Friday 17 February 2012

ಮನದಾಳದಲ್ಲಿ...

ಎದೆ ಕದವ ತೆರೆದೊಮ್ಮೆ 
ತಿರುವಿ ಹಾಕಲು ಬದುಕ ಪುಟಗಳ 
ಮೃದು ಮಧುರ ಮೆಲುಕುಗಳು 
ಮೂಡಿ ನಿಲ್ಲುವವು ಮನದಾಳದಲ್ಲಿ...
ತಿಳಿ ನೀರ ಕೊಳದಲ್ಲಿ 
ನಿಚ್ಛಳವಾಗಿ ನೆರಳು ಮೂಡುವಂತೆ.. 

ಅಲೆಗಳೇಳಲು ನೆರಳು 
ಮಸುಕು ಮಸುಕು 
ತಿಳಿನೀರ ಕೊಳದಲ್ಲಿ..

ಭಾವಗಳ  ಅಲೆಗಳೆದ್ದಷ್ಟೂ
ಬೆಚ್ಚಗೆ ತಬ್ಬುವುದು 
ನೆನಪಿನಾ ಮುಸುಕು 
ಮನದಾಳದಲ್ಲಿ ....

ಬೆಳಕಿನಾ ಕಿರಣಗಳಳಿಯಲು
ನೆರಳೂ ದೂರ ದೂರ 
ತಿಳಿನೀರ ಕೊಳದಲ್ಲಿ...

ಅನುಭವದ ಬೆಳಕಲ್ಲಿ 
ತಿರುತಿರುಗಿ ನೋಡಿದಷ್ಟೂ
ನೆನಪುಗಳು ಮಧುರ 
ಮನದಾಳದಲ್ಲಿ ...

ನಾಳೆಗಳ ಅಂಗಳದಿ ನಿಂತು 
ಮತ್ತೆ ತಿರುಗಲು ಇಂದಿನೆಡೆಗೆ 
ಮನಕರಗಿ ಕಣ್ಣು ಹನಿಯುವುದು
ನೆನಪುಗಳ ಬಿಸಿಯಲ್ಲಿ..

7 comments:

  1. ಚಂದದ ಕವನ ಮೇಡಂ...
    ಮನದಾಳದ ನೆನಪುಗಳು ಚೆನ್ನಾಗಿ ಮೂಡಿ ಬಂದಿದೆ..

    ReplyDelete
  2. Thank you..:)madam emba padaprayogakke arhalalla enisuttide. Sandhya enni saaku...

    ReplyDelete
  3. ನಿಮ್ಮ ಬ್ಲಾಗಿನಲ್ಲಿ ಬಂದ ಕವಿತೆಗಳಲ್ಲಿ ಇದು
    "ದಿ ಬೆಸ್ಟ್"......... !!

    ಇನ್ನಷ್ಟು ಬರೆಯಿರಿ......

    ReplyDelete
  4. ಧನ್ಯವಾದ... ಇಂತಹ ಪ್ರೋತ್ಸಾಹವಿದ್ದರೆ ಅದು ಸಾದ್ಯ ಸರ್ :)

    ReplyDelete
  5. ಹಿಮಪಾತ ಚಿತ್ರದಲ್ಲಿ ಹಾಡೊಂದಿದೆ.."ತೆರೆಯೋ ಮಂಜಿನ ತೆರೆಯ..ಒಹ್ ಉದಯ ಒಹ್ ಉದಯ" ಹಾಗೆ ಹೃದಯದ ಮಂಜಿನ ತೆರೆದಾಗ ಅಲ್ಲಿನ ಹಸಿರು ನೆನಪುಗಳು ಆ ವಾತವರಣದಲ್ಲಿ ಮೂಡಿಸುವ ನಂದನವನ ಓಡಾಡಲಿಕ್ಕಷ್ಟೇ ಅಲ್ಲಾ ಮೃದು ಹೂಗಳನ್ನು ಹೆಕ್ಕಿ ಮುಡಿ ಏರಿಸಿಕೊಳ್ಳಲಿಕ್ಕು ಚಂದ...ಸುಂದರ ಭಾವ ತುಂಬಿದ ಸಾಲುಗಳು...ಎಸ್ ಪಿ.

    ReplyDelete