Tuesday 24 January 2012

ಅವಳೆಂದರೆ ಹಾಗೆ..



       ಅವಳೆಂದರೆ ಹಾಗೆ..
      ಗುರುವಾಗುತ್ತಾಳೆ...
      ಗುರಿಯೆಡೆಗೆ ನಡೆವಾಗ ದಾರಿದೀಪವಾಗುತ್ತಾಳೆ..
      ಎಡವಿದಾಗ ಕೈ ಹಿಡಿದು ನಡೆಸುತ್ತಾಳೆ..
      ಪ್ರತಿಹೆಜ್ಜೆಗೂ ಹರಕೆ ಹಾರೈಕೆಗಳ ಮಹಾಪೂರ ಹರಿಸುತ್ತಾಳೆ..
       ಪ್ರತಿ ಮೆಟ್ಟಿಲೇರಿದಾಗಲೂ  ಬೆನ್ನು ತಟ್ಟುತ್ತಾಳೆ..

      ಅವಳೆಂದರೆ ಹಾಗೆ...
     ಗೆಳತಿಯಾಗುತ್ತಾಳೆ..
     ನಗುವಿಗೆ ನಗು ಸೇರಿಸುತ್ತಾಳೆ..
     ನೋವಿಗೆ ಹೆಗಲು ನೀಡುತ್ತಾಳೆ...
    ತುಂಟಾಟಗಳಿಗೆ ಕನ್ನಡಿಯಾಗುತ್ತಾಳೆ..
    ಭಾವನೆಗಳಿಗೆ ಕಿವಿಯಾಗುತ್ತಾಳೆ...

    ಅವಳೆಂದರೆ ಹಾಗೆ..
    ಮಮತಾಮೂರ್ತಿಯಾಗುತ್ತಾಳೆ..
    ಸಹನಾ ಧರಿತ್ರಿಯಾಗುತ್ತಾಳೆ..
   ಅತ್ತಾಗ ಅಕ್ಕರೆಯಿಂದ ಸಂತೈಸುತ್ತಾಳೆ..
   ಬೇಸರದಿ ಮೈದಡವಿ  ಮುದ್ದಿಸುತ್ತಾಳೆ..
   ಮಡಿಲು ನೀಡಿ ತಲೆ ನೆವರಿಸುತ್ತಾಳೆ..
   ಕಾರಣ ಅವಳು ಅಮ್ಮನಾಗಿರುತ್ತಾಳೆ...

6 comments:

  1. ಚೆನ್ನಾಗಿದೆ.. :)

    ReplyDelete
    Replies
    1. ಧನ್ಯವಾದಗಳು.. ಗೋಪಾಲಕೃಷ್ಣ.. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ..

      Delete
  2. ಅಮ್ಮನಿಗಾಗಿ ಬರೆದದ್ದು ಇಷ್ಟಪಟ್ಟಿದ್ದಕ್ಕೆ ಧನ್ಯವಾದ ಸರ್ ಪ್ರೋತ್ಸಾಹ ಹೀಗೆ ಇರಲಿ

    ReplyDelete
  3. ಅಮ್ಮ ಅಂದರೆ ಹಾಗೆ -
    ನಮ್ಮ ಜೀವಕ್ಕೆ ಉಸಿರ ನೀಡಿದ ದೈವ...
    ನಮ್ಮ ಬದುಕಲ್ಲಿ ಸದಾ ಹಸಿರ ಬಯಸುವ ಜೀವ...
    :
    ಚಂದನೆಯ ಸಾಲುಗಳು...

    ReplyDelete
  4. ಕಂದನ ಮೊದಲ ತೊದಲು "ಅಮ್ಮ" ಎಸ್.ಪಿ.ಯಾ ಮೊದಲ ಪ್ರಕಟಿತ ಲೇಖನ ಅಮ್ಮನ ಬಗ್ಗೆ ಸೂಪರ್...ಬ್ಲಾಗ್ ಸೊಗಸಾಗಿದೆ ನಿನ್ನ ಹಂಬಲದ ಅಮ್ಮ ಪದಗಳಲ್ಲಿ ಮೂಡಿರುವುದು...

    ReplyDelete
  5. ಹೌದು ಇಷ್ಟೆಲ್ಲ ಆಗುವ ಅವಳು ಅಮ್ಮ ಮಾತ್ರ ಆಗಿರೋಕೆ ಸಾಧ್ಯ.....

    "ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ"..

    ತುಂಬಾ ಚನ್ನಾಗಿದೆ.....

    ReplyDelete