ್ಲವೂ ನಿನ್ನನ್ನು ನೆನಪಿಸುತ್ತವೆ. 

ಅಪರೂಪಕ್ಕೊಮ್ಮೆ ಬರುವ ನಿನ್ನ ಕಾಲ್. long drive ಹೋಗಬೇಕಿತ್ತು, ನೀನಿಲ್ಲ ಕಣೆ , miss you idiot ಎಂಬ ನಿನ್ನ ಮೆಸೇಜ್ ಗಳು ಖುಷಿ ಕೊಡುತ್ತವೆ. 

ಬಿಟ್ಟಿರಲಾರೆ ಎಂಬ ಪ್ರೀತಿಯ ಚೌಕಟ್ಟಿಗಿಂತ ಬಿಟ್ಟರೂ ಬಿಡದಂತಿರುವ ಈ ಸ್ನೇಹವೇ ಅಪ್ಯಾಯಮಾನ.. 

34 comments:

 1. ತುಂಬಾ ಸುಂದರವಾಗಿ ಬರೆದಿದ್ದೀರಿ. ಹೌದಲ್ಲ , ಚೌಕಟ್ಟುಗಳು ಒಮ್ಮೊಮ್ಮೆ ಬೇಕೆನಿಸಿದರೆ ಒಮ್ಮೊಮ್ಮೆ ಸ್ವಚ್ಛಂದ ಸ್ನೇಹವೇ ಬಲು ಸುಂದರ ಎನಿಸುತ್ತದೆ

  ReplyDelete
 2. ಬಿಟ್ಟಿರಲಾರೆ ಎಂಬ ಪ್ರೀತಿಯ ಚೌಕಟ್ಟಿಗಿಂತ ಬಿಟ್ಟರೂ ಬಿಡದಂತಿರುವ ಈ ಸ್ನೇಹವೇ ಅಪ್ಯಾಯಮಾನ.. ..Wonderfull Article...!!

  ReplyDelete
 3. ಆಪ್ಯಾಯಮಾನವಾದ ಲೇಖನ!

  ReplyDelete
 4. ಬಿಟ್ಟಿರಲಾರೆ ಎಂಬ ಪ್ರೀತಿಯ ಚೌಕಟ್ಟಿಗಿಂತ ಬಿಟ್ಟರೂ ಬಿಡದಂತಿರುವ ಈ ಸ್ನೇಹವೇ ಅಪ್ಯಾಯಮಾನ.. mast baradde :)

  ReplyDelete
 5. ಸರ್ವಗುಣ ಸಂಪನ್ನರು ರಾಯಲ್ ಎನ್ಫಿಲ್ದ್ ಮೇಲೆಯೇ ಓಡಾಡುತ್ತಾರೆ ಕಣಮ್ಮ.

  ಅದೆಷ್ಟು ಮುದ್ದಾಗಿ ಬರೆದುಕೊಡುತ್ತೀಯಾ ಓದುತ್ತಾ ಓದುತ್ತಾ ಆ ಆ ಜಾಗಗಳಿಗೆ ಮನಸು ವಲಸೆ ಹೋದಂತೆ ಆಗುತ್ತದೆ. ನಿಮ್ಮ ಈ ಸಾದೃಶ ತಂತ್ರಜ್ಞಾನ ನನಗೂ ತುಸು ಎರವಲು ಕೊಡುತ್ತೀಯಾ ಪುಟ್ಟ ಗೆಳತಿ?

  ReplyDelete
  Replies
  1. Badari Sir... nimmindale kaliyabekaaddu bahashtide... Naanenu kodali nimage ...

   Thank you

   Delete
 6. No words dear... it’s just awesome every single word took me to some other world..
  Like a movie, every line you wrote giving clear view..
  Lots of love for your talent. keep it up...

  ReplyDelete
 7. ಬಿಟ್ಟಿರಲಾರೆ ಎಂಬ ಪ್ರೀತಿಯ ಚೌಕಟ್ಟಿಗಿಂತ ಬಿಟ್ಟರೂ ಬಿಡದಂತಿರುವ ಈ ಸ್ನೇಹವೇ ಅಪ್ಯಾಯಮಾನ...!! ಇದು ಮಾತ್ರ ತುಂಬಾನೇ ಇಷ್ಟ ಆಯ್ತು ..... ಪ್ರೀತಿಯ ಚೌಕಟ್ಟು ಬಂದರೆ ಸ್ನೇಹ ಮಾಯ ಆಗೋಗುತ್ತೆ... ಮೊದಲು 'ಹೇಳಿಕೊಳ್ಳಲು ಒಬ್ಬ ಸ್ನೇಹಿತನಾದರೂ ಇದ್ದನಲ್ಲ ಈಗ ಯಾರೂ ಇಲ್ಲ' ಎಂದು ನಿಟ್ಟುಸಿರಿಡುವುದಕ್ಕಿಂತ ಚೌಕಟ್ಟು ಹಾಕದಿರುವುದೇ ಉತ್ತಮ....!!!

