Sunday 29 January 2012

ಯಾವ ಚೈತ್ರದ ವಸಂತ ಋತುವೋ ನೀನು...??


ಕಣ್ಣ ಸನ್ನೆಯಲಿ..
ಹೆಣ್ತನವ ಗೆದ್ದು..
ರೆಪ್ಪೆಯಂಚುಗಳಲ್ಲಿ ...
ಕನಸುಗಳ ಬಲೆ ಹೆಣೆದು...
ಕೆನ್ನೆಗುಳಿಯ ಬೊಗಸೆಗಳಲ್ಲಿ 
ಮುತ್ತಿನ ಮಳೆ ಸುರಿದು..
ಎದೆಯ ಮಾಮರದಿ...
ಒಲವ ಉಯ್ಯಾಲೆಯಲಿ..
ಸವಿನೆನಪುಗಳ ತೂಗುವವ..
ಯಾವ ಚೈತ್ರದ  
ವಸಂತ ಋತುವೋ ನೀನು...??

4 comments:

  1. ಸಂಧ್ಯಾ...

    ಬಹಳ ಚಂದದ ಸಾಲುಗಳು...! keep it up.....

    ReplyDelete
  2. ಚೈತ್ರದ ಸೊಗಸೇ ಹಾಗೆ...ವಸಂತ ಬರುವಾಗ ತಂಗಾಳಿ ತರುತ್ತಾನೆ...ಮೊಗ್ಗು ಅರಳುತ್ತದೆ ಮಾವಿನ ಸುವಾಸನೆಗೆ ಕೋಗಿಲೆ ಹಾಡುತ್ತದೆ.ಇಂತಹ ಒಂದು ಉತ್ತಮ ವಾತಾವರಣವನ್ನು ಅನಾವರಣಗೊಳಿಸುವ ನಿನ್ನ ಪದಗಳ ಲೀಲೆ ಅಮೋಘ...ಎಸ್ ಪಿ.

    ReplyDelete