  ReplyDelete
  Replies
  1. KElavomme Choukattillada chitragale chanda alva kavya..

   Thank you dear..:)

   Delete
 8. ಚಂದ ಬರದ್ದೆ ಸಂಧ್ಯಾ..

  ReplyDelete
 9. " ಬಿಟ್ಟಿರಲಾರೆ ಎಂಬ ಪ್ರೀತಿಯ ಚೌಕಟ್ಟಿಗಿಂತ ಬಿಟ್ಟರೂ ಬಿಡದಂತಿರುವ ಈ ಸ್ನೇಹವೇ ಅಪ್ಯಾಯಮಾನ. " ಈ ಕೊನೆಯ ಸಾಲುಗಳು ನಿಮ್ಮ ಇಡೀ ಬರಹದ ಸಾರವನ್ನೆಲ್ಲಾ ಹೀರಿಬಿಟ್ಟಿತು.
  ಕೊನೆ ಗುಟುಕಿನ ನಂತರವೂ, ಕಾಫಿ ಲೋಟವನ್ನು ಎತ್ತಿ ಹೊಯ್ದುಕೊಳ್ಳುವಂತೆ ...,ಓದಿ ಮುಗಿದ ಮೇಲೂ ನಿಮ್ಮದೇ ಬರಹದ ಗುಂಗು, ಉಳಿದು ಹೋದ ನಂತರದ ಪದಗಳಿಗೆ ಹುಡುಕಾಡಿತು.
  ಅದ್ಭುತ ಬರವಣಿಗೆ ..

  ReplyDelete
 10. super sandhyakka :) ishta aatu

  ReplyDelete
 11. ಅಂಗೈಯಲ್ಲಿನ ಮರಳು.. ಕಡಲತಡಿಯಲ್ಲಿ ನಮ್ಮ ಕಾಲಡಿಯೇ ಸರಿದು ಹೋಗುವ ಮರಳು ಇವೆಲ್ಲ ಹಿಡಿದಷ್ಟು ನಮ್ಮ ಹಿಡಿತ ಸಡಿಲಿಸಿ ಸರಿದು ಹೋಗುತ್ತದೆ.. ಪ್ರೀತಿಯಲ್ಲಿ ಬೇಕೇ ಬೇಕು ಎನ್ನುವ ಅಂಕುಶ ಎದುರಾದಾಗ ಮುಜುಗರ ಶುರುವಾಗುತ್ತದೆ. ಈ ಸಂದೇಶ ಹೊತ್ತುಬಂದ ಲೇಖನ ಸೂಪರ್ ಇದೆ. ಅಂಕುಶಗಳಿಲ್ಲದ ಪ್ರೀತಿಯೇ.. ತನ್ನ ಸುತ್ತಾ ಹಾಕುವ ಒಂದು ಪರಿಧಿಯಲ್ಲಿ ಜೀವಿಸುವ ತಾಕತ್ ಬರುವುದು ನಾವು ಪ್ರೀತಿಗೆ ಬೇಲಿ ಹಾಕದೆ ಇರುವಾಗ.. ಸೂಪರ್ ಎಸ್ ಪಿ

  ReplyDelete
 12. ಬಿಟ್ಟಿರಲಾರೆ ಎಂಬ ಪ್ರೀತಿಯ ಚೌಕಟ್ಟಿಗಿಂತ ಬಿಟ್ಟರೂ ಬಿಡದಂತಿರುವ ಈ ಸ್ನೇಹವೇ ಅಪ್ಯಾಯಮಾನ.. ಚೆನ್ನಾಗಿದ್ದು ಸಂಧ್ಯಾಕ್ಕಾ..........

  ReplyDelete
 13. sandhyaa..kela sambhandagalige hesaridadiddare chanda,kelavakke namma nirIkshegala chaukattu haakadiddare chanda..chandavanna chandada padagalalli jodisiddIyaa!!

  ReplyDelete
 14. ತುಂಬಾ ಚೆನ್ನಗಿದ್ದು ಸಂಧ್ಯಕ್ಕ... ಇಷ್ಟ ಆತು :)

  ReplyDelete